ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಅಕ್ಕ ಯಾರು ಗೊತ್ತಾ? ಅಂಜಲಿಗಿಂತಲೂ ಅಂದಗಾತಿ, ಸಾರಾಗಿಂತಲೂ ಸಖತ್ ಕ್ಯೂಟ್ ಈಕೆ

Sachin Tendulkar Sister and Family: ಸಚಿನ್ ರಮೇಶ್ ತೆಂಡೂಲ್ಕರ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕ್ರಿಕೆಟ್ ದೇವರು ಎಂದೇ ಜಗತ್ಪ್ರಸಿದ್ಧಿ ಪಡೆದಿರುವ ಈ ಆಟಗಾರ ದಾಖಲೆಗಳ ಮೇಲೆ ದಾಖಲೆ ಬರೆದಾತ. ಭಾರತೀಯ ರಾಷ್ಟ್ರೀಯ ತಂಡದ ನಾಯಕರಾಗಿದ್ದ ಸಚಿನ್, ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ಸಾರ್ವಕಾಲಿಕ ವಿಶ್ವದ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪ್ರಶಂಸಿಸಲ್ಪಟ್ಟ ಸಚಿನ್ ತೆಂಡೂಲ್ಕರ್ ODI ಮತ್ತು ಟೆಸ್ಟ್ ಕ್ರಿಕೆಟ್ ಎರಡರಲ್ಲೂ ಕ್ರಮವಾಗಿ 18,000 ರನ್ ಮತ್ತು 15,000 ರನ್‌ ಗಳಿಸಿ, ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

2 /8

ಅಂದಹಾಗೆ ನಾವಿಂದು ಈ ವರದಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಸಹೋದರಿ ಬಗ್ಗೆ ಮಾಹಿತಿ ನೀಡಲಿದ್ದೇವೆ.

3 /8

ತೆಂಡೂಲ್ಕರ್ ಏಪ್ರಿಲ್ 24, 1973ರಂದು ಬಾಂಬೆಯ ದಾದರ್‌’ನಲ್ಲಿರುವ ನಿರ್ಮಲ್ ನರ್ಸಿಂಗ್ ಹೋಮ್‌’ನಲ್ಲಿ ಜನಿಸಿದರು. ಅವರ ತಂದೆ ರಮೇಶ್ ತೆಂಡೂಲ್ಕರ್ ಮರಾಠಿ ಭಾಷೆಯ ಕಾದಂಬರಿಕಾರ ಮತ್ತು ಕವಿಯಾಗಿದ್ದರೆ, ಅವರ ತಾಯಿ ರಜನಿ ವಿಮಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು.

4 /8

ತೆಂಡೂಲ್ಕರ್‌ ಅವರಿಗೆ ಮೂವರು ಒಡಹುಟ್ಟಿದವರಿದ್ದಾರೆ. ನಿತಿನ್, ಅಜಿತ್ ಮತ್ತು ಸವಿತಾ. ಇವರೆಲ್ಲರೂ ರಮೇಶ್ ತೆಂಡೂಲ್ಕರ್ ಅವರ ಮೊದಲ ಹೆಂಡತಿ ಮಕ್ಕಳು.

5 /8

ತೆಂಡೂಲ್ಕರ್ ತನ್ನ ಹನ್ನೊಂದನೇ ವಯಸ್ಸಿನಲ್ಲಿ ಕ್ರಿಕೆಟ್‌’ಗೆ ಕಾಲಿಟ್ಟರು, 15 ನವೆಂಬರ್ 1989 ರಂದು ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಹದಿನಾರನೇ ವಯಸ್ಸಿನಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಅವರು, 24 ವರ್ಷಗಳ ಕಾಲ ಮುಂಬೈ ದೇಶೀಯವಾಗಿ ಮತ್ತು ಭಾರತವನ್ನು ಅಂತಾರಾಷ್ಟ್ರೀಯವಾಗಿ ಪ್ರತಿನಿಧಿಸಿದರು.

6 /8

ವೃತ್ತಿಜೀವನದ ಅರ್ಧದಾರಿಯಲ್ಲೇ, ಡಾನ್ ಬ್ರಾಡ್‌ಮನ್‌ ನಂತರ ಸಾರ್ವಕಾಲಿಕ ಎರಡನೇ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಮತ್ತು ವಿವ್ ರಿಚರ್ಡ್ಸ್ ನಂತರ ಸಾರ್ವಕಾಲಿಕ ಎರಡನೇ ಶ್ರೇಷ್ಠ ODI ಬ್ಯಾಟ್ಸ್‌ಮನ್ ಎಂಬ ಶ್ರೇಯಾಂಕವನ್ನು ವಿಸ್ಡನ್ ನೀಡಿತು.

7 /8

ತೆಂಡೂಲ್ಕರ್ ಅವರು 2011 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. ಈ ಹಿಂದೆ 2003ರ ವಿಶ್ವಕಪ್‌ನಲ್ಲಿ "ಪ್ಲೇಯರ್ ಆಫ್ ದಿ ಟೂರ್ನಮೆಂಟ್" ಎಂಬ ಬಿರುದು ಕೂಡ ಪಡೆದಿದ್ದರು. ಅಷ್ಟೇ ಅಲ್ಲದೆ, ಭಾರತ ಸರ್ಕಾರದಿಂದ ತೆಂಡೂಲ್ಕರ್ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅರ್ಜುನ ಪ್ರಶಸ್ತಿ (1994), ಖೇಲ್ ರತ್ನ ಪ್ರಶಸ್ತಿ (1997), ಪದ್ಮಶ್ರೀ (1998), ಮತ್ತು ಪದ್ಮವಿಭೂಷಣ (2008) ಇವರ ಮಡಿಲು ಸೇರಿವೆ.

8 /8

ನವೆಂಬರ್ 2013 ರಲ್ಲಿ ತೆಂಡೂಲ್ಕರ್ ತಮ್ಮ ಕೊನೆಯ ಪಂದ್ಯವನ್ನು ಆಡಿದ ಬಳಿಕ, ಪ್ರಧಾನಮಂತ್ರಿಗಳ ಕಾರ್ಯಾಲಯವು ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡುವ ನಿರ್ಧಾರವನ್ನು ಪ್ರಕಟಿಸಿತು. ಈ ಗೌರವ ಸ್ವೀಕರಿಸಿದ ಮೊದಲ ಕ್ರೀಡಾಪಟು ಮತ್ತು ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದರು.