ವೃಶ್ಚಿಕ ರಾಶಿಯಲ್ಲಿ ಮಂಗಳ ಗೋಚರ, ರುಚಕ ಸೇರಿದಂತೆ 4 ರಾಜಯೋಗಗಳ ರಚನೆ, 5 ರಾಶಿಗಳಿಗೆ ಭಾರಿ ಧನ ಪ್ರಾಪ್ತಿ ಯೋಗ!

Mangal Gochar In Scorpio 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಮಂಗಳನ ವೃಶ್ಚಿಕ ರಾಶಿ ಗೋಚರ ನೆರವೇರಿದೆ. ಮಂಗಳನ ಈ ಗೋಚರದಿಂದ ರುಚಕ್ ಸೇರಿದಂತೆ 4 ರಾಜಯೋಗಗಳು ನಿರ್ಮಾಣಗೊಂಡಿದೆ. ಮಂಗಳವು ತನ್ನ ಸ್ವ ರಾಶಿಯಲ್ಲಿ ಇರುವುದರಿಂದ ಪ್ರಬಲ  ರಾಜಯೋಗವು ಸೃಷ್ಟಿಯಾಗುತ್ತದೆ ಮತ್ತು ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ, ಆಯುಷ್ಮಾನ್ ರಾಜಯೋಗ ಮತ್ತು ಆದಿತ್ಯ ಮಂಗಲ ರಾಜಯೋಗವೂ ಕೂಡ ನಿರ್ಮಾಣಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮಂಗಳ ಸಂಕ್ರಮಣದಿಂದ ರೂಪುಗೊಂಡಿರುವ ರಾಜಯೋಗಗಳು ಮೇಷ ಸೇರಿದಂತೆ 5 ರಾಶಿಗಳ ಜನರಿಗೆ ವರ್ಷಾಂತ್ಯದಲ್ಲಿ  ವೃತ್ತಿ, ವ್ಯಾಪಾರ, ಉದ್ಯೋಗದಲ್ಲಿ ಅಪಾರ ಪ್ರಗತಿ ಮತ್ತು ಧನಲಾಭವನ್ನು ತಂದುಕೊಡಲಿದೆ. (Spiritual News In Kannada)

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇಂದು ನವೆಂಬರ್ 16, 2023. ಇಂದು ಬೆಳಗ್ಗೆ 10:46 ಕ್ಕೆ ಮಂಗಳ ವೃಶ್ಚಿಕ ರಾಶಿಗೆ ಪ್ರವೇಶಿಸಿದೆ. ಮಂಗಳದ ಈ ಸಂಕ್ರಮಣದಿಂದ ರುಚಕ್ ಸೇರಿದಂತೆ 4 ರಾಜ್ಯಯೋಗಗಳು ನಿರ್ಮಾಣಗೊಂಡಿವೆ. ಹಾಗೆ ನೋಡಿದರೆ ಸ್ವರಾಶಿಯಾಗಿರುವ ವೃಶ್ಚಿಕ ರಾಶಿಗೆ ಮಂಗಳನ ಆಗಮನದಿಂದ ಆಯುಷ್ಮಾನ್ ರಾಜಯೋಗ ನಿರ್ಮಾಣಗೊಳ್ಳುತ್ತದೆ. ಇದರ ಜೊತೆಗೆ, ಸೂರ್ಯನು ವೃಶ್ಚಿಕ ರಾಶಿಯಲ್ಲಿ ಆಗಮಿಸಿದ್ದು ಮತ್ತು ಬುಧ ಈಗಾಗಲೇ ಈ ವೃಶ್ಚಿಕ ರಾಶಿಯಲ್ಲಿ ವಿರಾಜಮಾನನಾಗಿರುವ ಕಾರಣ ಪ್ರಬಲ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಜೊತೆಗೆ ವೃಶ್ಚಿಕ ರಾಶಿಯಲ್ಲಿ ಸೂರ್ಯ ಮತ್ತು ಮಂಗಳ ಒಟ್ಟಿಗೆ ಇರುವುದರಿಂದ ಆದಿತ್ಯ ಮಂಗಲ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಮಂಗಳ ಗ್ರಹದ ಈ ಗೋಚರ ಮತ್ತು ರಾಜಯೋಗದ ಪ್ರಭಾವದಿಂದಾಗಿ, 5 ರಾಶಿಗಳ ಜನರಿಗೆ ಹಣಕಾಸು ಮತ್ತು ವೃತ್ತಿಯ ವಿಷಯದಲ್ಲಿ ಸಾಕಷ್ಟು ಪ್ರಯೋಜನಗಳು ಪ್ರಾಪ್ತಿಯಾಗಲಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ, ಧನ ಕುಬೇರ ಕೃಪೆಯಿಂದ ಈ ಜನರಿಗೆ ಭಾರಿ ಧನಲಾಭ-ಭಾಗ್ಯೋದಯ ಯೋಗ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಸಿಂಹ ರಾಶಿ: ಈ ಮಂಗಳ ಸಂಕ್ರಮವು ಸಿಂಹ ರಾಶಿಯವರಿಗೆ ಸಾಕಷ್ಟು ಮಂಗಳಕರವಾಗಿರುತ್ತದೆ. ಮಂಗಳವು ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಆಗಮಿಸಿದ್ದಾನೆ. ಹೀಗಾಗಿ ಈ ಅವಧಿಯು ಹಣಕಾಸಿನ ವಿಷಯಗಳಲ್ಲಿ ಬಹಳ ಪ್ರಯೋಜನಗಳು ನಿಮಗೆ ಸಿಗಳಿವೆ. ಈ ಅವಧಿಯಲ್ಲಿ, ನೀವು ಮಾಡುವ ಯಾವುದೇ ಹೂಡಿಕೆಯಿಂದ ನೀವು ಲಾಭವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡಬಹುದು ಅಂದರೆ ನೀವು ಯಾವುದೇ ಆಸ್ತಿ ಇತ್ಯಾದಿಗಳನ್ನು ಖರೀದಿಸಬಹುದು. ಇದಲ್ಲದೆ, ಈ ಸಮಯ ವಾಹನವನ್ನು ಖರೀದಿಸಲು ಸಹ ಸೂಕ್ತವಾಗಿದೆ. ಈ ಅವಧಿಯು ವೃತ್ತಿಜೀವನಕ್ಕೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಈ ಅವಧಿಯಲ್ಲಿ, ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಸಾಕಷ್ಟು ಪ್ರಗತಿ ಹೊಂದುವಿರಿ. ಅಲ್ಲದೆ, ಈ ವಾರ ಉದ್ಯಮಿಗಳು ಲಾಭ ಮತ್ತು ಸಮೃದ್ಧಿಯನ್ನು ಹೊಂದಲಿದ್ದಾರೆ.

2 /6

ಕನ್ಯಾ ರಾಶಿ: ಮಂಗಳನ ಈ ಸಂಕ್ರಮವು ಕನ್ಯಾ ರಾಶಿಯ ಜನರಿಗೆ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ಅಲ್ಲದೆ, ಈ ಗ್ರಹಗಳ ಸಂಯೋಜನೆಯು ನಿಮ್ಮ ಕುಟುಂಬ ಜೀವನಕ್ಕೆ ತುಂಬಾ ಅನುಕೂಲಕರವಾಗಿರುತ್ತದೆ. ನಿಮ್ಮ ಕಿರಿಯ ಸಹೋದರರೊಂದಿಗೆ ನಿಮ್ಮ ಸಂಬಂಧವು ಮೊದಲಿಗಿಂತ ಉತ್ತಮಗೊಳ್ಳಲಿದೆ. ಈ ಅವಧಿಯು ಈ ರಾಶಿಗಳ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುವಿರಿ. ಇದಲ್ಲದೆ, ನಿಮ್ಮ ತಂದೆ ಮತ್ತು ಶಿಕ್ಷಕರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.

3 /6

ವೃಶ್ಚಿಕ ರಾಶಿ: ಮಂಗಳ ನಿಮ್ಮ ರಾಶಿಯ ರಾಶ್ಯಾಧಿಪ ಮತ್ತು ಆತ ತನ್ನ ಸ್ವಂತ ಮನೆಗೆ ಆಗಮಿಸಿದ್ದಾನೆ.  ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿದಲ್ಲಿ ಮಂಗಳನು ​​ಸ್ಥಿರವಾಗಿರಲಿದ್ದಾನೆ. ಈ ಸಂಕ್ರಮಣ ನಿಮಗೆ ಅನೇಕ ವಿಧಗಳಲ್ಲಿ ಫಲಪ್ರದವಾಗಿದೆ. ಪರೀಕ್ಷೆಗಳು ಮತ್ತು ಕ್ರೀಡೆಗಳಲ್ಲಿ ತೊಡಗಿರುವ ಈ ರಾಶಿಗಳ ಜನರಿಗೆ ಇದು ತುಂಬಾ ಮಂಗಳಕರವಾಗಿರುತ್ತದೆ. ಅಲ್ಲದೆ, ಈ ಅವಧಿಯು ಆಸ್ತಿಯ ವಿಷಯದಲ್ಲಿ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ನೀವು ಆಸ್ತಿಯನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ನಿಮ್ಮ ಸಂಗಾತಿಯೊಂದಿಗೆ ನೀವು ಆಸ್ತಿಯನ್ನು ಖರೀದಿಸಬಹುದು.

4 /6

ಮಕರ ರಾಶಿ: ಈ ಮಂಗಳ ಸಂಚಾರವು ಮಕರ ರಾಶಿಯವರಿಗೆ ಆರ್ಥಿಕ ಲಾಭ ತರಲಿದೆ. ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ ಈ ರಾಶಿಚಕ್ರದ ಜನರು ಇದೀಗ ಲಾಭವನ್ನು ಪಡೆಯಲಿದ್ದಾರೆ. ಅಲ್ಲದೆ, ಹಣಕಾಸಿನ ವಿಷಯದಲ್ಲಿ ಈ ಅವಧಿಯು ನಿಮಗೆ ಪ್ರಯೋಜನಕಾರಿಯಾಗಿದೆ. ಹೂಡಿಕೆಗಾಗಿ ನೀವು ಯೋಜನೆಯನ್ನು ಮಾಡಬಹುದು ಅದು ನಿಮಗೆ ಸಾಕಷ್ಟು ಶುಭ ಸಾಬೀತಾಗಲಿದೆ. ಅಲ್ಲದೆ, ಈ ಸಂಚಾರವು ನಿಮ್ಮ ಕುಟುಂಬಕ್ಕೆ ತುಂಬಾ ಒಳ್ಳೆಯದಾಗಿದೆ. ಈ ಅವಧಿಯಲ್ಲಿ ನೀವು ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಂದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಈ ಸಂಚಾರವು ಯಶಸ್ಸನ್ನು ತರುತ್ತದೆ. ಯಾವುದೇ ಕಾನೂನು ಹೋರಾಟಗಳು ನಡೆಯುತ್ತಿದ್ದರೆ, ಈ ಸಮಯದಲ್ಲಿ ಅದರ ನಿರ್ಧಾರವು ನಿಮ್ಮ ಪರವಾಗಿ ಬರಬಹುದು.

5 /6

ಕುಂಭ ರಾಶಿ: ಕುಂಭ ರಾಶಿಯವರಿಗೆ ಈ ಮಂಗಳ ಗೋಚರ ವೃತ್ತಿಪರ ಜೀವನಕ್ಕೆ ತುಂಬಾ ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ನೀವು ನೋಡಬಹುದು. ನೀವು ವ್ಯವಹಾರದಲ್ಲಿ ಗಮನಾರ್ಹ ಲಾಭವನ್ನು ಸಹ ಪಡೆಯುತ್ತೀರಿ. ಮಂಗಳನ ಈ ಸ್ಥಾನವು ನಿಮ್ಮ ರಾಶಿಗೆ ತುಂಬಾ ಶುಭವಾಗಿರಲಿದೆ. ಅಲ್ಲದೆ, ವ್ಯವಹಾರ ವಿಸ್ತರಿಸಲು ನಿಮ್ಮ ವ್ಯಾಪಾರದಲ್ಲಿ ನಿಮ್ಮ ಕಿರಿಯ ಸಹೋದರರನ್ನು ನೀವು ಶಾಮೀಲುಗೊಳಿಸಬಹುದು. 

6 /6

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)