ಮಂತ್ರಾಲಯದ ರಾಯರ ಹುಂಡಿ ಹಣ ಎಣಿಕೆ: 2.12 ಕೋಟಿ ರೂ. ಸಂಗ್ರಹ

Rayara Hundi Collection: ಕಳೆದ 2-3 ತಿಂಗಳಿಗೆ ಹೋಲಿಸಿದರೆ ಮಾರ್ಚ್ ತಿಂಗಳಿನಲ್ಲಿ ರಾಯರ ಹುಂಡಿಗೆ ಕಡಿಮೆ ಪ್ರಮಾಣದ ಕಾಣಿಕೆ ಸಂಗ್ರಹಕವಾಗಿದೆ. ಈ ಹಿಂದೆ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆಯನ್ನು ಭಕ್ತರು ರಾಯರ ಹುಂಡಿಗೆ ಸಮರ್ಪಿಸಿದ್ದರು.

ರಾಯಚೂರು: ಗುರು ರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಹುಂಡಿಗಳಲ್ಲಿನ ಎಣಿಕೆ ಕಾರ್ಯ ಮಂಗಳವಾರ ನಡೆದಿದೆ. ಮಾರ್ಚ್‍ನಲ್ಲಿ ಒಟ್ಟು 2.12 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಈ ಪೈಕಿ 2.07 ಕೋಟಿ ರೂ. ಮೌಲ್ಯದ ನೋಟುಗಳು ಮತ್ತು 4.56 ಲಕ್ಷ ರೂ. ಮೌಲ್ಯದ ನಾಣ್ಯಗಳು ಸೇರಿವೆ. ಇದಲ್ಲದೆ 7 ಗ್ರಾಂ ಚಿನ್ನ ಮತ್ತು 571 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ಭಕ್ತರು ರಾಯರ ಹುಂಡಿಗೆ ಅರ್ಪಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

1 /5

ರಾಯರ ಹುಂಡಿ ಎಣಿಕೆ ಕಾರ್ಯ ಹಿನ್ನೆಲೆ ಮಂತ್ರಾಲಯ ಮಠದಲ್ಲಿ ಸಾವಿರಾರು ಭಕ್ತರಿಂದ ಹುಂಡಿ ಎಣಿಕೆ ನಡೆದಿದೆ.

2 /5

ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ 27 ದಿನಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.

3 /5

ಕೇವಲ 27 ದಿನಗಳಲ್ಲಿ ಭಕ್ತರಿಂದ ಗುರು ರಾಯರ ಸನ್ನಿಧಿಗೆ ಕೋಟಿ ಕೋಟಿ ರೂ. ದೇಣಿಗೆ ಹರಿದು ಬಂದಿದೆ.

4 /5

ಹುಂಡಿಗಳಿಗೆ ಕಳೆದ 27 ದಿನಗಳಿಂದ ಸಲ್ಲಿಕೆಯಾದ ಕಾಣಿಕೆಯನ್ನು ಎಣಿಕೆ ಮಾಡಲಾಗಿದೆ. ಒಟ್ಟು 2 ಕೋಟಿ 11 ಲಕ್ಷ 96 ಸಾವಿರ ರೂ., 7 ಗ್ರಾಂ ಚಿನ್ನ ಮತ್ತು 571 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

5 /5

ಬೇಸಿಗೆ ರಜೆ ಶುರುವಾದ ಹಿನ್ನೆಲೆ ರಾಯರ ಮಠಕ್ಕೆ ದೇಶ-ವಿದೇಶಗಳಿಂದ ಭಕ್ತ ಸಾಗರ ಹರಿದು ಬರುತ್ತಿದೆ.