ಮೊಗ್ಗಿನ ಮನಸ್ಸಿನಿಂದ ಕೆಜಿಎಫ್‌ವರೆಗೆ ರಾಕಿಂಗ್ ಸ್ಟಾರ್ ಯಶ್ 14 ವರ್ಷಗಳ ಸಿನಿಪಯಣ!!

14 YEARS OF YASHISM: ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಯಶ್‌ ಹೀರೋ ಆಗಿ 14 ವರ್ಷಗಳ ಸಿನಿಪಯಣವನ್ನು ಕಂಪ್ಲೀಟ್‌ ಮಾಡಿದ್ದಾರೆ. 

14 YEARS OF YASHISM: ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಯಶ್‌ ಹೀರೋ ಆಗಿ 14 ವರ್ಷಗಳ ಸಿನಿಪಯಣವನ್ನು ಕಂಪ್ಲೀಟ್‌ ಮಾಡಿದ್ದಾರೆ. ಇಂದು ನಟ ಯಶ್​ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಅವರ ಕಾಲ್​ಶೀಟ್​ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಕಾಯುತ್ತಿದ್ದಾರೆ. 

1 /5

ಕೆಜಿಎಫ್​: ಚಾಪ್ಟರ್​ 2 ಸಿನಿಮಾ ಮಾಡಿದ ದಾಖಲೆಗಳ ಸುರಿಮಳೆಗೆ ಯಶ್​ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಭಾರತ ಮಾತ್ರವಲ್ಲದೇ ವಿದೇಶದಲ್ಲೂ ರಾಕಿಭಾಯ್‌ ಹವಾ ಜೋರಾಗಿದೆ. ಆದರೆ 14 ವರ್ಷಗಳ ಹಿಂದೆ ಯಶ್‌ ಸ್ಟಾರ್‌ಡಮ್‌ ಹೀಗೆ ಇರಲಿಲ್ಲ. 

2 /5

ಕನ್ನಡ ಚಿತ್ರರಂಗಕ್ಕೆ ಅವರು ಆಗತಾನೇ ಕಾಲಿಟ್ಟಿದ್ದರು. ಯಶ್​ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ಮೊಗ್ಗಿನ ಮನಸ್ಸು. ಈ ಚಿತ್ರ ತೆರೆಕಂಡು ಇಂದಿಗೆ, ಅಂದರೆ ಜುಲೈ 18ಕ್ಕೆ ಬರೋಬ್ಬರಿ 14 ವರ್ಷ ಕಳೆದಿದೆ. 

3 /5

ಯಶ್​ ಪಾಲಿಗೆ ಈ ದಿನ ವೆರಿ ವೆರಿ ಸ್ಪೆಷಲ್‌. ಈ ದಿನವನ್ನು ರಾಕಿಂಗ್​ ಸ್ಟಾರ್ ಯಶ್‌ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆ ಬಳಿಕ ಚಂದನವನದಲ್ಲಿ ಹಂತಹಂತವಾಗಿ ಬೆಳೆದು ಬಂದರು​. 

4 /5

ಮೊದಲು ಸೀರಿಯಲ್​ಗಳಲ್ಲಿ ನಟಿಸಿ, ನಂತರ ಚಿತ್ರರಂಗಕ್ಕೆ ಬಂದ ಯಶ್‌ ಇದೀಗ ಪ್ಯಾನ್​ ಇಂಡಿಯಾ ಹೀರೋ. ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಬಂದ ಯಶ್‌ ಇದೀಗ ಸೂಪರ್‌ ಸ್ಟಾರ್‌ ಆಗಿದ್ದಾರೆ. 

5 /5

ಮೊಗ್ಗಿನ ಮನಸ್ಸು ಸಿನಿಮಾ 2008ರ ಜುಲೈ 18ರಂದು ತೆರೆ ಕಂಡಿತು. ಯಶ್‌ ಹೀರೋ ಆಗಿ ಅವರ ಸಿನಿಪಯಣ ಶುರು ಮಾಡಿ ಇಂದಿಗೆ 14 ವರ್ಷ ತುಂಬಿದೆ. ಅದಕ್ಕಾಗಿ ಎಲ್ಲರೂ ಅವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ.