Kantara: ರಿಷಬ್ ಶೆಟ್ಟಿಗೆ ಹೊಸ ಬಿರುದು: ಹಿಂದೆಂದೂ ಕೇಳಿರದ-ಮುಂದೆಂದೂ ನೀಡಲಾಗದ ‘ಪಟ್ಟ’ವಿದು

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಬರುತ್ತಿರುವ ಸಿನಿಮಾಗಳು ಕರ್ನಾಟಕವನ್ನು ಜಗತ್ತೇ ಹಿಂತಿರುಗಿ ನೋಡುವಂತೆ ಮಾಡುತ್ತಿದೆ. ಇಂತಹ ಸಿನಿಮಾಗಳ ಸಾಲಿನಲ್ಲಿ ಕಾಂತಾರ ಕೂಡ ಒಂದು.

Rishab Shetty: ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಬರುತ್ತಿರುವ ಸಿನಿಮಾಗಳು ಕರ್ನಾಟಕವನ್ನು ಜಗತ್ತೇ ಹಿಂತಿರುಗಿ ನೋಡುವಂತೆ ಮಾಡುತ್ತಿದೆ. ಇಂತಹ ಸಿನಿಮಾಗಳ ಸಾಲಿನಲ್ಲಿ ಕಾಂತಾರ ಕೂಡ ಒಂದು.

1 /5

ಕಾಂತಾರ ಸಿನಿಮಾ ಹಿಟ್ ಮಾತ್ರವಲ್ಲ, ಸಂಸ್ಕೃತಿಯ ಅನಾವರಣವನ್ನೂ ಮಾಡಿ ಜನಮನ ಗೆದ್ದಿದೆ. ಇದೀಗ ಈ ಸಿನಿಮಾದ ರೂವಾರಿಯಾದ ರಿಷಬ್ ಶೆಟ್ಟಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ. ಕಾಂತಾರಾ ಮೂಲಕ ಮನೆ ಮಾತಾಗಿರುವ ರಿಷಬ್ ಶೆಟ್ಟಿಯವರಿಗೆ ಡಿವೈನ್ ಸ್ಟಾರ್ ಎಂದು ಕರೆಯೋಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.

2 /5

ಕಾಂತಾರ ಸಿನಿಮಾದ ಕೊನೆಯ 20 ನಿಮಿಷಗಳನ್ನು ಕಂಡ ಜನರು ರಿಷಬ್ ಅದ್ಭುತ ನಟನೆಗೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಈ ಸಿನಿಮಾದ ಮೂಲಕ ರಿಷಬ್ ಶೆಟ್ಟಿ ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಕೂಡ ಆಗಿದ್ದಾರೆ.

3 /5

ಇನ್ನು ಸ್ಟಾರ್‌ ನಟರಿಗೆ ಅಭಿಮಾನಿಗಳು ಬಿರುದುಗಳನ್ನು ಕೊಡುವುದು ಸಾಮಾನ್ಯ. ಅದೇ ರೀತಿ ರಿಷಬ್ ಅಭಿಮಾನಿಗಳು ಸಹ ಅವರಿಗೆ ವಿಧ ವಿಧವಾಗಿ ಬಿರುದನ್ನು ನೀಡಿದ್ದಾರೆ.

4 /5

ಒಬ್ಬರು ಡಿವೈನ್ ಸ್ಟಾರ್ ಎಂದು ಕರೆದರೆ ಇನ್ನೊಬ್ಬರು ಕರಾವಳಿ ಚಕ್ರವರ್ತಿ ಎಂದು ಕರೆದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

5 /5

ಸದ್ಯ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದು, ಈಗಾಗಲೇ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.