Big forehead lucky in Samudrika Shastra: ದೇವರು ಪ್ರತಿಯೊಬ್ಬ ವ್ಯಕ್ತಿಯ ದೇಹದ ಪ್ರತಿಯೊಂದು ಭಾಗಗಳನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಿರುತ್ತಾನೆ. ಸಾಮುದ್ರಿಕ ಶಾಸ್ತ್ರದಲ್ಲಿ, ದೇಹದ ಅಂಗಗಳ ರಚನೆ ಮತ್ತು ಗುರುತುಗಳು ಇತ್ಯಾದಿಗಳನ್ನು ನೋಡುವ ಮೂಲಕ ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಹೇಳಬಹುದು ಎಂದು ಉಲ್ಲೇಖಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ದೇವರು ಪ್ರತಿಯೊಬ್ಬ ವ್ಯಕ್ತಿಯ ದೇಹದ ಪ್ರತಿಯೊಂದು ಭಾಗಗಳನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಿರುತ್ತಾನೆ. ಸಾಮುದ್ರಿಕ ಶಾಸ್ತ್ರದಲ್ಲಿ, ದೇಹದ ಅಂಗಗಳ ರಚನೆ ಮತ್ತು ಗುರುತುಗಳು ಇತ್ಯಾದಿಗಳನ್ನು ನೋಡುವ ಮೂಲಕ ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಹೇಳಬಹುದು ಎಂದು ಉಲ್ಲೇಖಿಸಲಾಗಿದೆ.
ಇನ್ನು ವ್ಯಕ್ತಿಯ ಭವಿಷ್ಯವನ್ನು ಅಂಗೈ ಮತ್ತು ಹಣೆಯನ್ನು ನೋಡುವ ಮೂಲಕಗೂ ಹೇಳಲಾಗುತ್ತದೆ. ಹಣೆಯ ಆಕಾರ ಮತ್ತು ಹಣೆಯ ಮೇಲೆ ರೂಪುಗೊಂಡ ಗುರುತುಗಳ ಬಗ್ಗೆ ಜ್ಯೋತಿಷ್ಯದಲ್ಲಿ ಬಹಳಷ್ಟು ಹೇಳಲಾಗಿದೆ. ಅದರ ಪ್ರಕಾರ ಕೆಲವು ಜನರನ್ನು ಬಹಳ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ.
ಹಣೆಯ ಮೇಲೆ ಸ್ವಸ್ತಿಕ ಚಿಹ್ನೆ ಇರುವವರು ಬಹಳ ಕಡಿಮೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವ ವ್ಯಕ್ತಿಯು ತನ್ನ ಹಣೆಯ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಹೊಂದಿರುತ್ತಾರೋ ಅವರು ತುಂಬಾ ಅದೃಷ್ಟಶಾಲಿಗಳಾಗಿರುತ್ತಾರೆ. ಹಣೆಯ ಮೇಲೆ ಈ ಗುರುತು ಇರುವ ವ್ಯಕ್ತಿ ಅಪಾರ ಸಂಪತ್ತಿನ ಒಡೆಯರೂ ಆಗುತ್ತಾರೆ.
ಇನ್ನು ಕೆಲವರಿಗೆ ತುಂಬಾ ಅಗಲವಾದ ಮತ್ತು ದುಂಡಾಗಿರುವ ಹಣೆ ಇರುತ್ತದೆ. ಅಗಲವಾದ ಹಣೆಯಿರುವ ಜನರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಸಾಮುದ್ರಿಕ ಶಾಸ್ತ್ರವು ಈ ಬಗ್ಗೆ ಉಲ್ಲೇಖಿಸಿದೆ. ತಮ್ಮ ಜೀವನದಲ್ಲಿ ಗೌರವ, ಪ್ರತಿಷ್ಠೆ, ಹಣ ಮತ್ತು ಸಂಪತ್ತು ಎಲ್ಲವನ್ನೂ ಪಡೆಯುತ್ತಾರೆ.
ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಹಣೆಯ ಮೇಲೆ ಬಿಲ್ಲು ಅಥವಾ ಅರ್ಧಚಂದ್ರನ ಆಕಾರವನ್ನು ಹೊಂದಿರುವ ಜನರು ಸಹ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಈ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಾರೆ ಮತ್ತು ಬಹಳಷ್ಟು ಹಣವನ್ನು ಗಳಿಸುತ್ತಾರೆ.
ಹಣೆಯ ಮೇಲೆ ಚಂದ್ರನ ಚಿಹ್ನೆಯನ್ನು ಹೊಂದಿರುವ ಜನರು, ಉದ್ಯೋಗದ ಬದಲು ವ್ಯಾಪಾರದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.
ಹಣೆಯ ಮೇಲೆ ಶಂಖದ ಗುರುತಿರುವ ಜನರು ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿರುತ್ತಾರೆ. ಈ ಜನರು ಅದೃಷ್ಟವಂತರಷ್ಟೇ ಅಲ್ಲದೆ, ಸಮತೋಲಿತ ಮತ್ತು ಆದರ್ಶ ಜೀವನವನ್ನು ನಡೆಸುತ್ತಾರೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)