Raw Mango Benefits: ನಿತ್ಯ ಒಂದು ಗ್ಲಾಸ್ ಮಾವಿನ ಪಾನಕ ಸೇವಿಸುವಿದರಿಂದ ಹಲವು ಲಾಭಗಳಿವೆ

Raw Mango Pana Benefits - ಕಚ್ಚಾ ಮಾವಿನ ಕಾಯಿಯಿಂದ ತಯಾರಿಸಲಾಗುವ ಪಾನಕ ಬೇಸಿಗೆಯಲ್ಲಿ ಹೆಚ್ಚಿನ ಜನರಿಗೆ ಪ್ರಿಯವಾಗಿದೆ. ಇದು ದೇಹದಲ್ಲಿನ ನೀರಿನ ಕೊರತೆಯಾಗುವುದನ್ನು ಇದರಿಂದ ನೀವು ಸನ್ ಬರ್ನ್ ನಂತಹ ಕಾಲೋಚಿತ ಕಾಯಿಲೆಗಳನ್ನು ತಪ್ಪಿಸಬಹುದು. ಇದಲ್ಲದೆ, ಮಾವಿನ ಪಾನಕ  ಕುಡಿಯುವುದರ ಹಲವು ಆರೋಗ್ಯಕರ ಲಾಭಗಳಿವೆ.

ನವದೆಹಲಿ: Raw Mango Pana Benefits - ಬೇಸಿಗೆ ಕಾಲದಲ್ಲಿ ಸಿಗುವ ಹಣ್ಣುಗಳ ವಿಷಯ ಬಂದಾಗ ಆ ಲಿಸ್ಟ್ ನಲ್ಲಿ ಮಾವಿನ ಹಣ್ಣು ಅಗ್ರಸ್ಥಾನದಲ್ಲಿರುತ್ತದೆ. ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಾಗುವುದಿಲ್ಲ . ಮಾವಿನ ಹಣ್ಣಿನ ವಿಶೇಷತೆ ಎಂದರೆ ಮಾವಿನ ಹಣ್ಣಿನ ಸಂಪೂರ್ಣ ಸೀಸನ್ ನಲ್ಲಿ ನೀವು ಇದನ್ನು ಕಚ್ಚಾ ಹಾಗೂ ಹಣ್ಣು ರೂಪದಲ್ಲಿ ಇದನ್ನು ಸೇವಿಸಬಹುದು. ಬೇಸಿಗೆ ಕಾಲದಲ್ಲಿ ಸೇವಿಸಲಾಗುವ ಅತ್ಯಂತ ಜನಪ್ರೀಯ ತಂಪು ಪಾನೀಯ ಪದಾರ್ಥಗಳಲ್ಲಿ ಮಾವಿನ ಕಾಯಿಯ ಪಾನಕ ಕೂಡ ಒಂದು. ಏಕೆಂದರೆ ಇದು ಕೇವಲ ನಿಮ್ಮ ಬಾಯಾರಿಕೆಯನ್ನು ಮಾತ್ರ ತಡೆಯದೆ ಶರೀರವನ್ನು (Health Tips) ಒಳಗಿನಿಂದ ಕೂಲ್-ಕೂಲ್ ಆಗಿಡುತ್ತದೆ. 

 

ಇದನ್ನೂ ಓದಿ-Fenugreek Seed Water: ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತ್ಯದ ನೀರು ಸೇವಿಸಿ, ಈ ರೋಗಗಳಿಂದ ದೂರವಿರಿ

 

ನಿತ್ಯ ಒಂದು ಗ್ಲಾಸ್ ಮಾವಿನ ಪಾನಕ ಸೇವಿಸಿ
ಬೇಸಿಗೆ ಕಾಲದಲ್ಲಿ ಶರೀರದಿಂದ ಬೆವರು ಹೆಚ್ಚು ಹೊರಬರುವುದರಿಂದ ಬೆವರಿನ ಜೊತೆಗೆ ದೇಹಕ್ಕೆ ಬೇಕಾಗುವ ಲವಣಗಳಾದ ಸೋಡಿಯಂ, ಐರನ್ ಹಾಗೂ ಇಲೆಕ್ಟ್ರೋಲೈಟ್ ಗಳೂ ಕೂಡ ಶರೀರದಿಂದ ಹೊರಹೋಗುತ್ತವೆ. ಇದರಿಂದ ಅತಿ ಹೆಚ್ಚು ದಣಿವು ಹಾಗೂ ಶಕ್ತಿಯ ಕೊರತೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಮಾವಿನ ಪಾನಕ ಶರೀರಕ್ಕೆ ಬೇಕಾಗುವ ಈ ಪೋಷಕ ತತ್ವಗಳ ಕೊರತೆಯನ್ನು ನೀಗಿಸುತ್ತದೆ. ಹೇಗಾಗಿ ಬೇಸಿಗೆ ಕಾಲದಲ್ಲಿ ನಿತ್ಯ ಒಂದು ಗ್ಲಾಸ್ ಮಾವಿನ ಪಾನಕ ಸೇವಿಸುವುದು ನಿಮಗೆ ಹಲವು ರೀತಿಯ ಲಾಭಗಳನ್ನು ನೀಡುತ್ತದೆ. 

 

(ಯಾವುದೇ ಒಂದು ಉಪಾಯವನ್ನು ಮಾಡುವ ಮೊದಲು ತಜ್ಞರ ಸಲಹೆ ಪಡೆಯಲು ಸೂಚಿಸಲಾಗುತ್ತದೆ. ಏಕೆಂದರೆ ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಪುಷ್ಟೀಕರಿಸುವದಿಲ್ಲ)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಪಚನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ - ಬೇಸಿಗೆ ಕಾಲದಲ್ಲಿ ಹಸಿವೆ ಕಡಿಮೆಯಾಗುವುದು ಸಾಮಾನ್ಯ ಹಾಗೂ ಯಾವೊಂದು ದಿನ ಹೆವಿ ಊಟ ಮಾಡಿದರೆ ಅಥವಾ ಕಾರದ ಪದಾರ್ಥಗಳನ್ನು ಸೇವಿಸಿದರೆ ಡಯಾರಿಯಾ, ಹೊಟ್ಟೆ ಬಿಗಿತ, ಅಸಿಡಿಟಿ, ಹೊಟ್ಟೆನೋವು ಹಾಗೂ ಗ್ಯಾಸ್ ಗಳಂತಹ ಪಚನಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಚ್ಚಾ ಮಾವಿನ ಕಾಯಿಯಲ್ಲಿ ಪ್ಯಾಕ್ಟೀನ್ ಹೇರಳ ಪ್ರಮಾಣದಲ್ಲಿರುತ್ತದೆ. ಇದು ಪಚನಕ್ರಿಯೆಗೆ ಸಹಾಯಕಾರಿ ಅಂಶವಾಗಿದೆ ಮತ್ತು ಇದು ಹೊಟ್ಟೆಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ನಿವಾರಿಸುತ್ತದೆ.

2 /5

2. ರೋಗಗಳ ವಿರುದ್ಧ ಹೋರಾಡುವ ಕ್ಷಮತೆಯನ್ನು ಬಲಪಡಿಸುತ್ತದೆ - ಮಾವಿನ ಪಾನಕದಲ್ಲಿ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ ಗಳಿರುತ್ತವೆ. ಇವು ಬ್ಯಾಕ್ಟೀರಿಯಾಗೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಹೋರಾಡುವ ಕ್ಷಮತೆಯನ್ನು ನೀಡುತ್ತವೆ. ಜೊತೆಗೆ ಇದರಲ್ಲಿ ಮೆಲಿಕ್, ಸಿಟ್ರಿಕ್ ಹಾಗೂ ಆಕ್ಸಾಲಿಕ್ ನಂತನ ಹಲವು ಆಮ್ಲಗಳಿರುತ್ತವೆ. ಇವು ನಿಮ್ಮ ಲೀವರ್ ಅನ್ನು ಆರೋಗ್ಯಕರವಾಗಿರಿಸುತ್ತವೆ.  ಇದಲ್ಲದೆ ಇದು ಜಾಂಡಿಸ್ ನಂತ ಕಾಯಿಲೆಯಿಂದಲೋ ಕೂಡ ರಕ್ಷಣೆ ಒದಗಿಸುತ್ತವೆ.  

3 /5

3. ಕಣ್ಣಿನ ಆರೋಗ್ಯಕ್ಕೆ ಉತ್ತಮ - ಕಚ್ಚಾ ಮಾವಿನ ಪಾನಕದಲ್ಲಿ ವಿಟಮಿನ್ ಎ ಕೂಡ ಹೇರಳ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಇದು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಾದ ಕಣ್ಣಿನ ಪೊರೆ, ಇರುಳು ಕುರುಡುತನ ಹಾಗೂ ಒಣ ಕಣ್ಣಿನ ಸಮಸ್ಯೆಯಿಂದ ರಕ್ಷಣೆ ಕೂಡ ಒದಗಿಸುತ್ತದೆ.

4 /5

4. ಕ್ಯಾನ್ಸರ್ ನಿಂದ ರಕ್ಷಣೆ ಕೂಡ ಒದಗಿಸುತ್ತದೆ - ಮಾವಿನ ಪಾನಕದಲ್ಲಿ ಸಿಗುವ ವಿಟಮಿನ್ ಸಿ ಶರೀರದ ಜೊತೆಗೆ ಪ್ರತಿಕ್ರಿಯೆ ನೀಡುತ್ತದೆ. ಇದರಿಂದ ಶರೀರದಲ್ಲಿ ಆಂಟಿ ಆಕ್ಸಿಡೆಂಟ್ ಗಳು ನಿರ್ಮಾಣಗೊಳ್ಳುತ್ತವೆ. ಈ ಆಂಟಿ ಆಕ್ಸಿಡೆಂಟ್ ಗಳ ಸಹಾಯದಿಂದ ಬ್ರೆಸ್ಟ್ ಕ್ಯಾನ್ಸರ್, ಸ್ಕಿನ್ ಕ್ಯಾನ್ಸರ್, ಕೊಲನ್ ಕ್ಯಾನ್ಸರ್ ಗಳಂತಹ ಕಾಯಿಲೆಗಳಿಂದ ಪಾರಾಗಬಹುದು.

5 /5

5. ಡಿಪ್ರೆಶನ್ ನಿಂದ ಕಾಪಾಡುತ್ತದೆ- ಇತ್ತೀಚಿನ ದಿನಗಳಲ್ಲಿ ಜನರಲ್ಲಿ ವಿಪರೀತ ಪ್ರಮಾಣದಲ್ಲಿ ಡಿಪ್ರೆಶನ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮಾವಿನ ಕಾಯಿಯ ಪಾನಕದಲ್ಲಿ ಸಿಗುವ ವಿಟಮಿನ್ ಬಿ6 ,  ಮೆದುಳನ್ನು ಒತ್ತಡ ಮುಕ್ತವಾಗಿಸುವ ಹಾರ್ಮೋನ್ ಗಳು ಶರೀರದಲ್ಲಿ ಉತ್ಪತ್ತಿಗೆ ಕಾರಣವಾಗುತ್ತದೆ ಮತ್ತು ಡಿಪ್ರೆಶನ್ ಕಡಿಮೆಯಾಗುತ್ತದೆ.