Rashmika Mandanna: ನಟನೆ ಮಾತ್ರವಲ್ಲ.. ಶಿಕ್ಷಣದಲ್ಲಿಯೂ ಮುಂದಿದ್ದಾರೆ ನಟಿ ರಶ್ಮಿಕಾ.. ಹಾಗಾದ್ರೆ ನ್ಯಾಷನಲ್‌ ಕ್ರಶ್‌ ಓದಿದ್ದೇನು?

Rashmika Mandanna Education: ನ್ಯಾಶನಲ್ ಕ್ರಶ್ ಎಂದೇ ಖ್ಯಾತಿ ಪಡೆದಿರುವ ಸೌತ್‌ನ ಸುಂದರ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಯಾವುದೇ ಗುರುತು ಬೇಕಿಲ್ಲ. ಅವರ ಸರಳತೆ ಮತ್ತು ಅವರ ಅತ್ಯುತ್ತಮ ನಟನೆಯಿಂದಾಗಿ, ಅವರು ಇಂದು ತಮ್ಮ ಅಭಿಮಾನಿಗಳ ಹೃದಯವನ್ನು ಆಳುತ್ತಿದ್ದಾರೆ..‌ 
 

1 /5

ನಟಿ ರಶ್ಮಿಕಾ ಮಂದಣ್ಣ ಕೇವಲ 17ರ ಹರೆಯದಲ್ಲಿ ನಟನಾ ಜಗತ್ತಿಗೆ ಕಾಲಿಟ್ಟಿದ್ದಾರೆ.. ಅಲ್ಲದೇ ಇವರು ಶಿಕ್ಷಣದಲ್ಲಿಯೂ ಮುಂದಿದ್ದಾರೆ.. ಹಾಗಾದರೆ ನ್ಯಾಷನಲ್‌ ಕ್ರಶ್‌ ಓದಿದ್ದೇನು?    

2 /5

ರಶ್ಮಿಕಾ ತಮ್ಮ ಶಾಲಾ ಶಿಕ್ಷಣವನ್ನು ಕೂರ್ಗ್ ಪಬ್ಲಿಕ್ ಸ್ಕೂಲ್‌ನಲ್ಲಿ ಮುಗಿಸಿದ್ದಾರೆ.. ಇದರ ನಂತರ, ನಟಿ ಪ್ರಿ-ಯೂನಿವರ್ಸಿಟಿ ಕೋರ್ಸ್‌ನ್ನು ಮೈಸೂರಿನ 'ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಆರ್ಟ್ಸ್' ನಲ್ಲಿ ಮಾಡಿಕೊಂಡಿದ್ದಾರೆ..   

3 /5

'ಪುಷ್ಪಾ'ದ ಶ್ರೀವಲ್ಲಿ ಬೆಂಗಳೂರಿನಲ್ಲೇ ಕಾಲೇಜು ಓದಿದ್ದಾರೆ. ಹೌದು ನಟಿ ರಶ್ಮಿಕಾ 'ಎಂಎಸ್ ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್' ನಲ್ಲಿ ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿಗಳನ್ನು ಪಡೆದಿದ್ದಾರೆ..   

4 /5

ತನ್ನ ಕಾಲೇಜು ದಿನಗಳಲ್ಲಿ, ರಶ್ಮಿಕಾ 2014 ರಲ್ಲಿ ಕ್ಲೀನ್ ಮತ್ತು ಕ್ಲಿಯರ್ ಫ್ರೆಶ್ ಫೇಸ್ ಸ್ಪರ್ಧೆಯನ್ನು ಗೆದ್ದಿದ್ದರು. ಇದರ ನಂತರ, ಅವರು ಕ್ರಮೇಣ ಮಾಡೆಲಿಂಗ್ ಜಗತ್ತನ್ನು ಪ್ರವೇಶಿಸಿದರು..   

5 /5

2016 ರಲ್ಲಿ ರಕ್ಷಿತ್‌ ಶೆಟ್ಟಿ ಅಭಿನಯದ ಕನ್ನಡ ಚಲನಚಿತ್ರ ಕಿರಿಕ್ ಪಾರ್ಟಿ ಮೂಲಕ ರಶ್ಮಿಕಾ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು.