ರಕ್ಷಾಬಂಧನ್ ವಿಶೇಷ: ತಮ್ಮ ಸಹೋದರಿಯರೊಂದಿಗೆ ಪ್ರಸಿದ್ಧ ಭಾರತೀಯ ಕ್ರಿಕೆಟಿಗರು

ಸಹೋದರಿಯರಿಲ್ಲದೆ ಎಲ್ಲರ ಜೀವನ ಅಪೂರ್ಣ ಎಂದೆನಿಸುತ್ತದೆ. ಭಾರತೀಯ ಕ್ರಿಕೆಟಿಗರು ಸಹ ತಮ್ಮ ಸಹೋದರಿಯರ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರನ್ನು ಗೌರವಿಸುತ್ತಾರೆ.

  • Aug 03, 2020, 14:27 PM IST

ನವದೆಹಲಿ: ಸಹೋದರ-ಸಹೋದರಿಯರ ಬಾಂಧವ್ಯವನ್ನು ಹೆಚ್ಚಿಸುವ ಪವಿತ್ರ ಹಬ್ಬ ರಕ್ಷಾ ಬಂಧನವನ್ನು ಇಂದು ಆಚರಿಸಲಾಗುತ್ತಿದೆ, ಪ್ರತಿಯೊಬ್ಬರ ಜೀವನದಲ್ಲಿ ಸಹೋದರಿಯರ ಪಾತ್ರ ವಿಶೇಷವಾಗಿರುತ್ತದೆ.  ಈ ದಿನ ಸಹೋದರ ಮತ್ತು ಸಹೋದರಿಯ ನಡುವೆ ಪ್ರೀತಿ ಮತ್ತು ಗೌರವದ ಒಂದು ನೋಟ ಕಂಡುಬರುತ್ತದೆ. ಜನಸಾಮಾನ್ಯರಂತೆ ಭಾರತೀಯ ಕ್ರಿಕೆಟಿಗರು ಸಹ ತಮ್ಮ ಸಹೋದರಿಯರನ್ನು ಪ್ರೀತಿಸುತ್ತಾರೆ. ಕ್ರಿಕೆಟಿಗರ ಹೋರಾಟದ ದಿನಗಳಲ್ಲಿ ಅವರ ಜೊತೆಗೆ ಪೋಷಕರ ಜೊತೆಗೆ ಸಹಜವಾಗಿಯೇ ಅವರ ಸಹೋದರ-ಸಹೋದರಿಯರು ಬೆಂಬಲವಾಗಿರುತ್ತಾರೆ. 

1 /7

ವೀರೇಂದ್ರ ಸೆಹ್ವಾಗ್ ಅವರ ಹೆತ್ತವರ ಮೂರನೇ ಮಗು, ಅವರಿಗೆ 2 ಹಿರಿಯ ಸಹೋದರಿಯರಿದ್ದಾರೆ, ಅವರ ಹೆಸರುಗಳು ಮಂಜು ಮತ್ತು ಅಂಜು. 

2 /7

ಕ್ರಿಕೆಟ್‌ನ ಮಾಸ್ಟರ್ ಬ್ಲಾಸ್ಟರ್‌ಗೆ ಸವಿತಾ ಎಂಬ ಸಹೋದರಿ ಇದ್ದಾರೆ. ಸಚಿನ್ ಪ್ರಕಾರ, ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧವು ಸಮಯದೊಂದಿಗೆ ಹೆಚ್ಚು ಆಳವಾಗುತ್ತದೆ.  

3 /7

ಕ್ರಿಕೆಟ್ ಪ್ರವಾಸದಿಂದಾಗಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ರಕ್ಷಾಬಂಧನ ಸಮಯದಲ್ಲಿ ಸಾಮಾನ್ಯವಾಗಿ ಮನೆಯಲ್ಲಿ ಉಳಿಯುವುದಿಲ್ಲ. ಅವರಿಗೆ ಜುಹಿಕಾ ಬುಮ್ರಾ ಎಂಬ ಸಹೋದರಿ ಇದ್ದಾರೆ.

4 /7

ಭಾರತೀಯ ಬ್ಯಾಟ್ಸ್‌ಮನ್ ಸುರೇಶ್ ರೇನಾ  ಅವರಿಗೆ ರೇಣು ಎಂಬ ಸಹೋದರಿ ಇದ್ದಾರೆ. 

5 /7

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಹಿರಿಯ ಸಹೋದರಿ ಭಾವನಾ ಅವರು ಪ್ರತಿವರ್ಷ ತಮ್ಮ ಸಹೋದರನಿಗೆ ರಾಖಿಯನ್ನು ಕಟ್ಟಲು ಬಯಸುತ್ತಾರೆ. ಆದರೆ ಕೊಹ್ಲಿಗೆ ಅವರ ಬ್ಯುಸಿ ಶೆಡ್ಯೂಲ್ ನಿಂದಾಗಿ ಪ್ರತಿವರ್ಷ ಇದು ಸಾಧ್ಯವಾಗುವುದಿಲ್ಲವಂತೆ. ಕೊಹ್ಲಿ ಅವರ ಸಹೋದರಿ ಅವರನ್ನು ಪ್ರೀತಿಯಿಂದ 'ಚಿಕು' ಎಂದು ಕರೆಯುತ್ತಾರೆ.  

6 /7

ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಧೋನಿ ತನ್ನ ಸಹೋದರಿ ಚಾವ್ಲಾ ತುಂಬಾ ಪ್ರೀತಿಸುತ್ತಾರೆ. ಅವರ ಅಕ್ಕ ಜಯಂತಿ ಅವರ ವೃತ್ತಿಜೀವನದಲ್ಲಿ ಮಹಿಗೆ ಸಾಕಷ್ಟು ಬೆಂಬಲ ನೀಡಿದ್ದರು. ಐಪಿಎಲ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಕ್ರೀಡಾಂಗಣದಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ.

7 /7

ಭಾರತೀಯ ಟೆಸ್ಟ್ ತಂಡದ ಉಪನಾಯಕ ಯಶಸ್ಸಿನ ಹಿಂದೆ ಅವರ ಸಹೋದರಿ ಅಪೂರ್ವಾ ಇದ್ದಾರೆ ಎಂದರೆ ತಪ್ಪಾಗಲಾರದು. ತನ್ನ ಸಹೋದರಿಯ ಪ್ರೀತಿ ಮತ್ತು ಬೆಂಬಲ ವಿಶ್ವದ ಅತ್ಯುತ್ತಮ ಕೊಡುಗೆ ಎಂದು ರಹಾನೆ ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ.