Holi ಹಬ್ಬದ ಬಳಿಕ ರಾಹು-ಶುಕ್ರ ಯುತಿ, 3 ರಾಶಿಗಳ ಜನರಿಗೆ ಅದೃಷ್ಟವೋ ಅದೃಷ್ಟ.. ಪ್ರತಿ ಕ್ಷೇತ್ರದಲ್ಲೂ ಯಶಸ್ಸು!

Rahu-Shukra In Aris: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯಲ್ಲಿ ರಾಹು ಮತ್ತು ಶುಕ್ರರ ಮೈತ್ರಿ ನೆರವೇರಲಿದ್ದು ಇದರಿಂದ ಮೂರು ರಾಶಿಗಳ ಜನರಿಗೆ ಭಾರಿ ಅದೃಷ್ಟ ಒಲಿದು ಬರಲಿದೆ. ಭಾರಿ ಧನಲಾಭ ಹಾಗೂ ಭಾಗ್ಯೋದಯದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಆ 3 ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
 

Rahu-Shukra Conjunction: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಪರಿವರ್ತಿಸುತ್ತವೆ, ಅವುಗಳ ಪರಿಣಾಮವು ಮಾನವ ಜೀವನ ಮತ್ತು ಭೂಮಿಯ ಮೇಲೆ ಗೋಚರಿಸುತ್ತದೆ. ಈ ಬಾರಿ, ಹೋಳಿ ಹಬ್ಬದ ಕೇವಲ ನಾಲ್ಕೇ ನಾಲ್ಕು ದಿನಗಳ ಬಳಿಕ ಅಂದರೆ ಮಾರ್ಚ್ 12 ರಂದು ಮೇಷ ರಾಶಿಯಲ್ಲಿ ಶುಕ್ರ ಮತ್ತು ರಾಹುಗಳ ಯುತಿ ನೆರವೇರಲಿದೆ. ಇಲ್ಲಿ ಎರಡೂ ಗ್ರಹಗಳು 6 ಏಪ್ರಿಲ್ 2023 ರವರೆಗೆ ಒಟ್ಟಿಗೆ ಇರಲಿವೆ. ಈ ಗ್ರಹಗಳ ಯುತಿ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಆದರೆ 3 ಮೂರು ರಾಶಿಗಳ ಜನರಿಗೆ ಈ ಅವಧಿಯಲ್ಲಿ ಹಠಾತ್ ಧನಲಾಭ ಮತ್ತು ಪ್ರಗತಿಯ ಸಾಧ್ಯತೆಗಳು ಕಂಡುಬರುತ್ತಿವೆ. ಈ ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ಈ ದಿನ ಶನಿಯ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ಎಂಟ್ರಿ, ಬುಧಾದಿತ್ಯ ಯೋಗದಿಂದ 3 ರಾಶಿಗಳಿಗೆ ಆಕಸ್ಮಿಕ ಧನಪ್ರಾಪ್ತಿಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /3

ಮಿಥುನ ರಾಶಿ : ರಾಹು ಮತ್ತು ಶುಕ್ರರ ಸಂಯೋಜನೆಯು ಮಿಥುನ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಏಕಾದಶ ಭಾವದಲ್ಲಿ ಈ ಮೈತ್ರಿಯು ರೂಪುಗೊಳ್ಳುತ್ತಿದೆ. ಇದು ಆದಾಯ ಮತ್ತು ಲಾಭದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹಿಂದೆ ಮಾಡಿದ ಕೆಲಸಗಳು ಈ ಅವಧಿಯಲ್ಲಿ ನಿಮಗೆ ಭಾರಿ ಪ್ರಯೋಜನಗಳನ್ನು ನೀಡಲಿವೆ. ಇದರೊಂದಿಗೆ, ನೀವು ಹಣಕಾಸಿನ ವಿಷಯಗಳಲ್ಲಿ ಮತ್ತು ವ್ಯವಹಾರದಲ್ಲಿ ಅದೃಷ್ಟವನ್ನು ಪಡೆಯುತ್ತೀರಿ. ನೀವು ಈ ಹಿಂದೆ ಯಾವುದಾದರೊಂದು ಹೂಡಿಕೆ ಮಾಡಿದ್ದರೆ ಅದು ನಿಮಗೆ ಸಾಕಷ್ಟು ಲಾಭವನ್ನು ನೀಡಲಿದೆ. ಅಲ್ಲದೆ, ಈ ಸಮಯದಲ್ಲಿ ನೀವು ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಬಹುದು, ಅದು ನಿಮಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ. ಈ ಅವಧಿಯಲ್ಲಿ ನಿಮಗೆ, ಷೇರುಗಳು, ಬೆಟ್ಟಿಂಗ್ ಮತ್ತು ಲಾಟರಿಗಳಲ್ಲಿ ಲಾಭ ಸಿಗುವ ಸಾಧ್ಯತೆ ಇದೆ.  

2 /3

ತುಲಾ ರಾಶಿ : ರಾಹು ಮತ್ತು ಶುಕ್ರನ ಸಂಯೋಜನೆ ನಿಮಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಈ ಮೈತ್ರಿಯು ನಿಮ್ಮ ರಾಶಿಯ ಸಪ್ತಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದು ವೈವಾಹಿಕ ಜೀವನ ಮತ್ತು ಪಾರ್ಟ್ನರ್ಶಿಪ್ ಸ್ಥಳವೆಂದು ಪರಿಗಣಿಸಲಾಗುತ್ತದೆ. ನೀವು ಈ ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವಿರಿ. ಅಲ್ಲದೆ, ಪಾರ್ಟ್ನರ್ಶಿಪ್  ಕೆಲಸದಲ್ಲಿ ನೀವು ಉತ್ತಮ ಲಾಭವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯ ಇರುತ್ತದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ಹವ್ಯಾಸಗಳು ಮತ್ತು ಮನರಂಜನೆಯ ಸಾಧನಗಳನ್ನು ನೀವು ಪಡೆಯುತ್ತೀರಿ. ಇದರೊಂದಿಗೆ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಇರಲಿದೆ.  

3 /3

ಮೀನ ರಾಶಿ : ಶುಕ್ರ ಮತ್ತು ರಾಹುವಿನ ಸಂಯೋಜನೆಯು ಮೀನ ರಾಶಿಯವರಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ದ್ವಿತೀಯ ಭಾವದಲ್ಲಿ  ಈ ಮೈತ್ರಿಯು ರೂಪುಗೊಳ್ಳಲಿದೆ. ಜೋತಿಷ್ಯದಲ್ಲಿ ಇದನ್ನು ಸಂಪತ್ತು ಮತ್ತು ಮಾತಿನ ಸ್ಥಳವೆಂದು ಪರಿಗಣಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ಹಠಾತ್ ವಿತ್ತೀಯ ಲಾಭವನ್ನು ಪಡೆಯಬಹುದು. ಅಲ್ಲದೆ, ನಿಮ್ಮ ಎಲ್ಲಾ ಆಸೆಗಳು ಈ ಅವಧಿಯಲ್ಲಿ ಈಡೇರಲಿವೆ.ಹಣಕಾಸಿನ ವಿಷಯಗಳಲ್ಲಿ ನೀವು ಭಾರಿ ಪ್ರಗತಿ ಸಾಧಿಸುವಿರಿ. ನೀವು ಕಾಲಕಾಲಕ್ಕೆ ಹಣಕಾಸಿನ ಪ್ರಯೋಜನಗಳನ್ನು ಸಹ ಪಡೆಯಬಹುದು. ಇದರೊಂದಿಗೆ, ಈ ಅವಧಿಯಲ್ಲಿ ನಿಮ್ಮ ವಾಣಿಯ ಪ್ರಭಾವ ಕಂಡುಬರಲಿದೆ. ಇದರಿಂದಾಗಿ ಜನರು ನಿಮ್ಮಿಂದ ಪ್ರಭಾವಿತರಾಗುತ್ತಾರೆ. ಆದರೆ ಪ್ರಸ್ತುತ ನಿಮ್ಮ ಮೇಲೆ ಸಾಡೇಸಾತಿ ನಡೆಯುತ್ತಿದೆ. ಹೀಗಾಗಿ ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿವಹಿಸಬೇಕು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)