Bhagwant Mann Marriage : ನವ ಜೀವನಕ್ಕೆ ಕಾಲಿಟ್ಟ ಪಂಜಾಬ್ ಸಿಎಂ ಭಗವಂತ್ ಮಾನ್ : ಇಲ್ಲಿದೆ ಫೋಟೋಗಳು

ಇದೇ ವೇಳೆ ಸಿಎಂ ಮಾನ್ ಮತ್ತು ಡಾ.ಗುರ್ ಪ್ರೀತ್ ಕೌರ್ ಮದುವೆಯ ಕೆಲವು ಫೋಟೋಗಳು ಇಲ್ಲಿವೆ ನೋಡಿ..

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಡಾ.ಗುರ್ ಪ್ರೀತ್ ಕೌರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿಎಂ ತಮ್ಮ ನಿವಾಸದಲ್ಲಿ ಸರಳ ವಿವಾಹವಾಗಿದ್ದಾರೆ. ಇದೇ ವೇಳೆ ಸಿಎಂ ಮಾನ್ ಮತ್ತು ಡಾ.ಗುರ್ ಪ್ರೀತ್ ಕೌರ್ ಮದುವೆಯ ಕೆಲವು ಫೋಟೋಗಳು ಇಲ್ಲಿವೆ ನೋಡಿ..

 

 

1 /6

ಇದು ಸಿಎಂ ಭಗವಂತ್ ಮಾನ್ ಅವರ ಎರಡನೇ ಮದುವೆ. ಅವರು ತಮ್ಮ ಮೊದಲ ಪತ್ನಿಗೆ 6 ವರ್ಷಗಳ ಹಿಂದೆ ವಿಚ್ಛೇದನ ಪಡೆದರು. ಅವರ ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.

2 /6

ಸಿಎಂ ಭಗವಂತ್ ಮಾನ್ ತಮ್ಮ ಮನೆಯಲ್ಲಿಯೇ ಚಿಕ್ಕ ಖಾಸಗಿ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ. ಈ ಸಮಯದಲ್ಲಿ, ಕೆಲವು ಆಯ್ದ ಗಣ್ಯರು ಮಾತ್ರ ಭಾಗವಹಿಸಿದ್ದಾರೆ. ಆದರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮದುವೆಯ ಮಾನ್ ಜೊತೆ ಕಾಣಿಸಿಕೊಂಡರು. ಅವರು ಭಗವಂತ್ ಮಾನ್ ತಮ್ಮ ಕಿರಿಯ ಸಹೋದರ ಎಂದು ಅಂದುಕೊಂಡಿದ್ದಾರೆ.

3 /6

ಮದುವೆಗೂ ಮುನ್ನ ಸಿ.ಎನ್.ಭಗವಂತ್ ಮಾನ್ ಅವರ ದಾರಿಗೆ ಅವರ ಸೊಸೆಯಂದಿರು ಅಡ್ಡಗಾಲು ಹಾಕಿ ಚೇಷ್ಟೆ ಮಾಡಿದ್ದರು. ಈ ವೇಳೆ ಅವರೊಂದಿಗೆ ಸಿಎಂ ಕೇಜ್ರಿವಾಲ್ ಕೂಡ ಕಾಣಿಸಿಕೊಂಡಿದ್ದಾರೆ.

4 /6

ಸಿಎಂ ಭಗವಂತ್ ಮಾನ್ ಅವರು ಮದುವೆಯಲ್ಲಿ ಗೋಲ್ಡನ್ ಕಲರ್ ಡ್ರೆಸ್ ಧರಿಸಿದ್ದಾರೆ. ಹಾಗೆ,  ಗುರುಪ್ರೀತ್ ಕೌರ್ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದಾರೆ. ಸಿಎಂ ಮಾನ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

5 /6

ಸಿಎಂ ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ ಮತ್ತು ಇತರ ಕುಟುಂಬ ಸದಸ್ಯರು ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

6 /6

ಸಿಎಂ ಮಾನ್ ಮದುವೆಯ ಮೊದಲ ಫೋಟೋ ಹೊರಬಿದ್ದಿದ್ದು, ಇದರಲ್ಲಿ ಸಿಎಂ ಮಾನ್ ಕೈಯಲ್ಲಿ ಕತ್ತಿ ಹಿಡಿದ ಮದುಮಗನಾಗಿ ಕಾಣಿಸಿಕೊಂಡಿದ್ದಾರೆ.