Provident Fund - ನೌಕರಿ ಬದಲಾಯಿಸಿದಾಗ ತಕ್ಷಣ PF ಹಣ ಹಿಂಪಡೆಯಬೇಡಿ, ದೊಡ್ಡ ಹಾನಿ ಸಂಭವಿಸುತ್ತದೆ

Provident Fund - ಖಾಸಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸರಿಯಾದ ಬಡ್ತಿ ಪಡೆಯಲು ಕಾಲ-ಕಾಲಕ್ಕೆ ತಮ್ಮ ನೌಕರಿಯನ್ನು ಬದಲಾಯಿಸುತ್ತಿರುತ್ತಾರೆ. ಇದರಿಂದ ಸ್ಥಾನ ಹಾಗೂ ವೇತನ ಎರಡೂ ಬಡ್ತಿಯಾಗುತ್ತವೆ. 

Provident Fund - ಖಾಸಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸರಿಯಾದ ಬಡ್ತಿ ಪಡೆಯಲು ಕಾಲ-ಕಾಲಕ್ಕೆ ತಮ್ಮ ನೌಕರಿಯನ್ನು ಬದಲಾಯಿಸುತ್ತಿರುತ್ತಾರೆ. ಇದರಿಂದ ಸ್ಥಾನ ಹಾಗೂ ವೇತನ ಎರಡೂ ಬಡ್ತಿಯಾಗುತ್ತವೆ. ಆದರೆ, ಹಲವರು ಒಂದು ಸಂಸ್ಥೆಯನ್ನು ತೊರೆದು ಇನ್ನೊಂದು ಸಂಸ್ಥೆಗೆ ಸೇರಿದರೆ, ಹಳೆ ಸಂಸ್ಥೆಯ PF ಹಣ ಹಿಂಪಡೆದುಕೊಳ್ಳುತ್ತಾರೆ. ಆದರೆ, ನೌಕರಿ ಬದಲಾಯಿಸಿದ ಬಳಿಕ PF ಹಣವನ್ನು ಹಿಂಪಡೆಯದೆ, ಅದನ್ನು ಹೊಸ ಕಂಪನಿಯ PF ಖಾತೆಗೆ ವರ್ಗಾಯಿಸುವುದು ಯಾವಾಗಲು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ಬನ್ನಿ PF ಹಣ ಯಾಕೆ ಹಿಂಪಡೆಯಬಾರದು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ- 7th Pay Commission: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ 5 ಮಹತ್ವದ ಘೋಷಣೆಗಳನ್ನು ಮಾಡಿದ ಕೇಂದ್ರ ಸರ್ಕಾರ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ಜಾಬ್ ಬದಲಾಯಿಸಿದ ಬಳಿಕವೂ PF ಹಣ ಹಿಂಪಡೆಯಬೇಡಿ - ಖಾಸಗಿ ಕ್ಷೇತ್ರದಲ್ಲಿ ಯಾವಾಗಲು ನೌಕರಿ ಬದಲಾಯಿಸುವ ಪರಿಸ್ಥಿತಿ ಇರುತ್ತದೆ. ಹೀಗಿರುವಾಗ, ನೌಕರಿ ಬದಲಾವಣೆಯ ವೇಳೆ PF ಹಣ ಹಿಂಪಡೆಯುವುದು ಎಷ್ಟು ಉಚಿತ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ತಜ್ಞರು ಹೇಳುವ ಪ್ರಕಾರ ನೌಕರಿ ಬದಲಾವಣೆಯ ವೇಳೆ ಪಿಎಫ್ ಹಣ ಹಿಂಪಡೆಯುವುದು ಸರಿಯಾದ ನಿರ್ಣಯವಲ್ಲ. ಇದರಿಂದ ಹಲವು ಹಾನಿಗಳಿವೆ. 

2 /6

2. PF ಹಣ ವರ್ಗಾವಣೆ ಮಾಡಿ - ಜಾಬ್ ಬದಲಾವಣೆಯ ಬಳಿಕ PF ಹಣ ಹಿಂಪಡೆಯುವ ಬದಲು ನೀವು ನಿಮ್ಮ EPF ಹಾಗೂ ಎಂಪ್ಲಾಯಿಸ್ ಪೆನ್ಷನ್ ಸ್ಕೀಮ್ (EPS) ಹಣವನ್ನು ಹೊಸ EPF ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳಿ. ಇದರಿಂದ ನಿಮಗೆ ಸಿಗುವ ಬೆನಿಫಿಟ್ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಜೊತೆಗೆ ಆ ಹಣವನ್ನು ನೀವು ಒಟ್ಟಿಗೆ ಪಡೆಯಬಹುದು.

3 /6

3. ತೆರಿಗೆ ವಿನಾಯ್ತಿ ಮುಗಿದುಹೋಗುತ್ತದೆ - ಪಿಎಫ್ ಹಣವನ್ನು ಮೊದಲೇ ಹಿಂತೆಗೆದುಕೊಳ್ಳುವ ದೊಡ್ಡ ಹಾನಿ ಎಂದರೆ, 5 ವರ್ಷಗಳ ಕೊಡುಗೆ ಪೂರ್ಣಗೊಳ್ಳುವ ಮೊದಲು ನೀವು ಇಪಿಎಫ್‌ನ ಸಂಪೂರ್ಣ ಮೊತ್ತವನ್ನು ಹಿಂತೆಗೆದುಕೊಂಡರೆ, ತೆರಿಗೆ ಪ್ರಯೋಜನವನ್ನು ಕಳೆದುಕೊಳ್ಳುವಿರಿ. ಇಪಿಎಫ್‌ಗೆ ನೀಡುವ ಕೊಡುಗೆಯ ಮೇಲೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ಲಭ್ಯವಿರುವ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಇದೇ ವೇಳೆ  ನೀವು ಪಿಎಫ್ ಖಾತೆಯಲ್ಲಿ ಠೇವಣಿ ಇರಿಸಿದ ಮೊತ್ತವನ್ನು ಒಂದು ಪಿಎಫ್ ಖಾತೆಯಿಂದ ಮತ್ತೊಂದು ಪಿಎಫ್ ಖಾತೆಗೆ ವರ್ಗಾಯಿಸಿದರೆ, ತೆರಿಗೆ ವಿನಾಯಿತಿಯ ಲಾಭವನ್ನು ನೀವು ಪಡೆಯಬಹುದು.

4 /6

4. ಪಿಎಫ್ ಲಾಭಗಳು - EPFO ನಿಯಮಗಳ ಪ್ರಕಾರ, EPS ಸದಸ್ಯ 10 ವರ್ಷಗಳ ಕೊಡುಗೆಯನ್ನು ಪೂರ್ಣಗೊಳಿಸಿದರೆ, ಅವರಿಗೆ 58 ವರ್ಷದ ನಂತರ ಪಿಂಚಣಿ ಸಿಗುತ್ತದೆ. ಒಬ್ಬ ಉದ್ಯೋಗಿ 58 ವರ್ಷಕ್ಕಿಂತ ಮುಂಚೆಯೇ ನಿವೃತ್ತಿ ಹೊಂದಿದ್ದರೆ ಮತ್ತು EPSನಲ್ಲಿ 10 ವರ್ಷಗಳ ಕೊಡುಗೆ ಹೊಂದಿದ್ದರೆ, ಅವನಿಗೆ ಪಿಂಚಣಿ ಕೂಡ ಸಿಗುತ್ತದೆ. ಅಂದರೆ ಇಪಿಎಸ್‌ನಲ್ಲಿ ನೌಕರರ 10 ವರ್ಷಗಳ ಕೊಡುಗೆ ಕಡ್ಡಾಯವಾಗಿದೆ.

5 /6

5. ಈ ರೀತಿ ಲೆಕ್ಕ ಹಾಕಿ - ಒಂದು ವೇಳೆ ನೀವೂ ಕೂಡ EPFO ಪೆನ್ಷನ್ ಲೆಕ್ಕಾಚಾರ ನಡೆಸಬೇಕು ಎಂದರೆ, ಈ ಫ್ರೋಮ್ಯೂಲಾ ಅನುಸರಿಸಿ.  1. ತಿಂಗಳ ಪೆನ್ಷನ್ = (ವೇತನದಲ್ಲಿ ಪೆನ್ಷನ್ ಭಾಗ X ಒಟ್ಟು ನೌಕರಿ ಮಡಿದ ವರ್ಷಗಳು)/70. 2. ನವೆಂಬರ್ 16, 1995 ರ ಬಳಿಕ ನೌಕರಿಗೆ ಸೇರಿದವರಿಗೆ ಅವರ ಪೆನ್ಷನ್ ಗೆ ಒಳಪಡುವ ವೇತನ EPS ಕೊಡುಗೆ ಸ್ಥಗಿತಗೊಳ್ಳುವ 60 ತಿಂಗಳು ಮುಂಚಿತವಾಗಿರಲಿದೆ. ಸದ್ಯ ಗರಿಷ್ಟ ಪೆನ್ಷನ್ ಗೆ ಒಳಪಡುವ ವೇತನ ರೂ.15000 /ತಿಂಗಳು ಆಗಿರಲಿದೆ. ಲೆಕ್ಕಾಚಾರ ಮಾಡುವಾಗ ನೌಕರಿಗೆ ಸೇರ್ಪಡೆಯಾಗಿರುವುದನ್ನು ಪರಿಗಣಿಸಲು ಮರೆಯಬೇಡಿ.

6 /6

6. ಯಾರಿಗೆ ಸಿಗುತ್ತದೆ ಪೆನ್ಷನ್? - 16 ನವೆಂಬರ್ 1995ರಂದು ಅಥವಾ ಅದಕ್ಕಿಂತ ಮುಂಚಿತವಾಗಿ EPS ಯೋಜನೆಯಲ್ಲಿ ಶಾಮೀಲಾಗಿರುವವರಿಗೆ ಪೆನ್ಷನ್ ಲಾಭ ಸಿಗುತ್ತದೆ. ಇದಲ್ಲದೆ ನೌಕರರು ತಮ್ಮ EPF ಖಾತೆಗೆ ನಿರಂತರವಾಗಿ ಹತ್ತು ವರ್ಷಗಳ ಕೊಡುಗೆಯನ್ನು ನೀಡಿರಬೇಕು. ನೌಕರರ ಪರವಾಗಿ ಈ ಕೊಡುಗೆಯನ್ನು ಒಂದು ಅಥವಾ ಒಂದಕ್ಕಿಂತ ಹೆಚ್ಚು ನೌಕರಿದಾತರಿಂದ ಬಂದಿರಬೇಕು.