30 ವರ್ಷಗಳ ಬಳಿಕ ಮತ್ತೆ ಶನಿಯ ಕೃಪಾವೃಷ್ಟಿ, ಕೇಂದ್ರ ತ್ರಿಕೋನ ರಾಜಯೋಗದಿಂದ ಈ ಜನರ ಮನೆಗೆ ಶ್ರೀಹರಿ-ಲಕ್ಷ್ಮಿಯ ಆಗಮನ!

Kendra Trikon Rajyog 2023: ಯಾವುದೇ ಜಾತಕದಲ್ಲಿ 3, 4, 7 ಮತ್ತು 10 ತ್ರಿಕೋನ ಮನೆಗಳಂತೆ, 1, 5 ಮತ್ತು 9 ರಲ್ಲಿರುವ ಗ್ರಹಗಳು ಪರಸ್ಪರ ಸಂಯೋಗವನ್ನು ರಚಿಸಿದರೆ ಮತ್ತು ರಾಶಿಯಲ್ಲಿ ಬದಲಾವಣೆ ಕಂಡುಬಂದರೆ, ಆ ಜಾತಕದಲ್ಲಿ ಕೇಂದ್ರ ಜಾತಕದಲ್ಲಿ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ, ತಾಯಿ ಲಕ್ಷ್ಮಿಯನ್ನು ತ್ರಿಕೋನ ಮನೆಯ ದೇವತೆ ಎಂದು ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇನ್ನೊಂದೆಡೆ  ವಿಷ್ಣುವನ್ನು ಕೇಂದ್ರ ಸ್ಥಾನದ ಅಧಿಪತಿ ಎಂದು ಪೂಜಿಸಲಾಗುತ್ತದೆ.
 

ಬೆಂಗಳೂರು: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿದೇವನು ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಸಾಗುತ್ತಾನೆ, ಶನಿಯ ನಡೆ ತುಂಬಾ ನಿಧಾನ ನಡೆಯಾಗಿದೆ. ಈ ಅವಧಿಯಲ್ಲಿ, ಶನಿಯು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡಲಿದ್ದಾನೆ. ಪ್ರಸ್ತುತ ಶನಿದೇವನು ಕುಂಭ ರಾಶಿಯಲ್ಲಿ ಕುಳಿತಿದ್ದಾನೆ, ಅದು ಅವನ ಸ್ವಂತ ರಾಶಿಯಾಗಿದೆ. ಜನವರಿ 18 ರಂದು ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ ಎಂಬುದು ಇಲ್ಲಿ ಉಲ್ಲೇಖನೀಯ. ಇಂತಹ ಪರಿಸ್ಥಿತಿಯಲ್ಲಿ ಕುಂಭ ರಾಶಿಯಲ್ಲಿ ಶನಿಯ ಸಂಚಾರವು ಈ ಸಮಯದಲ್ಲಿ ಕೇಂದ್ರ ತ್ರಿಕೋನ ರಾಜಯೋಗವನ್ನು ಸೃಷ್ಟಿಸಲಿದೆ. ಹೀಗಿರುವಾಗ ಶನಿಯ ಈ ರಾಜಯೋಗದ ರಚನೆಯಿಂದಾಗಿ ಅನೇಕ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ವಿಶೇಷವಾಗಿ ವೃಷಭ, ಸಿಂಹ ಮತ್ತು ಕುಂಭ ರಾಶಿಯವರಿಗೆ ಈ ಕೇಂದ್ರ ತ್ರಿಕೋನ ರಾಜ್ಯಯೋಗದ ವಿಶೇಷ ಲಾಭಗಳನ್ನು ನೀಡಲಿದೆ.

 

ಇದನ್ನೂ ಓದಿ-ಸೆಪ್ಟೆಂಬರ್ 13 ರಿಂದ ಈ ರಾಶಿಗಳ ಜನರ ಜೀವನದಲ್ಲಿ ಹಣವೋ ಹಣದ ಹರಿವು, ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ತಿಜೋರಿ ತುಂಬಿ ತುಳುಕಲಿದೆ!

 

ಇದನ್ನೂ ನೋಡಿ -

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ವೃಷಭ ರಾಶಿ- ಈ ಕೇಂದ್ರ ತ್ರಿಕೋನ ರಾಜಯೋಗ ವೃಷಭ ರಾಶಿಯ ಜಾತಕದವರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ. ಇದರಿಂದ ವೃಷಭ ರಾಶಿಯವರಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಗಲಿದೆ, ಈ ರಾಶಿಯವರಿಗೆ ಈ ಯೋಗವು ತುಂಬಾ ಮಂಗಳಕರವಾಗಿದೆ. ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳು ಸಿಗುವ ಎಲ್ಲಾ ಸಾಧ್ಯತೆಗಳಿವೆ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ನೀವು ಮುಕ್ತರಾಗುವಿರಿ. ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಧನಲಾಭದ ಎಲ್ಲಾ ಸಾಧ್ಯತೆಗಳು ಕೂಡ ಇವೆ.   

2 /5

ಸಿಂಹ ರಾಶಿ- ಸಿಂಹ ರಾಶಿಯವರಿಗೆ ಈ ಯೋಗವು ಕುಟುಂಬ ಮತ್ತು ಸಂಗಾತಿಯ ಉತ್ತಮ ಬೆಂಬಲವನ್ನು ತರಲಿದೆ, ಈ ಜನರು ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಮತ್ತು ಅವರ ಗೌರವವು ಹೆಚ್ಚಾಗಲಿದೆ. ನ್ಯಾಯಾಲಯದ ಪ್ರಕರಣಗಳಲ್ಲೂ ಯಶಸ್ಸು ಸಿಗಲಿದೆ. ಆಕಸ್ಮಿಕ ಧನಲಾಭದ ಎಲ್ಲಾ ಸಾಧ್ಯತೆಗಳು ಕೂಡ ಗೋಚರಿಸುತ್ತಿವೆ.   

3 /5

ಕುಂಭ ರಾಶಿ- ಕುಂಭ ರಾಶಿಯವರಿಗೆ ಈ ಯೋಗವು ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ ಮತ್ತು ಅವರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಇದರೊಂದಿಗೆ ವೈವಾಹಿಕ ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳು ದೂರಾಗಿ ಸಂಗಾತಿಯ ಕಡೆಗೆ ಆಕರ್ಷಣೆ ಹೆಚ್ಚಾಗಲಿದೆ.  

4 /5

ಯಾವುದೇ ಜಾತಕದಲ್ಲಿ 3, 4, 7 ಮತ್ತು 10 ತ್ರಿಕೋನ ಮನೆಗಳಂತೆ, 1, 5 ಮತ್ತು 9 ರಲ್ಲಿರುವ ಗ್ರಹಗಳು ಪರಸ್ಪರ ಸಂಯೋಗವನ್ನು ರಚಿಸಿದರೆ ಮತ್ತು ರಾಶಿಯಲ್ಲಿ ಬದಲಾವಣೆ ಕಂಡುಬಂದರೆ, ಆ ಜಾತಕದಲ್ಲಿ ಕೇಂದ್ರ ಜಾತಕದಲ್ಲಿ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ, ತಾಯಿ ಲಕ್ಷ್ಮಿಯನ್ನು ತ್ರಿಕೋನ ಮನೆಯ ದೇವತೆ ಎಂದು ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇನ್ನೊಂದೆಡೆ  ವಿಷ್ಣುವನ್ನು ಕೇಂದ್ರ ಸ್ಥಾನದ ಅಧಿಪತಿ ಎಂದು ಪೂಜಿಸಲಾಗುತ್ತದೆ.  

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)