Price Drop 2021: 5 Smartphonesನ ಬೆಲೆಯಲ್ಲಿ ಭಾರೀ ಕಡಿತ; ಹೊಸ ಬೆಲೆಯ ಬಗ್ಗೆ ಇಲ್ಲಿದೆ ಡಿಟೇಲ್ಸ್..

2021ರ ಆರಂಭದಲ್ಲಿಯೇ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಭಾರೀ ಕಡಿತವಾಗಿದೆ.

ನವದೆಹಲಿ  : 2021ರಲ್ಲಿ ಹೊಸಹೊಸ ಸ್ಮಾರ್ಟ್ ಫೋನ್ ಗಳುಮಾರುಕಟ್ಟೆಗೆ  ಲಗ್ಗೆಯಿಟ್ಟಿವೆ. ಕೆಲ ಕಂಪನಿಗಳು ಹೊಸ ಮೊಬೈಲ್ ಗಳನ್ನು ಮಾರುಕಟ್ಟೆಗೆ ತರಲು ಉತ್ಸುಕರಾಗಿದ್ದರೆ, ಇನ್ನು ಕೆಲ ಕಂಪನಿಗಳು ಮೊಬೈಲ್ ದರ ಕಡಿತಗೊಳಿಸಿದೆ. ಹೊಸ ವರ್ಷದ ಆರಂಭದಲ್ಲೇ ಕೆಲ ಮೊಬೈಲ್ ಕಂಪನಿಗಳು ತಮ್ಮ ಸ್ಮಾರ್ಟ್ ಫೋನಿನ ಬೆಲೆಯನ್ನು ಕಡಿತಗೊಳಿಸಿದೆ. ಯಾವ ಸ್ಮಾರ್ಟ್ ಪೋನಿನ ಬೆಲೆ ಕಡಿಮೆಯಾಗಿದೆ ಎನ್ನುವುದರ ಮಾಹಿತಿ ಇಲ್ಲಿದೆ..

1 /5

2021ರಲ್ಲಿ ಎಲ್ಲರಗಿಂತ ಮೊದಲು ನೊಕಿಯಾ ದರ ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಇತರ ಕಂಪನಿಗಳು ತಮ್ಮ ಹೊಸ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ತರುವ ಯೋಜನೆಯಲ್ಲಿದ್ದರೆ, Nokia 5.3ಯ  ದರ ಇಳಿಸುವ ತೀರ್ಮಾನಕ್ಕೆ ಬಂದಿದೆ. ಇದರ ಬೆಲೆಯಲ್ಲಿ ಸುಮಾರು 1000 ರೂ. ಕಡಿಮೆಯಾಗಿದೆ. ಇನ್ನು, 4GB + 64GB ಸ್ಟೋರೆಜ್ ಮಾಡೆಲ್ ಈಗ 12,999ರೂಗಳಿಗೆ ಲಭ್ಯವಿದೆ. 6GB + 64GB ಸ್ಟೋರೆಜ್ ಮಾಡೆಲ್ 14,999ರೂಗಳಿಗೆ ದೊರೆಯುತ್ತದೆ.   

2 /5

ಸ್ಯಾಮ್ ಸಂಗ್ ಕೂಡಾ ಕೆಲ ಮೊಬೈಲ್ ಗಳ ಬೆಲೆಯನ್ನು ಇಳಿಸಿದೆ. Samsung Galaxy A51ಯ ಬೆಲೆಯಲ್ಲಿ ಎರಡು ಸಾವಿರಗಳವರೆಗೆ ಕಡಿತಗೊಳಿಸಿದೆ. 6GB+ 128GB ಸ್ಟೋರೆಜ್ ಮಾಡೆಲ್ ಇನ್ನು 22,999ರೂಗಳ ಬದಲು, 20,999 ರೂಗಳಿಗೆ ಸಿಗಲಿದೆ. Samsung Galaxy A51ನ 8GB + 128 GBಸ್ಟೋರೇಜ್ ಇರುವ ಸ್ಮಾರ್ಟ್ ಫೋನ್ ಈಗ 24,499 ಬದಲು, 22,499ರೂಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

3 /5

ಸ್ಯಾಮ್ ಸಂಗ್ ತನ್ನ ಇನ್ನೊಂದು ಸ್ಮಾರ್ಟ್ ಪೋನಿನ Samsung Galaxy A71ನ ಬೆಲೆಯನ್ನು ಕೂಡಾ ಕಡಿತಗೊಳಿಸಿದೆ. ಮಾಹಿತಿಗಳ ಪ್ರಕಾರ, ಈ ಮೊಬೈಲ್ ನ ಬೆಲೆ ಮೊದಲು 29,499 ರೂಪಾಯಿ ಆಗಿತ್ತು. ಈಗ ಇದೇ ಫೋನನ್ನು ನೀವು 27,499ರೂಗಳಿಗೆ ಖರೀದಿಸಬಹುದು.  

4 /5

Poco M2 6GB +  64GB ಸ್ಟೋರೇಜ್ ನ ಪೋನ್ ಈಗ  9,999ರೂಗಳಿಗೆ ಸಿಗಲಿದೆ.  ಇದಕ್ಕೂ ಮೊದಲು ಇದು10,999 ರೂಗಳಿಗೆ ಮಾರಾಟವಾಗುತ್ತಿತ್ತು.  Poco M2 6GB +  128GB ಸ್ಟೋರೇಜ್ ನ ಪೋನಿನ ಬೆಲೆ  10,999 ರೂ. ಈ ಫೋನಿನ ಬೆಲೆಯಲ್ಲಿ 1,500 ರೂಗಳಷ್ಟು ಕಡಿಮೆ ಮಾಡಲಾಗಿದೆ.  

5 /5

Poco C3ಯ 4GB RAM ಮತ್ತು  64GB ಸ್ಟೋರೇಜ್ ನ ಪೋನ್ ಈಗ 8,499 ರೂಗಳಲ್ಲಿ ಲಭ್ಯವಿದೆ. ಇದರ ಬೆಲೆಯಲ್ಲಿ 500 ರೂ. ಅನ್ನುಕಡಿತಗೊಳಿಸಲಾಗಿದೆ.