Hair Dye Oil: ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೆಲವು ನೈಸರ್ಗಿಕ ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿದೆ.
Natural Hair Dye Oil: ನೀವು ಬಿಳಿ ಕೂದಲಿನ ಸಮಸ್ಯೆಯಿಂದ ಬೇಸತ್ತಿದ್ದೀರಾ? ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ನಾಲ್ಕೇ ನಾಲ್ಕು ಪದಾರ್ಥಗಳನ್ನು ಬಳಸಿ ನಿಮ್ಮ ಕೂದಲನ್ನು ಸುಲಭವಾಗಿ ಕಡು ಕಪ್ಪಾಗಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಕೆಲವರಲ್ಲಿ ಮುಜುಗರವನ್ನು ಸಹ ಉಂಟುಮಾಡುತ್ತದೆ. ಆದರೆ, ನೀವು ನಿಮ್ಮ ಮನೆಯಲ್ಲಿರುವ ನಾಲ್ಕೇ ನಾಲ್ಕು ಪದಾರ್ಥಗಳನ್ನು ಬಳಸಿ ಬಿಳಿ ಕೂದಲಿಗೆ ಗುಡ್ ಬೈ ಹೇಳಿ ಕಡು ಕಪ್ಪಾದ ಕೂದಲನ್ನು ನಿಮ್ಮದಾಗಿಸಬಹುದು.
ಮನೆಯಲ್ಲಿಯೇ ಹೇರ್ ಡೈ ತಯಾರಿಸಲು ನಿಮಗೆ ಬೇಕಾಗುವ ಪದಾರ್ಥಗಳು:- * ಮೆಂತ್ಯ * ಕಾಫಿ ಪುಡಿ * ಇಂಡಿಗೊ ಎಲೆ * ಎಳ್ಳೆಣ್ಣೆ
ಮೆಂತ್ಯ ಕಾಳುಗಳು ಕೂದಲಿನ ಬೆಳವಣಿಗೆಗೆ ಅನುಕೂಲವಾದ ಹಾಗೂ ಕೂದಲನ್ನು ಕಡು ಕಪ್ಪಾಗಿಸುವ ಶಕ್ತಿಯನ್ನು ಹೊಂದಿದೆ. ಅಷ್ಟೇ ಅಲ್ಲ, ಇದು ತಲೆ ಬುರುಡೆ, ಕಣ್ಣುಗಳನ್ನು ತಂಪಾಗಿಸುವಲ್ಲಿಯೂ ಪರಿಣಾಮಕಾರಿ ಆಗಿದೆ.
ಕಾಫಿ ಬೀಜ ಪ್ರಕೃತಿಯಲ್ಲಿ ನೇರವಾಗಿ ಸಿಗುವ ಪದಾರ್ಥ. ಇದರ ಬಳಕೆಯಿಂದ ಕೂದಲು ಬುಡದಿಂದಲೂ ಗಟ್ಟಿಯಾಗಲು ಸಹಕಾರಿ ಆಗಿದೆ. ಜೊತೆಗೆ ಮಾಯಿಶ್ಚರ್ ಆಗಿರಲು ಸಹಾಯಕವಾಗಿದೆ.
ಇಂಡಿಗೊ ಎಲೆಗಳು ಕೂಡ ಪ್ರಾಕೃತಿಕವಾಗಿ ಸಿಗುವ ಒಂದು ಗಿಡದ ಎಲೆ. ಇದು ಕೂದಲಿಗೆ ಒಳ್ಳೆಯ ಬಣ್ಣ ನೀಡುವುದರ ಜೊತೆಗೆ ಕೂದಲ ಬೆಳವಣಿಗೆಗೂ ಸಹಕಾರಿ ಆಗಿದೆ.
ಎಳ್ಳೆಣ್ಣೆಯನ್ನು ಕೂದಲ ಬೆಳವಣಿಗೆಗಾಗಿಯೇ ಬಳಸಲಾಗುತ್ತದೆ. ಇದು ಕೂದಲನ್ನು ಪೋಷಿಸುವ ಜೊತೆಗೆ ಚರ್ಮದಲ್ಲಿರುವ ಸಮಸ್ಯೆಗಳನ್ನು ನಿವಾರಿಸಿ ತಲೆಹೊಟ್ಟನ್ನು ನಿವಾರಿಸುತ್ತದೆ. ಜೊತೆಗೆ ಕೂದಲು ಕಪ್ಪಾಗಲು ಕೂಡ ಪ್ರಯೋಜನಕಾರಿ ಆಗಿದೆ.
ಮೆಂತ್ಯ ಕಾಳುಗಳನ್ನು ಕಪ್ಪಾಗುವವರೆಗೂ ಹುರಿದು ಪುಡಿ ಮಾಡಿ, ಇದರಲ್ಲಿ ಕಾಫಿ ಪುಡಿ, ಇಂಡಿಗೊ ಎಲೆ ಪುಡಿಯನ್ನು ಎಳ್ಳೆಣ್ಣೆಯಲ್ಲಿ ಬೆರೆಸಿಡಿ. ನಂತರ ನೀವು ಸಾಮಾನ್ಯವಾಗಿ ತೆಂಗಿನೆಣ್ಣೆ ಬಳಸುವಂತೆಯೇ ಈ ಎಣ್ಣೆಯನ್ನು ಬಳಸಿ.
ಈ ಹೋಂಮೇಡ್ ಹೇರ್ ಡೈ ಆಯಿಲ್ ಅನ್ನು ವಾರಕ್ಕೊಮ್ಮೆ ಬಳಸಿದರೂ ಸಹ ನಿಮ್ಮ ಕೂದಲು ಬಿಳಿಯಾಗುವುದನ್ನು ತಪ್ಪಿಸಬಹುದು.
ಬಿಳಿ ಕೂದಲು ಹೆಚ್ಚಿದ್ದರೆ ಒಂದೇ ಬಾರಿಗೆ ಈ ಎಣ್ಣೆ ಹಚ್ಚುವುದರಿಂದ ಕೂದಲು ಹೆಚ್ಚು ಕಪ್ಪಾಗದೆ ಇರಬಹುದು. ಆದರೆ, ನಿಯಮಿತವಾಗಿ ಮೂರ್ನಾಲ್ಕು ವಾರಗಳವರೆಗೆ ಮನೆಯಲ್ಲಿಯೇ ತಯಾರಿಸಿದ ಈ ಹೇರ್ ಡೈ ಆಯಿಲ್ ಬಳಸುವುದರಿಂದ ಕೂದಲು ಕಡು ಕಪ್ಪಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.