ಗುರುವಿನ ರಾಶಿಯಲ್ಲಿ ಪವರ್ಫುಲ್ ರಾಜಯೋಗ ನಿರ್ಮಾಣ, 3 ರಾಶಿಗಳ ಜನರಿಗೆ ಭಾರಿ ಧನಲಾಭದ ಜೊತೆಗೆ ಭಾಗ್ಯೋದಯದ ಯೋಗ!

Powerful Rajyog: ಮೀನ ರಾಶಿಗೆ ದೇವಗುರು ಬೃಹಸ್ಪತಿ ಅಧಿಪತಿ, ಈ ಬಾರಿ ಮೀನ ರಾಶಿಯಲ್ಲಿ ಬುದಾದಿತ್ಯ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು, ಇದು 3 ರಾಶಿಗಳ ಜನರ ಭಾಗ್ಯೋದಯ ಹಾಗೂ ಧನಲಾಭಕ್ಕೆ ಕಾರಣವಾಗಲಿದೆ. ಆ ಮೂರು ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

Budhaditya Rajyog 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಒಂದು ನಿರ್ದಿಷ್ಟ ಸಮಯದಲ್ಲಿ ಸಂಕ್ರಮಿಸುವ ಮೂಲಕ ಶುಭ ಮತ್ತು ಅಶುಭ ಯೋಗವನ್ನು ರೂಪಿಸುತ್ತವೆ. ಈ ಯೋಗಗಳ ಪರಿಣಾಮ ಮಾನವ ಜೀವನದ ಮೇಲೆ ಮತ್ತು ಭೂಮಿಯ ಮೇಲೆ ಗೋಚರಿಸುತ್ತದೆ. ಮಾರ್ಚ್ 16 ರಂದು ಸೂರ್ಯ ಮತ್ತು ಬುಧ ಸಂಯೋಜನೆಯಿಂದ ಬುಧಾದಿತ್ಯ ರಾಜಯೋಗವು ರೂಪುಗೊಳ್ಳಲಿದೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಕಂಡುಬರಲಿದೆ. ಆದರೆ 3 ರಾಶಿಗಳ ಜನರ ಜೀವನದಲ್ಲಿ ಈ ರಾಜಯೋಗದ ರಚನೆಯಿಂದಾಗಿ ಅಪಾರ ಸಂಪತ್ತು ಮತ್ತು ಗೌರವ ಹರಿದುಬರಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-ಏಳು ಶತಮಾನಗಳ ಬಳಿಕ 5 ರಾಜಯೋಗಗಳ ನಿರ್ಮಾಣ, 4 ರಾಶಿಗಳ ಜನರ ಧನ-ಸಂಪತ್ತಿನಲ್ಲಿ ಅಪಾರ ಹೆಚ್ಚಳ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.


 

1 /3

ಮಿಥುನ ರಾಶಿ- ಬುಧಾದಿತ್ಯ ರಾಜಯೋಗದ ನಿರ್ಮಾಣ ನಿಮಗೆ ಮಂಗಳಕರ ಮತ್ತು ಫಲಪ್ರದವಾಗಿದೆ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಕರ್ಮ ಭಾವದ ಮೇಲೆ ಈ ಯೋಗವು ರೂಪುಗೊಳ್ಳಲಿದೆ. ಹೀಗಾಗಿ ರಾಜಕೀಯದಲ್ಲಿ ಸಕ್ರೀಯರಾಗಿರುವವರ ಘನತೆ-ಗೌರವ ಹೆಚ್ಚಾಗಲಿದೆ. ಅಲ್ಲದೆ, ಅವರಿಗೆ ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿಯಾಗಲಿದೆ. ಮತ್ತೊಂದೆಡೆ, ಉದ್ಯೋಗವನ್ನು ಹುಡುಕುತ್ತಿರುವವರು ಹೊಸ ಉದ್ಯೋಗವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಇನ್ಕ್ರಿಮೆಂಟ್ ಮತ್ತು ಬಡ್ತಿ ಭಾಗ್ಯ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು. ವ್ಯಾಪಾರ ಅಥವಾ ಉದ್ಯಮ ವಿಸ್ತರಣೆಯ ಸಾಧ್ಯತೆಯೂ ಕೂಡ ಕಾರ್ಡ್ ಮೇಲಿದೆ.  

2 /3

ಕರ್ಕ ರಾಶಿ- ಬುಧಾದಿತ್ಯ ರಾಜಯೋಗದ ನಿರ್ಮಾಣದಿಂದ, ಕರ್ಕ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಏಕೆಂದರೆ ಈ ಯೋಗವು ನಿಮ್ಮ ಜಾತಕದ ಅದೃಷ್ಟದ ಭಾವದಲ್ಲಿ ರೂಪುಗೊಳ್ಳಲಿದೆ. ಹೀಗಾಗಿ ಈ ಸಮಯದಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರಲಿದೆ. ಅಂದರೆ ನಿಮ್ಮ ಕೆಲಸವು ಪೂರ್ಣಗೊಳ್ಳಲು ಪ್ರಾರಂಭವಾಗುತ್ತದೆ. ನಿಮ್ಮ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಇಷ್ಟಾರ್ಥಗಳು ಈಡೇರುತ್ತವೆ. ಮತ್ತೊಂದೆಡೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಯವು ಅನುಕೂಲಕರವಾಗಿದೆ ಮತ್ತು ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಕೆಲಸದ ನಿಮಿತ್ತ ಹೊರಗೆ ಹೋಗಬೇಕಾಗಬಹುದು, ತಂದೆಯೊಂದಿಗಿನ ಸಂಬಂಧವು ಈ ಅವಧಿಯಲ್ಲಿ ಉತ್ತಮವಾಗಿರುತ್ತದೆ.   

3 /3

ವೃಷಭ ರಾಶಿ- ಬುಧಾದಿತ್ಯ ರಾಜಯೋಗದ ರೂಪುಗೊಳ್ಳುವಿಕೆ ವೃಷಭ ರಾಶಿಯವರಿಗೆ ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ಆದಾಯದ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಹೀಗಾಗಿ, ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಭಾರಿ ಹೆಚ್ಚಳವಾಗಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ಯಾವುದೇ ಹಳೆಯ ಹೂಡಿಕೆಯಿಂದ ದೊಡ್ಡ ವಿತ್ತೀಯ ಲಾಭವನ್ನು ಪಡೆಯಬಹುದು ಮತ್ತು ಹಣವನ್ನು ಹೂಡಿಕೆ ಮಾಡುವುದು ಸಹ ಈ ಅವಧಿಯಲ್ಲಿ ನಿಮಗೆ ಮಂಗಳಕರವಾಗಿರುತ್ತದೆ. ಇದರೆ ಜೊತೆಗೆ, ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಭಾರಿ ಸುಧಾರಣೆಯನ್ನು ಸಹ ನೀವು ನೋಡುತ್ತೀರಿ. ವಿವಾಹಿತರು ಈ ಅವಧಿಯಲ್ಲಿ ಒಳ್ಳೆಯ ಸುದ್ದಿ ಪಡೆಯಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)