Post Office Schemes: ಕೇವಲ ₹500ಗಳ ಹೂಡಿಕೆಯಿಂದ ಲಕ್ಷ ಲಕ್ಷ ಸಂಪಾದಿಸಿರಿ

Post Office Schemes: ನೀವು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ನೀವು ವಾರ್ಷಿಕವಾಗಿ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ​

ಅಂಚೆ ಕಚೇರಿ ಯೋಜನೆ: ಸರ್ಕಾರದ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಲಾಭವನ್ನು ಗಳಿಸಬಹುದು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಇಂತಹ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಇದರಲ್ಲಿ ನೀವು ಮೆಚ್ಯೂರಿಟಿಯ ಮೇಲೆ ಹೆಚ್ಚಿನ ಆದಾಯವನ್ನು ಪಡೆಯುತ್ತೀರಿ. ಇಂದು ನಾವು ಪೋಸ್ಟ್ ಆಫೀಸ್‌ನ ಅದ್ಭುತ ಯೋಜನೆಯ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಇದರಲ್ಲಿ ನೀವು 500 ರೂ.ಗಿಂತಲೂ ಕಡಿಮೆ ಹಣ ಹೂಡಿಕೆ ಮಾಡುವ ಮೂಲಕ ಲಕ್ಷ ಲಕ್ಷ ಸಂಪಾದಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಈ ಯೋಜನೆಯಲ್ಲಿ ನೀವು ಆರಂಭದಲ್ಲಿ 500 ರೂ.ಗಳನ್ನು ಹೂಡಿಕೆ ಮಾಡಬಹುದು. ನಂತರ ಅದು ಸರಿಯೆನಿಸಿದರೆ ನೀವು ಹೂಡಿಕೆ ಮಾಡಿದ ಮೊತ್ತವನ್ನು ಹೆಚ್ಚಿಸಬಹುದು. ಈ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇಲ್ಲಿ ನೀವು 500 ರೂ.ಕ್ಕಿಂತ ಕಡಿಮೆ ಹಣದ ಮೂಲಕ ಹೂಡಿಕೆ ಪ್ರಾರಂಭಿಸಬಹುದು.  

2 /6

ನೀವು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ನೀವು ವಾರ್ಷಿಕವಾಗಿ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ನೀವು ಈ ಹೂಡಿಕೆಯನ್ನು 15 ವರ್ಷಗಳವರೆಗೆ ಮಾಡಬಹುದು. ನೀವು 500 ರೂ. ಹೂಡಿಕೆ ಮಾಡಿದರೆ ವಾರ್ಷಿಕವಾಗಿ 6000 ರೂ. ಉಳಿತಾಯ ಮಾಡಬಹುದು.

3 /6

ಪ್ರಸ್ತುತ ಪಿಪಿಎಫ್‌ನಲ್ಲಿ ಶೇ.7.1ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಯೋಜನೆಯಲ್ಲಿ ಪ್ರತಿ ತಿಂಗಳು 500 ರೂ.ಗಳನ್ನು ಠೇವಣಿ ಮಾಡುವ ಮೂಲಕ, ನೀವು 15 ವರ್ಷಗಳಲ್ಲಿ ಶೇ.7.1ರ ಬಡ್ಡಿ ಸೇರಿದಂತೆ 1,62,728 ರೂ.ಗಳನ್ನು ಪಡೆಯಬಹುದು. ನೀವು ಇದನ್ನು 5.5 ವರ್ಷಗಳವರೆಗೆ ವಿಸ್ತರಿಸಿದರೆ, 20 ವರ್ಷಗಳಲ್ಲಿ 2,66,332 ರೂ. ಮತ್ತು 25 ವರ್ಷಗಳಲ್ಲಿ 4,12,321 ರೂ.ಗಳನ್ನು ಪಡೆಯಬಹುದು.

4 /6

ನಿಮ್ಮ ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. ಇದರಲ್ಲಿ ನೀವು ಕನಿಷ್ಠ 250 ಮತ್ತು ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು.

5 /6

ನೀವು ಅಂಚೆ ಕಚೇರಿಯಲ್ಲಿ RDಯನ್ನು ಸಹ ಮಾಡಬಹುದು. ನೀವು 100 ರೂ.ಗಳಿಂದಲೂ ಪ್ರಾರಂಭಿಸಬಹುದು. ಪ್ರಸ್ತುತ ಈ ಯೋಜನೆಯ ಬಡ್ಡಿ ದರವು 6.7% ಆಗಿದೆ. ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 500 ರೂ.ಗಳನ್ನು ಠೇವಣಿ ಮಾಡಿದರೆ, ನಂತರ 5 ವರ್ಷಗಳ ನಂತರ ನೀವು 35,681 ರೂ.ಗಳನ್ನು ಪಡೆಯುತ್ತೀರಿ. 

6 /6

ಪ್ರಸ್ತುತ ಇದರ ಮೇಲೆ ಶೇ.8.2ರಷ್ಟು ಬಡ್ಡಿ ನೀಡಲಾಗುತ್ತಿದೆ. ಇದರಲ್ಲಿ ನೀವು ತಿಂಗಳಿಗೆ 500 ರೂ.ಗಳನ್ನು ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ಒಟ್ಟು 90,000 ರೂ.ಗಳನ್ನು ಠೇವಣಿ ಮಾಡಬೇಕಾಗುತ್ತದೆ. ಇದಕ್ಕೆ ಶೇ.8.2ರಷ್ಟು ಬಡ್ಡಿ ಸಹಿತ 21 ವರ್ಷಗಳ ನಂತರ 2,77,103 ರೂ.ಗಳನ್ನು ಪಡೆಯುತ್ತೀರಿ.