ಉಸಿರಾಡಿದ ತಕ್ಷಣ ಸಾವು: ಸಾವಿರಾರು ಮಂದಿಯ ಬಲಿ ಪಡೆದಿದೆ ಈ ವಿಷ ನಗರಿ!

ನಿರ್ಜನ ಮತ್ತು ಜನವಸತಿ ಇಲ್ಲದ ಸ್ಥಳದಿಂದ ಆಸ್ಟ್ರೇಲಿಯಾದ ಈ ಪ್ರದೇಶವು ಪ್ರಪಂಚದಾದ್ಯಂತ ಸಖತ್ ಸುದ್ದಿಯಾಗಿದೆ.

ನವದೆಹಲಿ: ಜಗತ್ತು ದೊಡ್ಡದಾಗಿದೆ. ವಿವಿಧ ಕಾರಣಕ್ಕೆ ಪ್ರಸಿದ್ಧವಾಗಿರುವ ಅಸಂಖ್ಯಾತ ಸ್ಥಳಗಳು ಈ ಭೂಮಿಯಲ್ಲಿವೆ. ಕೆಲವು ಪ್ರದೇಶ ಅಲ್ಲಿನ ಜನರ ಜೀವನಶೈಲಿಯಿಂದ ಪ್ರಖ್ಯಾತಿ ಗಳಿಸಿದ್ದರೆ, ಇನ್ನು ಕೆಲವು ಅಲ್ಲಿನ ವಿಚಿತ್ರ ಹಾಗೂ ನಿಗೂಢ ವಾತಾವರಣದಿಂದ ಕುಖ್ಯಾತಿ ಗಳಿಸಿವೆ. ಅದೇ ರೀತಿ ಈಗ ನಾವು ಜನರೇ ವಾಸಿಸದ ನಿರ್ಜನ ಪ್ರದೇಶದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಅಲ್ಲಿನ ಸರ್ಕಾರವು ಈ ಪ್ರದೇಶಕ್ಕೆ ಜನರಿಗೆ ಸಂಪೂರ್ಣ ನಿರ್ಬಂಧ ವಿಧಿಸಿದೆ. ಈ ಮೊದಲು ಇಲ್ಲಿ ವಾಸಿಸುತ್ತಿದ್ದ ಜನರಿಗೆ ಸರ್ಕಾರವೇ ಬೇರೆಡೆ ತೆರಳುವಂತೆ ಮನವಿ ಮಾಡಿಕೊಂಡಿತ್ತು. ಇಲ್ಲಿ ಉಸಿರಾಡುವ ಗಾಳಿಯಲ್ಲಿ ವಿಷವಿದೆ. ಹೀಗಾಗಿ ನೀವು ಈ ಪ್ರದೇಶದಲ್ಲಿ ಉಸಿರಾಡಿದ್ರೆ ಸಾಕು ಸಾವು ಗ್ಯಾರಂಟಿ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವರದಿಗಳ ಪ್ರಕಾರ ಆಸ್ಟ್ರೇಲಿಯಾದ ವಿಟ್ನೂಮ್ ಪಿಲ್ಬರಾ(Witnoom Pilbara) ಪ್ರದೇಶಕ್ಕೆ ಆಗಸ್ಟ್ 31ರಂದು ಜನರಿಗೆ ನಿರ್ಬಂಧ ಹೇರಲಾಯಿತು. ಈಗ ಇಲ್ಲಿ ಯಾರೂ ವಾಸಿಸುತ್ತಿಲ್ಲ. ವಾಸ್ತವವಾಗಿ ಈ ಸ್ಥಳವು ತುಂಬಾ ವಿಷಕಾರಿಯಾಗಿದೆಯಂತೆ. ಇಲ್ಲಿ ಯಾರಾದರೂ ಉಸಿರಾಡಿದದ್ರೆ ಕೂಡಲೇ ಸಾವನ್ನಪ್ಪುತ್ತಾರೆ.    

2 /5

ಈಗ ಈ ಪಟ್ಟಣವನ್ನು ನಕ್ಷೆಯಿಂದ ತೆಗೆದುಹಾಕುವ ಸಿದ್ಧತೆ ಬಹುತೇಕ ಪೂರ್ಣಗೊಂಡಿವೆ. ಗಣಿಗಾರಿಕೆ ಪ್ರದೇಶವಾದ ಕಾರಣ ಇಲ್ಲಿ ಹಲವು ಬಗೆಯ ವಿಷಕಾರಿ ಅನಿಲಗಳು ಸೋರಿಕೆಯಾಗುತ್ತಿವೆ. ಇದರಿಂದ ಕ್ರಮೇಣ ಜನರು ಸಾವನ್ನಪ್ಪುತ್ತಿದ್ದರು. ಈ Witnoom ಗಣಿಯನ್ನು ಆರೋಗ್ಯ ಸಮಸ್ಯೆ ಮತ್ತು ಹಲವಾರು ಸಾವುಗಳ ನಂತರ 1966ರಲ್ಲಿ ಮುಚ್ಚಲಾಯಿತು. ಇಲ್ಲಿ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರಿದ್ದರೂ ಜನ ಮಾತ್ರ ಈ ಜಾಗ ಬಿಡಲು ಸಿದ್ಧರಿರಲಿಲ್ಲ.

3 /5

Witnoom ಕ್ಲೋಸರ್ ಆಕ್ಟ್ನಡಿ ಆಗಸ್ಟ್ 31ರೊಳಗೆ ಈ ಸ್ಥಳವನ್ನು ಖಾಲಿ ಮಾಡುವಂತೆ ಜನರಿಗೆ ಆದೇಶಿಸಲಾಗಿತ್ತು. ಸ್ವಯಂಪ್ರೇರಿತವಾಗಿ ಊರು ತೊರೆಯಿರಿ ಇಲ್ಲವಾದಲ್ಲಿ ಕೆಲಸದಿಂದ ತೆಗೆದು ಹಾಕಲಾಗುವುದು ಎಂಬ ಎಚ್ಚರಿಕೆ ನೀಡಲಾಗಿತ್ತು. ಇದಾದ ಬಳಿಕವೂ ಜನರು ಜಾಗ ಖಾಲಿ ಮಾಡಿರಲಿಲ್ಲ. ಪರಿಣಾಮ ಇಲ್ಲಿ ವಾಸಿಸುತ್ತಿದ್ದ ಸುಮಾರು 2 ಸಾವಿರ ಜನರು ಸಾವನ್ನಪ್ಪಿದ್ದರು. ಇಲ್ಲಿ ವಾಸಿಸುವ ಪ್ರತಿ 10 ಜನರ ಪೈಕಿ ಒಬ್ಬರು ಸಾವನ್ನಪ್ಪುತ್ತಿದ್ದರು. ಹೀಗಾಗಿ ಕೂಡಲೇ ಈ ಸ್ಥಳ ಖಾಲಿ ಮಾಡುವಂತೆ ಆದೇಶಿಸಲಾಗಿತ್ತು.

4 /5

2006ರಲ್ಲಿ ಆಸ್ಟ್ರೇಲಿಯಾ ಸರ್ಕಾರವು Witnoom ಪಟ್ಟಣದ ಹೆಸರು ತೆಗೆದುಹಾಕಲು ನಿರ್ಧರಿಸಿತು. 2007ರಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತು. ಅಂತಿಮವಾಗಿ ಆಗಸ್ಟ್ 31ರಂದು ಈ ಸ್ಥಳದಲ್ಲಿ ವಾಸಿಸುತ್ತಿದ್ದ ಕೊನೆಯ ವ್ಯಕ್ತಿ ಜಾಗ ಖಾಲಿ ಮಾಡಿದರು. ಇದರೊಂದಿಗೆ ಈ ಸ್ಥಳವು ಇದೀಗ ಜನವಸತಿಯಿಲ್ಲದೆ ಸಂಪೂರ್ಣವಾಗಿ ನಿರ್ಜನವಾಗಿದೆ.

5 /5

ಮಾನವ ನಿರ್ಮಿತ ವಿಪತ್ತು ಅಥವಾ ಇನ್ನಾವುದೇ ಕಾರಣಗಳಿಂದ ನಿರ್ಜನವಾಗಿರುವಂತಹ ಅನೇಕ ಸ್ಥಳಗಳು ಜಗತ್ತಿನಲ್ಲಿವೆ. ಇಂತಹ ನಿರ್ಜನ ಮತ್ತು ಜನವಸತಿ ಇಲ್ಲದ ಸ್ಥಳದಿಂದ ಆಸ್ಟ್ರೇಲಿಯಾದ ಈ ಪ್ರದೇಶವು ಪ್ರಪಂಚದಾದ್ಯಂತ ಸಖತ್ ಸುದ್ದಿಯಾಗಿದೆ.