Photo Gallery: ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ಕಲಾಕೃತಿ ಪರಿಶೀಲಿಸಿದ ಪ್ರಧಾನಿ ಮೋದಿ

ಈ ಅಪರೂಪದ ಪುರಾತನ ಕಲಾಕೃತಿಗಳು ಮತ್ತು ವಸ್ತುಗಳು 9ರಿಂದ 10ನೇ ಶತಮಾನದವುಗಳಾಗಿವೆ.

ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಪರಿಶೀಲನೆ ನಡೆಸಿದ್ದಾರೆ. ಇವುಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಈ ಅಪರೂಪದ ಪುರಾತನ ಕಲಾಕೃತಿಗಳು ಮತ್ತು ವಸ್ತುಗಳು 9ರಿಂದ 10ನೇ ಶತಮಾನದವುಗಳಾಗಿವೆ.

2 /5

ಈ ಪುರಾತನ ವಸ್ತುಗಳನ್ನು 6 ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಶಿವ ದೇವರು ಮತ್ತು ಅವರ ಶಿಷ್ಯರು, ಶಕ್ತಿ ದೇವರ ಆರಾಧನೆ, ಭಗವಾನ್ ವಿಷ್ಣು ಮತ್ತು ಅವರ ವಿವಿಧ ರೂಪಗಳು, ಜೈನ ಪದ್ಧತಿ-ಸಂಪ್ರದಾಯಗಳು, ಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಸೇರಿವೆ.

3 /5

ಈ ಅಪರೂಪದ 29 ಪುರಾತನ ಕಲಾಕೃತಿಗಳನ್ನು ಪ್ರಧಾನಿ ಮೋದಿ ಪರಿಶೀಲಿಸಿದರು. ಇವುಗಳಲ್ಲಿ ಮುಖ್ಯವಾಗಿ ಮರಳುಗಲ್ಲು, ಅಮೃತಶಿಲೆ, ಕಂಚು, ಹಿತ್ತಾಳೆ, ಕಾಗದದ ವಿವಿಧ ವಸ್ತುಗಳಲ್ಲಿ ರಚಿಸಲಾದ ಶಿಲ್ಪಗಳು ಮತ್ತು ವರ್ಣಚಿತ್ರಗಳು ಸೇರಿವೆ.

4 /5

ಈ ಕಲಾಕೃತಿಗಳು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸುತ್ತವೆ.

5 /5

ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ ಅಪರೂಪದ ಕಲಾಕೃತಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ.