ವಾಸ್ತು ಶಾಸ್ತ್ರದಲ್ಲಿ ಕೆಲವು ಸಸ್ಯಗಳನ್ನು ಬಹಳ ಅದ್ಭುತವೆಂದು ಪರಿಗಣಿಸಲಾಗುತ್ತದೆ.
ಬೆಂಗಳೂರು : ವಾಸ್ತು ಶಾಸ್ತ್ರದಲ್ಲಿ ಕೆಲವು ಸಸ್ಯಗಳನ್ನು ಬಹಳ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯಗಳು ಮನೆಯ ಋಣಾತ್ಮಕ ಶಕ್ತಿಯನ್ನು ನಾಶಪಡಿಸುವುದರ ಜೊತೆಗೆ ಹಣದ ಲಾಭವನ್ನು ನೀಡುತ್ತದೆ. ಇವುಗಳಲ್ಲಿ ಒಂದು ಪಾರಸ್ ಪೀಪಲ್ . ಇದರ ವೈಜ್ಞಾನಿಕ ಹೆಸರು Thespesia populnea. ಮನೆಯಲ್ಲಿ ಈ ಗಿಡವನ್ನು ಹಾಕುವುದರಿಂದ ಹಣದ ಕೊರತೆ ಎದುರಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಪಾರಸ್ ಪೀಪಲ್ ನ ಪೂಜೆಯಿಂದ ಭಗವಾನ್ ವಿಷ್ಣುವು ಪ್ರಸನ್ನನಾಗುತ್ತಾನೆ. ಸಂಪತ್ತಿನ ದೇವತೆಯಾದಲಕ್ಷ್ಮೀ ದೇವಿಯು ಕೂಡಾ ಸಂತೋಷಗೊಳ್ಳುತ್ತಾಳೆ. ಇದು ಅಪರೂಪದ ಅರಳಿ ಮರದ ಜಾತಿಯಾಗಿದೆ. ಆದ್ದರಿಂದ ಇದನ್ನು ಮನೆಯಲ್ಲಿ ನೆಡುವ ಬದಲು, ಅದನ್ನು ಹೊರಗೆ ನೆಡಬೇಕು.
ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಹಣದ ಕೊರತೆ ನೀಗದೆ ಹೋದರೆ, ಪಾರಸ್ ಪಾರಸ್ ಪೀಪಲ್ ನ 108 ಎಲೆಗಳ ಮೇಲೆ ವಿಷ್ಣುವಿನ ಹೆಸರನ್ನು ಬರೆದು ಪವಿತ್ರ ನದಿಯಲ್ಲಿ ಹರಿಬಿಡಬೇಕು. ಹೀಗೆ ಮಾಡಿದರೆ ಹಣದ ಕೊರತೆ ದೂರವಾಗುತ್ತದೆ ಎನ್ನಲಾಗುತ್ತದೆ.
ದೃಷ್ಟಿಯಾ ಕಾರಣದಿಂದಾಗಿ, ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಪಾರಸ್ ಪೀಪಲ್ 11 ಎಲೆಗಳ ಮೇಲೆ ಓಂ ಹನುಮತ್ಯೇ ನಮಃ ಎಂದು ಬರೆದು ಹರಿಯುವ ನೀರಿನಲ್ಲಿ ಬಿಡಬೇಕು.
ಯಾವುದೇ ಕಾರಣದಿಂದ ಮದುವೆ ವಿಳಂಬವಾಗುತ್ತಿದ್ದರೆ, ಪಾರಸ್ ಪೀಪಲ್ ಬೇರಿಗೆ ಪ್ರತಿದಿನ ನೀರನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಮದುವೆಯ ಸಮಸ್ಯೆ ಪರಿಹಾರವಾಗುತ್ತದೆ.
ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ, ಈ ಹೂವುಗಳ ಬಳಕೆ ವಿಶೇಷವಾಗಿರುತ್ತವೆ. ಗುರುವಾರದ ವೇಳೆ, ಗುರುವಿಗೆ ಪಾರಸ್ ಪೀಪಲ್ ಹೂವನ್ನು ಅರ್ಪಿಸುವುದರಿಂದ ಗುರು ಗ್ರಹದ ಕೃಪೆ ಸಿಗುತ್ತದೆ.