ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ದಾಂಡೇಲಿಯ ಈ ಪ್ರಸಿದ್ಧ ತಾಣಗಳಿಗೆ ತಪ್ಪದೇ ಭೇಟಿ ನೀಡಿ

Dandeli Tourist Places: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿ ಈ ಸಾತೊಡ್ಡಿ ಜಲಪಾತ ಸಿಗುತ್ತದೆ. ಇದು ದಾಂಡೇಲಿಗೆ ಹೋಗುವಾಗ ಸಿಗುವ ಒಂದು ಅದ್ಭುತ ಜಲಪಾತವಾಗಿದೆ.

Dandeli Tourist Places: ನೀವು ಏನಾದರೂ ಪರಿಸರ ಪ್ರೇಮಿಯಾಗಿದ್ದು, ನಿಸರ್ಗದ ಸೌಂದರ್ಯವನ್ನು ಸವಿಯಬೇಕು ಅಂದುಕೊಂಡಿದ್ದರೆ ನಿಮಗೆ ಉತ್ತರ ಕನ್ನಡ ಜಿಲ್ಲೆ ಉತ್ತಮ ಆಯ್ಕೆ ಆಗಿದೆ. ಇಲ್ಲಿನ ದಾಂಡೇಲಿ ತಾಲೂಕಿನಲ್ಲಿ ನೈಸರ್ಗಿಕವಾಗಿ ಸಾಕಷ್ಟು ಪ್ರವಾಸಿ ತಾಣಗಳಿವೆ. ದಾಂಡೇಲಿ ಪ್ರವಾಸಿಗಳ ತಾಣವಾಗಿದ್ದು, ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಟ್ರಕ್ಕಿಂಗ್‌ನಿಂದ ಹಿಡಿದು ಅಡ್ವೈಂಚರ್‌ ಚಟುವಟಿಕೆಗಳವರೆಗೂ ನೀವು ಇಲ್ಲಿ ಆನಂದಿಸಬಹುದು. ಸಾಹಸಮಯ ಚಟುವಟಿಕೆಗಳನ್ನು ಎಂಜಾಯ್ ಮಾಡಲು ದಾಂಡೇಲಿ ಬೆಸ್ಟ್ ಪ್ಲೇಸ್‌ ಅಂತಾನೇ ಹೇಳಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಸಾಹಸಮಯ ಚಟುವಟಿಕೆಗಳಿಗೆ ದಾಂಡೇಲಿ ಹೇಳಿಮಾಡಿಸಿದ ಪ್ರವಾಸಿ ತಾಣ. ನೀವು ಇಲ್ಲಿನ ಕಾಳಿ ನದಿಯಲ್ಲಿ ರಿವರ್ ರಾಫ್ಟಿಂಗ್ ಮಾಡಬಹುದು. ದಾಂಡೇಲಿ ಎಂದಾಕ್ಷಣವೇ ಪ್ರವಾಸಿಗರಿಗೆ ಮೊದಲು ನೆನಪಿಗೆ ಬರುವುದೇ ಈ ಕಾಳಿ ನದಿಯ ರಿವರ್ ರಾಫ್ಟಿಂಗ್. ಈ ರಿವರ್ ರಾಫ್ಟಿಂಗ್ ಸಾಕಷ್ಟು ಜನಪ್ರಿಯವಾಗಿದ್ದು, ಸಾಹಸ ಪ್ರಿಯರಿಗೆ ಸ್ಮರಣೀಯ ಅನುಭವ ನೀಡುತ್ತದೆ.

2 /6

ನೀವು ದಾಂಡೇಲಿ ಪ್ರವಾಸಕ್ಕೆ ಹೋದರೆ ತಪ್ಪದೇ ಈ ಜಾಗಕ್ಕೆ ಭೇಟಿ ನೀಡಬೇಕು. ಏಕೆಂದರೆ ಕವಾಲಾ ಗುಹೆಗಳು ನಿಮಗೆ ಬೇರೆಯದೇ ರೀತಿಯ ಅನುಭವ ನೀಡುತ್ತದೆ. ಇತಿಹಾಸ ಪೂರ್ವ ಕಾಲದಷ್ಟು ಹಳೆಯದಾದ ಈ ಕವಾಲಾ ಗುಹೆಗಳು, ಜ್ವಾಲಾಮುಖಿಯಿಂದ ನೈಸರ್ಗಿಕವಾಗಿ ನಿರ್ಮಾಣಗೊಂಡಿದೆ ಎಂದು ಹೇಳಲಾಗುತ್ತದೆ.

3 /6

ನೀವೇನಾದರೂ ಪ್ರಾಣಿ ಪ್ರಿಯರಾಗಿದ್ದಲ್ಲಿ ತಪ್ಪದೇ ದಾಂಡೇಲಿಯ ವನ್ಯಜೀವಿ ಅಭಯಾರಣ್ಯದ ಒಂದು ಭಾಗವಾಗಿರುವ ಅಣಶಿ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಬೇಕು. ಇಲ್ಲಿ ನೀವು ಕರಿ ಚಿರತೆ (Black Panther)ಯ ದರ್ಶನ ಪಡೆಯಬಹುದು.  

4 /6

ನೀವು ಅಣಶಿ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ ಬಳಿಕ ತಪ್ಪದೇ ದಾಂಡೇಲಿಯ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಿ. ದಾಂಡೇಲಿಯು ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮ ಎಂದು ಹೆಸರಾಗಿದೆ.

5 /6

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿ ಈ ಸಾತೊಡ್ಡಿ ಜಲಪಾತ ಸಿಗುತ್ತದೆ. ಇದು ದಾಂಡೇಲಿಗೆ ಹೋಗುವಾಗ ಸಿಗುವ ಒಂದು ಅದ್ಭುತ ಜಲಪಾತವಾಗಿದೆ. ದಾಂಡೇಲಿಯಿಂದ ಕೇವಲ 25 ಕಿಲೋ ಮೀಟರ್ ದೂರದಲ್ಲಿ ಸಾತೊಡ್ಡಿ ಜಲಪಾತವಿದೆ.

6 /6

ನೀವು ಹಲವಾರು ಪ್ರವಾಸಿ ತಾಣಗಳನ್ನು ನೋಡಿದ ಬಳಿಕ ದಾಂಡೇಲಿ ವನ್ಯಜೀವಿ ಅಭಯಾರಣ್ಯದ ಮಧ್ಯದಲ್ಲಿರುವ ಸಿಂಥೇರಿ ರಾಕ್ಸ್‌ನ ಅದ್ಭುತ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಜ್ವಾಲಾಮುಖಿಯಿಂದ ಈ ಬಂಡೆಗಳು ನೈಸರ್ಗಿಕವಾಗಿ ರೂಪುಗೊಂಡಿದೆ ಎಂದು ಹೇಳಲಾಗುತ್ತದೆ. ನೀವು ದಾಂಡೇಲಿಗೆ ಹೋದರೆ ತಪ್ಪದೇ ಈ ಸ್ಥಳಕ್ಕೆ ಭೇಟಿ ನೀಡಬೇಕು.