PHOTOS: ಇಟಲಿಯಲ್ಲಿ ಫ್ಲೋರಲ್ ಲುಕ್'ನಲ್ಲಿ ಪ್ರಿಯಾಂಕಾ ಚೋಪ್ರಾ! ಈ ಉಡುಗೆ ಬೆಲೆ ಎಷ್ಟು ಗೊತ್ತಾ?

ಇಟಲಿಯಲ್ಲಿ ನಡೆದ ಮಿಲನ್ ಫ್ಯಾಶನ್ ವೀಕ್'ನಲ್ಲಿ ಪ್ರಿಯಾಂಕ ಚೋಪ್ರಾ ಧರಿಸಿದ್ದ ಹಳದಿ ಬಣ್ಣದ ಫ್ಲೋರಲ್ ಲುಕ್ ಉಡುಗೆ ಇದೀಗ ಎಲ್ಲರ ಗಮನ ಸೆಳೆದಿದೆ. ಸಖತ್ ಕ್ಯೂಟ್ ಆಗಿ ಕಾಣುವ ಪ್ರಿಯಾಂಕಾಳ ಈ ಉಡುಗೆ ಬೆಲೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

  • Sep 24, 2018, 18:24 PM IST

ಇತ್ತೀಚೆಗೆ ನಡೆದ ಇಷಾ ಅಂಬಾನಿ ಮತ್ತು ಆನಂದ್ ನಿಶ್ಚಿತಾರ್ಥದಲ್ಲಿ ಇಡೀ ಬಾಲಿವುಡ್ ತಾರೆಯರ ದಂಡೇ ಆಗಮಿಸಿತ್ತು. ಸೆಪ್ಟೆಂಬರ್ 21 ರಿಂದ 23ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾರಿಂದ ಹಿಡಿದು ಸೋನಂ ಕಪೂರ್ ವರೆಗೆ ಸಾಕಷ್ಟು ನಟ, ನಟಿಯರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ನಂತರ ಇಟಲಿಯಲ್ಲಿ ನಡೆದ ಮಿಲನ್ ಫ್ಯಾಶನ್ ವೀಕ್'ನಲ್ಲಿ ಭಾಗವಹಿಸಿದ ಪ್ರಿಯಾಂಕ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಧರಿಸಿದ್ದ ಹಳದಿ ಬಣ್ಣದ ಹೂಗಳ ಉಡುಗೆಯು ಎಲ್ಲರನ್ನೂ ಸಾಕಷ್ಟು ಆಕರ್ಷಿಸಿತ್ತಲ್ಲದೆ, ಆದರೆ ಬೆಲೆ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.

1 /5

ಮಿಲನ್ ಫ್ಯಾಶನ್ ವೀಕ್'ನಲ್ಲಿ ಪ್ರಿಯಾಂಕ ಚೋಪ್ರಾ ಧರಿಸಿದ್ದ ಕಟ್ ಗೌನ್ ಬೆಲೆ 497 ಡಾಲರ್! ಅಂದರೆ, ಬರೋಬ್ಬರಿ 36,000 ರೂ.ಗಳು!!! ಅಂದರೆ, ಮಧ್ಯಮ ವರ್ಗದ ಕುಟುಂಬಗಳು ಪಡೆಯುವ ಒಂದು ತಿಂಗಳ ವೇತನಕ್ಕಿಂತ ಹೆಚ್ಚು ಮೌಲ್ಯದ್ದೆಂದೇ ಹೇಳಬಹುದು.

2 /5

ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ತಾಯಿ ಮಧು ಚೋಪ್ರಾ ಮತ್ತು ಸಹೋದರ ಸಿದ್ಧಾರ್ಥ್ ಜೊತೆ ಕಾಣಿಸಿಕೊಂಡಿದ್ದರು.

3 /5

ಹಳದಿ ಬಣ್ಣದ ಫ್ಲೋರಲ್ ಉಡುಗೆಗೆ ಸ್ಟಲ್ವಿ ಬ್ಯಾಗ್ ಮತ್ತು ಐಷಾರಾಮಿ ಬ್ರ್ಯಾಂಡ್ ಎಫ್ಎಆರ್ ಪಾದರಕ್ಷೆಗಳನ್ನು ಧರಿಸಿದ್ದ ಪ್ರಿಯಾಂಕಾ ಸಖತ್ ಕ್ಯೂಟ್ ಆಗಿ ಕಾಣುತ್ತಿದ್ದರು. 

4 /5

ಇದಕ್ಕೂ ಮುನ್ನ, ಇಶಾ ಅಂಬಾನಿ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದ ಪ್ರಿಯಾಂಕ, ನಿಖ್ ಜೋನ್ಸ್ ಮತ್ತು ಫ್ಯಾಶನ್ ಡಿಸೈನರ್ ಮನಿಷಾ ಮಲ್ಹೊತ್ರಾ ಅವರೊಂದಿಗಿನ ಫೋಟೋವೊಂದನ್ನು ಫಿಲಂ ಫೇರ್ ಶೇರ್ ಮಾಡಿತ್ತು.

5 /5

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪೀಚ್ ಬಣ್ಣದ ಸೀರೆಯಲ್ಲಿ ಪ್ರಿಯಾಂಕ ಕಂಗೊಳಿಸಿದ್ದರೆ, ಕಪ್ಪು ಬಣ್ಣದ ಇಂಡೋ-ವೆಸ್ಟ್ರನ್ ಉಡುಪಿನಲ್ಲಿ ನಿಕ್ ಕಾಣಿಸಿಕೊಂಡಿದ್ದರು. (ಪೋಟೋ ಕೃಪೆ: @priyankachopra)