PHOTOS: ಪ್ರೀಮಿಯರ್ ಪದ್ಮಿನಿ ಸೆಟ್‌ನಲ್ಲಿ ಜಗ್ಗೇಶ್ ದಂಪತಿ ಬ್ಯೂಟಿಫುಲ್ ಮೊಮೆಂಟ್ಸ್...

'ಪ್ರೀಮಿಯರ್ ಪದ್ಮಿನಿ' ಚಿತ್ರದ ಶೂಟಿಂಗ್ ಸೆಟ್‌ಗೆ ಇತ್ತೀಚೆಗೆ ಪರಿಮಳ ಜಗ್ಗೇಶ್ ಭೇಟಿ ನೀಡಿದ್ದರು. ಈ ಸುಂದರಕ್ಷಣಗಳು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾದದ್ದು ಹೀಗೆ...

  • Sep 27, 2018, 11:30 AM IST

ನವರಸ ನಾಯಕ ಜಗ್ಗೇಶ್ ಸ್ಯಾಂಡಲ್ವುಡ್ ಕಂಡ ಅಪರೂಪದ ಕಲಾವಿದ. ಚಿತ್ರರಂಗದಲ್ಲಿ ಸಾಕಷ್ಟು ಕಷ್ಟಪಟ್ಟು, ಎಲ್ಲಾ ಅಡೆತಡೆಗಳನ್ನೂ ಎದುರಿಸಿ ಮೇಲೆ ಬಂದ ಕನ್ನಡದ ನಾಯಕ. ಇವರಿಗೆ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ಸಾಥ್ ನೀಡಿ ಜೊತೆಯಾಗಿ ನಡೆಯುತ್ತಿರುವವರು ಪತ್ನಿ ಪರಿಮಳ ಜಗ್ಗೇಶ್. ವಿವಾಹವಾಗಿ 34 ವರ್ಷಗಳು ಕಳೆದರೂ ಇಂದಿಗೂ ಅದೇ ನಗು, ಹುಮ್ಮಸ್ಸು, ಅದೇ ತುಂಟಾಟ... ಈ ಜೋಡಿ ನೋಡಿದವರಿಗೆ ಜೀವನಪೂರ್ತಿ ಹೀಗೇ ಸಂತೋಷದಿಂದ, ನಗುನಗುತಾ ಇರಲಿ ಎಂದು ಹಾರೈಸುವ ಬಯಕೆ... ಹೌದು, ಜಗ್ಗೇಶ್-ಪರಿಮಳ ಜೋಡಿ ಇಂದಿಗೂ ಎಲ್ಲರಿಗೂ ಮಾದರಿ ಎಂದರೆ ಯಾವುದೇ ತಪ್ಪಿಲ್ಲ. 

ನವರಸ ನಾಯಕ ಜಗ್ಗೇಶ್ ಇತ್ತೀಚೆಗೆ 'ಪ್ರೀಮಿಯರ್ ಪದ್ಮಿನಿ' ಅನ್ನೋ ವಿಶೇಷ ಟೈಟಲ್ ಇರುವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಚಾಲ್ತಿಯಲ್ಲಿದ್ದ 'ಪ್ರೀಮಿಯರ್ ಪದ್ಮಿನಿ' ಕಾರನ್ನೇ ಮೂಲ ವಸ್ತುವನ್ನಾಗಿಟ್ಟುಕೊಂಡು ತಯಾರಾಗುತ್ತಿರುವ ಈ ಚಿತ್ರದ ಶೂಟಿಂಗ್ ಸೆಟ್‌ಗೆ ಇತ್ತೀಚೆಗೆ ಪರಿಮಳ ಜಗ್ಗೇಶ್ ಭೇಟಿ ನೀಡಿದ್ದರು. ಈ ಸುಂದರ ಕ್ಷಣಗಳು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾದದ್ದು ಹೀಗೆ...

1 /5

2 /5

3 /5

4 /5

5 /5

ಎಲ್ಲಾ ಫೋಟೋಗಳ ಕೃಪೆ: Twitter/@27parims