Photo Gallery: ಭಾರತೀಯ ಕ್ರಿಕೆಟಿಗರ ಪತ್ನಿಯರು ಎಷ್ಟು ಓದಿದ್ದಾರೆ ಗೊತ್ತಾ..?

ಭಾರತೀಯ ಸ್ಟಾರ್ ಕ್ರಿಕೆಟಿಗರ ಪತ್ನಿಯರು ಹೆಚ್ಚು ಕ್ವಾಲಿಪೈಡ್ ಆಗಿದ್ದಾರೆ.

ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಹೀಗೆ ಅನೇಕ ಭಾರತೀಯ ಕ್ರಿಕೆಟಿಗರ ಸಾಧನೆ ಬಗ್ಗೆ ನಿಮಗೆ ಗೊತ್ತೆ ಇದೆ. ಕ್ರಿಕೆಟ್ ನಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಇವರಿಗೆ ಕೋಟ್ಯಂತರ ಫಾಲೋವರ್ಸ್ ಗಳಿದ್ದಾರೆ.  ಕ್ರಿಕೆಟ್ ನಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದ ಆಟಗಾರರು ಹೇಳಿಕೊಳ್ಳುವಂತಹ ವಿದ್ಯಾವಂತರಲ್ಲ. ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುವ ಉತ್ಸಾದಲ್ಲಿದ್ದ ಅನೇಕರು ಹೆಚ್ಚು ಓದುವ ಗೋಜಿಗೆ ಹೋಗಿಲ್ಲ. ಆದರೆ ಅವರ ಪತ್ನಿಯರು ಮಾತ್ರ ಹೆಚ್ಚು ಕ್ವಾಲಿಪೈಡ್ ಆಗಿದ್ದಾರೆ. ಸ್ಟಾರ್ ಕ್ರಿಕೆಟಿಗರ ಪತ್ನಿಯರು ಎಷ್ಟು ಓದಿದ್ದಾರೆ, ಅವರ ಎಜುಕೇಶನ್ ಕ್ವಾಲಿಫಿಕೇಷನ್ ಏನಿರಬಹುದೆಂಬ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಕೆಲ ಕ್ರಿಕೆಟಿಗರ ಪತ್ನಿಯರ ವಿದ್ಯಾಭ್ಯಾಸದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕಲಾ ವಿಭಾಗದಲ್ಲಿ ಪದವಿ ಮತ್ತು ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

2 /5

ಸಾಕ್ಷಿ ಧೋನಿ ಅವರು ಔರಂಗಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್‌ ಬಗ್ಗೆ ಕೋರ್ಸ್ ಮಾಡಿದ್ದಾರೆ.

3 /5

ಅಂಜಲಿ ತೆಂಡೂಲ್ಕರ್ ವೃತ್ತಿಯಲ್ಲಿ ಎಂಬಿಬಿಎಸ್ ಡಾಕ್ಟರ್ ಆಗಿದ್ದಾರೆ. ಅಂಜಲಿ ಅವರು ಕ್ರಿಕೆಟ್ ಗಾಡ್ ಸಚಿನ್ ಅವರನ್ನು ಆಕಸ್ಮಿಕವಾಗಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದರು.

4 /5

ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್‌ದೇಹ್‌ ಪದವೀಧರೆ ಮತ್ತು ಕ್ರೀಡಾ ಈವೆಂಟ್ ಮ್ಯಾನೇಜರ್ ಆಗಿದ್ದರು.   

5 /5

ಪ್ರಿಯಾಂಕಾ ರೈನಾ ಇಂಜಿನಿಯರಿಂಗ್ ಮಾಡಿದ್ದಾರೆ. ಐಟಿ ಕಂಪನಿಗಳಾದ ಅಕ್ಸೆಂಚರ್ ಮತ್ತು ವಿಪ್ರೋಗಳಲ್ಲಿ ಅವರು ಕೆಲಸ ಮಾಡಿದ್ದಾರೆ.