Photo Gallery: ಕೋಲ್ಕತ್ತಾ ದುರ್ಗಾ ಪಂದಲ್ ನಲ್ಲಿ ತಲೆ ಎತ್ತಿದ ಸಿಎಂ ಮಮತಾ ಬ್ಯಾನರ್ಜಿ ಮೂರ್ತಿ

ಪಶ್ಚಿಮ ಬಂಗಾಳದ ಕೆಲವು ಕುಶಲಕರ್ಮಿಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಮೂರ್ತಿಯನ್ನು ಕೆತ್ತಿಸಲು ನಿರ್ಧರಿಸಿದ್ದಾರೆ, ಅದನ್ನು ಈ ವರ್ಷ ಕೋಲ್ಕತ್ತಾದ ದುರ್ಗಾ ಪೂಜೆಯಲ್ಲಿ ಪ್ರದರ್ಶಿಸಲಾಗುತ್ತದೆ.

Pic Courtesy: ANI

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಬಿಜೆಪಿ ಶಾಸಕ ಸುವೇಂಡು ಅಧಿಕಾರಿ ವಿಗ್ರಹದ ವಿಚಾರವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿ "ನಿಮ್ಮನ್ನು ಮೆಚ್ಚಿಸಲು ಮತ್ತು ನಿಮ್ಮ ಮೌನ ಒಪ್ಪಿಗೆಯನ್ನು ಸೂಚಿಸಲು ಯಾರಾದರೂ ನಿಮ್ಮನ್ನು ದೇವರ ಸ್ಥಾನಮಾನಕ್ಕೆ ಏರಿಸಲು ಪ್ರಯತ್ನಿಸಿದರೆ, ನಿಮ್ಮ ಅಹಂಕಾರವು ಆತ್ಮಸಾಕ್ಷಿಯು ಹಿಡಿದಿಡಲಾಗದ ಹಂತಕ್ಕೆ ತಲುಪಿದೆ ಎಂದರ್ಥ ಎಂದು ಕಿಡಿ ಕಾರಿದ್ದಾರೆ. Pic Courtesy: PTI

2 /4

"ನಾನು ಗೌರವಾನ್ವಿತ ಸಿಎಂ ಅವರ ಫೋಟೋಗಳು ಮತ್ತು ವಿಡಿಯೋಗಳನ್ನು ರೆಫರೆನ್ಸ್ ಪಾಯಿಂಟ್ ಆಗಿ ಅಧ್ಯಯನ ಮಾಡಿದ್ದೇನೆ. ಅವರು ನಡೆದುಕೊಳ್ಳುವ, ಮಾತನಾಡುವ, ಸಾರ್ವಜನಿಕರೊಂದಿಗೆ ಸಂವಹನ ನಡೆಸುವ ರೀತಿ, ಎಲ್ಲವನ್ನು ಗ್ರಹಿಸಿದ್ದೇನೆ ಎಂದು ಕ್ಲೇ ಮಾಡೆಲರ್ ಮಿಂಟು ಪಾಲ್ ಪಿಟಿಐಗೆ ತಿಳಿಸಿದರು. Pic Courtesy: IANS  

3 /4

ಮಮತಾ ಬ್ಯಾನರ್ಜೀ ಹತ್ತು ಕೈಗಳನ್ನು ಹೊಂದಿದ್ದು, ಆಯುಧಗಳನ್ನು ಹಿಡಿದಿಟ್ಟುಕೊಳ್ಳುವ ಬದಲು, ಕನ್ಯಾಶ್ರೀ, ಸ್ವಸ್ಥ ಸತಿ, ರೂಪಶ್ರೀ, ಸಾಬುಜಸತಿ ಮತ್ತು ಲಕ್ಷ್ಮೀರ್ ಭಂಡಾರ್ ಸೇರಿದಂತೆ ಇತರ ಯೋಜನೆಗಳನ್ನು ರಾಜ್ಯ ಸರ್ಕಾರದ ಯೋಜನೆಗಳನ್ನು ಚಿತ್ರಿಸುತ್ತದೆ. ದುರ್ಗಾ ಪೂಜೆಯ ಸಂಘಟಕರು ತಮ್ಮ ಸರ್ಕಾರವು ಪ್ರಾರಂಭಿಸಿದ ಸಾರ್ವತ್ರಿಕವಾಗಿ ಮೆಚ್ಚುಗೆ ಪಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಹೇಳಲು ಬಯಸುತ್ತಾರೆ ಎಂದು ಪಾಲ್ ಪಿಟಿಐಗೆ ತಿಳಿಸಿದರು. Pic Courtesy: ANI

4 /4

ಪ್ರಖ್ಯಾತ ಮಣ್ಣಿನ ಮಾಡೆಲರ್ ಮಿಂಟು ಪಾಲ್ ಪಶ್ಚಿಮ ಬಂಗಾಳ ಸಿಎಂ ಅವರ ಫೈಬರ್ಗ್ಲಾಸ್ ವಿಗ್ರಹವನ್ನು ಅವರ ಕುಮಾರತುಲಿ ಸ್ಟುಡಿಯೋದಲ್ಲಿ ಕೆತ್ತುತ್ತಿದ್ದಾರೆ ಮತ್ತು ಪ್ರತಿಮೆಯ ಮೇಲೆ ಬಿಳಿ ಬಣ್ಣದ ಟಾಂಟ್ ಸೀರೆ ಉಡಿಸಲಿದ್ದಾರೆ.ಬ್ಯಾನರ್ಜಿಯ ಟ್ರೇಡ್‌ಮಾರ್ಕ್ ಫ್ಲಿಪ್-ಫ್ಲಾಪ್ ಚಪ್ಪಲಿಗಳು ದೇವತೆಯಂತಹ ಶಿಲ್ಪದಲ್ಲಿ ಪ್ರತಿಫಲಿಸುತ್ತದೆ ಎಂದು ಪಿಟಿಐ ವರದಿ ಮಾಡಿದೆ. Pic Courtesy: IANS