ಇನ್ಮುಂದೆ Facebook ನಿಂದಲೂ ಹಣಗಳಿಕೆ ಮಾಡಬಹುದು, ಈ ವಿಧಾನ ನಿಮಗೂ ಗೊತ್ತಿರಲಿ

How To Earn Money Using Facebook - ಇದುವರೆಗೆ Facebook ಕೇವಲ ಸಾಮಾಜಿಕ ಮಾಧ್ಯಮಕ್ಕಾಗಿ ಮಾತ್ರ ಬಳಕೆಯಾಗುತ್ತಿತ್ತು. ಆದರೆ, ಇದೀಗ ಬಳಕೆದಾರರು ಈ ಸಾಮಾಜಿಕ ಮಾಧ್ಯಮ ಬಳಸಿ ಕೈತುಂಬಾ ಹಣ ಸಂಪಾದನೆ ಕೂಡ ಮಾಡಬಹುದು.

How To Earn Money Using Facebook - ಇದುವರೆಗೆ Facebook ಕೇವಲ ಸಾಮಾಜಿಕ ಮಾಧ್ಯಮಕ್ಕಾಗಿ ಮಾತ್ರ ಬಳಕೆಯಾಗುತ್ತಿತ್ತು. ಆದರೆ, ಇದೀಗ ಬಳಕೆದಾರರು ಈ ಸಾಮಾಜಿಕ ಮಾಧ್ಯಮ ಬಳಸಿ ಕೈತುಂಬಾ ಹಣ ಸಂಪಾದನೆ ಕೂಡ ಮಾಡಬಹುದು. ಇತ್ತೀಚೆಗಷ್ಟೇ ಹೇಳಿಕೆ ನೀಡಿರುವ ಫೇಸ್ ಬುಕ್(Facebook), ಇನ್ಮುಂದೆ ಬಳಕೆದಾರರಿಗೆ ಅವರ ಕಂಟೆಂಟ್ ಆಧರಿಸಿ ಹಣ ಕೂಡ ನೀಡಲಾಗುವುದು ಎಂದು ಹೇಳಿದೆ. ಹಾಗಾದರೆ ಬನ್ನಿ Facebook ನಿಂದ ಹಣಗಳಿಕೆ ಮಾಡುವುದು ಹೇಗೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.

 

ಇದನ್ನೂ ಓದಿ- Gmail App New Feature: ಇನ್ಮುಂದೆ Gmailನಲ್ಲಿ e-Mail Address ಅನ್ನು Copy ಅಥವಾ Remove ಮಾಡುವುದು ಇನ್ನಷ್ಟು ಸುಲಭವಾಗಿದೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಗುರುವಾರ ಈ ಕುರಿತು ಘೋಷಣೆ ಮಾಡಿದ Facebook - ಇದಕ್ಕೆ ಸಂಬಂಧಿಸಿದಂತೆ ಗುರುವಾರ ಬ್ಲಾಗ್ ವೊಂದರ ಮೂಲಕ ಘೋಷಣೆ ಮಾಡಿರುವ Facebook, ಇನ್ಮುಂದೆ ಬಳಕೆದಾರರು ಈ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಬಳಕೆ ಮಾಡಿ, ಹಣ ಗಳಿಕೆ ಕೂಡ ಮಾಡಬಹುದು ಎಂದಿದೆ. ಹೀಗಾಗಿ ಟೆಕ್ ದಿಗ್ಗಜ ಕಂಪನಿ ಇನ್ಮುಂದೆ ಬಳಕೆದಾರರಿಗೆ ಅವರ ಕಂಟೆಂಟ್ ಗೆ ಹಣ ಕೂಡ ನೀಡಲಿದೆ.

2 /5

2. ಶಾರ್ಟ್ ವಿಡಿಯೋಗಳಿಗೆ ಸಿಗಲಿದೆ ಹಣ (Facebook Latest Update) - ಬಳಕೆದಾರರಿಂದ ಅಪ್ಲೋಡ್ ಮಾಡಲಾಗುವ ಶಾರ್ಟ್ ವಿಡಿಯೋಗಳ ಬದಲಿಗೆ ಅವರಿಗೆ ಹಣ ನೀಡಲಾಗುವುದು ಎಂದು ಫೇಸ್ ಬುಕ್ ಹೇಳಿದೆ.  

3 /5

3. ಹೇಗೆ ಸಿಗಲಿದೆ ಈ ಹಣ? (How To Earn Money Using Facebook) - ವಾಸ್ತವದಲ್ಲಿ ಬಳಕೆದಾರರಿಂದ ಅಪ್ಲೋಡ್ ಮಾಡಲಾಗುವ ವಿಡಿಯೋಗಳಲ್ಲಿ ಜಾಹೀರಾತನ್ನು ಬಿತ್ತರಿಸುವುದಾಗಿ ಕಂಪನಿ ಹೇಳಿದೆ. ಈ ಜಾಹೀರಾತುಗಳಿಂದ ಬರುವ ಒಂದು ಭಾಗವನ್ನು ಕಂಪನಿ ತನ್ನ ಬಳಿ ಇಟ್ಟುಕೊಂಡು ಉಳಿದ ಎಲ್ಲ ಹಣವನ್ನು ವಿಡಿಯೋ ಕ್ರಿಯೇಟರ್ ಗಳಿಗೆ ಬಿಟ್ಟುಕೊಡುವುದಾಗಿ ಫೇಸ್ ಬುಕ್ ಹೇಳಿದೆ.

4 /5

4. ಕನಿಷ್ಠ ಅಂದರೆ ಮೂರು ನಿಮಿಷದ್ದಾಗಿರಬೇಕು ವಿಡಿಯೋ (Facebook Latest News) - ಮಾಹಿತಿಗಳ ಪ್ರಕಾರ ಫೇಸ್ ಬುಕ್ ನಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ನಿಮಿಷಗಳ ವಿಡಿಯೋಗಳಿಗೆ (Monetize) ಹಣ ನೀಡಲಾಗುವುದು. ಈ ವಿಡಿಯೋಗಳಲ್ಲಿ ಕಂಪನಿ ಸುಮಾರು 30 ರಿಂದ 45 ಸೆಕೆಂಡ್ ಗಳ ಜಾಹೀರಾತುಗಳನ್ನು ಬಿತ್ತರಿಸಲಿದೆ.

5 /5

5. ಶೀಘ್ರವೆ ಟೆಸ್ಟಿಂಗ್ ಆರಂಭವಾಗಲಿದೆ (Facebook For Money) - ಈ ಪ್ರೋಸೆಸ್ ನ ಟೆಸ್ಟಿಂಗ್ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎಂದು ಫೇಸ್ ಬುಕ್ ಹೇಳಿಕೊಂಡಿದೆ. ಒಂದೊಮ್ಮೆ ಯಶಸ್ವಿ ಪರೀಕ್ಷೆಯ ಬಳಿಕ, ಎಲ್ಲ ಬಳಕೆದಾರರಿಗೆ ಇದನ್ನು ಜಾರಿಗೊಳಿಸಲಾಗುವುದು ಎಂದು Facebook ಹೇಳಿದೆ.