ಭಾರತ ವೈವಿಧ್ಯತೆಗಳಿಂದ ಕೂಡಿದ ದೇಶ. ನಮ್ಮ ದೇಶದಲ್ಲಿ ಅನೇಕ ನಿಗೂಢ ಸ್ಥಳಗಳಿದ್ದು, ಆ ಸ್ಥಳಗಳಿಗೆ ಭೇಟಿ ನೀಡಿದರೆ ನಿಮಗೂ ಕೂಡ ವಿಚಿತ್ರ ಎನಿಸಬಹುದು. ಅಂತಹುದೇ ಕೆಲ ಸ್ಥಳಗಳ ಉಲ್ಲೇಖ ಇಲ್ಲಿದೆ.
ನವದೆಹಲಿ: ಭಾರತದಲ್ಲಿ ಇಂತಹ ಅನೇಕ ಸ್ಥಳಗಳಿದ್ದು, ಅಲ್ಲಿನ ಸೌಂದರ್ಯ ಇಡೀ ಜಗತ್ತನ್ನೇ ಕೈಬೀಸಿ ಕರೆಯುತ್ತವೆ. ಈ ಸುಂದರ ತಾಣಗಳ ಜೊತೆಗೆ ಇಂತಹ ಅನೇಕ ತಾಣಗಳಿದ್ದು, ಈ ತಾಣಗಳು ಹಲವು ನಿಗೂಢ ರಹಸ್ಯಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿವೆ. ಈ ರಹಸ್ಯಗಳನ್ನು ತಿಳಿದುಕೊಳ್ಳಲು ಜನರು ಅಲ್ಲಿಗೆ ಭೇಟಿ ನೀಡುತ್ತಾರೆ. ಋಷಿ-ಮುನಿಗಳು ಹಾಗೂ ಅವತಾರಗಳ ಭೂಮಿ ಎಂದೇ ಖ್ಯಾತ ಭಾರತ ಒಂದು ರಹಸ್ಯಮಯ ದೇಶವೂ ಹೌದು. ಇಲ್ಲಿ ಅಂತಹ ಹಲವಾರು ಕಥೆಗಳು ಅಡಗಿದ್ದು, ಅವುಗಳನ್ನು ತಿಳಿದು ನೀವೂ ಕೂಡ ನಿಬ್ಬೆರಗಾಗುವಿರಿ. ಭಾರತದಲ್ಲಿ ಕೆಲ ನಿಘೂಢ ಸ್ಥಳಗಳಿದ್ದು, ಆ ಸ್ಥಳಗಳಿಗೆ ಭೇಟಿ ನೀಡಿದರೆ ನಿಮಗೂ ವಿಚಿತ್ರ ಅನುಭವ ಉಂಟಾಗಲಿದೆ. ಬನ್ನಿ ಇಂತಹ ಕೆಲ ತಾಣಗಳ ಕುರಿತು ತಿಳಿದುಕೊಳ್ಳೋಣ.
ಇದನ್ನು ಓದಿ- ಪ್ರಪಂಚದ ಈ 5 ದೇಶಗಳ ಜನರಿಗೆ ಕತ್ತಲೆ ಗೊತ್ತೇ ಇಲ್ವಂತೆ, 24 ಗಂಟೆ ಇಲ್ಲಿ ಸೂರ್ಯ ಬೆಳಗುತ್ತಾನಂತೆ
ಉತ್ತರಾಖಂಡದಲ್ಲಿ ಒಂದು ರಹಸ್ಯಮಯ ತಾನವಿದ್ದು, ಈ ತಾಣಕ್ಕೆ ದೇವಸ್ಥಾನ ಎಂದು ಕರೆಯಲಾಗುತ್ತದೆ. ಈ ತಾಣದ ಕೇಂದ್ರ ಹಿಮಾಲಯದ ತಪ್ಪಲುಪ್ರದೇಶ ಉತ್ತರಾಖಂಡದಲ್ಲಿದೆ. ಇದೊಂದು ದುರ್ಗಮ ತಾಣವಾಗಿದ್ದು, ಇಲ್ಲಿ ಸ್ತೂಲ ಶರೀರ ಸೌಷ್ಟ್ಯ ಹೊಂದಿದವರು ತಲುಪಲು ಸಾಧ್ಯವಿಲ್ಲ.
ಭಾರತದಲ್ಲಿ ಅನೇಕ ಕಾಡುಗಳಿವೆ, ಆದರೆ ಸುಂದರಬನ್ಸ್ ಕಾಡಿನಲ್ಲಿ ಹಲವಾರು ರೀತಿಯ ರಹಸ್ಯಗಳಿವೆ. ಈ ಕಾಡಿನಲ್ಲಿ ಅನುಭವಕ್ಕೆ ಬರುವ ಶಾಂತಿ, ರಹಸ್ಯ ಮತ್ತು ಸಾಹಸ ಬೇರೆ ಕಾಡಿನಲ್ಲಿಲ್ಲ. ಈ ಕಾಡುಗಳಲ್ಲಿ ಹೆಚ್ಚಿನ ಸಂಖ್ಯೆಯ ದೆವ್ವಗಳು ವಾಸಿಸುತ್ತವೆ ಎಂದು ಹೇಳಲಾಗುತ್ತದೆ.
ಈ ಗುಹೆಗಳನ್ನು ಎಲಿಯನ್ಸ್ ಒಂದು ಗುಂಪು ನಿರ್ಮಿಸಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಪುರಾತತ್ವ ಶಾಸ್ತ್ರಜ್ಞರ ಪ್ರಕಾರ, ಅವುಗಳನ್ನು ಕನಿಷ್ಠ 4 ಸಾವಿರ ವರ್ಷಗಳ ಹಿಂದೆ ತಯಾರಿಸಲಾಗಿದೆ ಎನ್ನಲಾಗುತ್ತದೆ. ಎಲ್ಲೋರಾ ಗುಹೆಗಳ ಕೆಳಗೆ ರಹಸ್ಯ ನಗರವಿದೆ ಎಂದು ನಂಬಲಾಗಿದೆ.
ಇದೆ ಸ್ಥಾನದಲ್ಲಿ ವಾಮನ ಅವತಾರ ತಳೆದ ವಿಷ್ಣು ದೈತ್ಯದೊರೆ ಬಲಿಗೆ ಪೃಥ್ವಿಯ ದಾನ ನೀಡಿದ್ದರು ಎಂಬುದು ಇಲ್ಲಿನ ಐತಿಹ್ಯ. ಇಲ್ಲಿ ವಿಶಾಲಕಾಯದ ಮತ್ತು ಅದ್ಭುತ ದೇವಸ್ಥಾನಗಳ ಸರಪಳಿಯೇ ಇದ್ದು, ಅದರ ಒಂದು ಭಾಗ ಸಾಗರದಲ್ಲಿ ಮುಳುಗಿಹೋಗಿದೆ.
ಭಾರತದ ಪ್ರಾಚೀನ ನಗರಗಳಲ್ಲಿ ದ್ವಾರಕಾ ನಗರಿ ಕೂಡ ಒಂದು. ಒಂದು ಕಾಲದಲ್ಲಿ ಜನರು ಇದನ್ನು ಒಂದು ಕಾಲ್ಪನಿಕ ನಗರ ಎಂದು ಕರೆಯುತ್ತಿದ್ದರು. 1979-80 ರಲ್ಲಿ ಪ್ರೊ.ರಾವ್ ಅವರ ನೇತೃತ್ವದ ತಂಡ ಸಮುದ್ರದಲ್ಲಿ ಸುಮಾರು 560 ಮೀಟರ್ ಉದ್ದವಾದ ದ್ವಾರಕಾ ನಗರದ ಗೋಡೆಯೊಂದನ್ನು ಪತ್ತೆಹಚ್ಚಿದ್ದರು.