Anti-Pregnancy Male Pill: ಪ್ರೆಗ್ನೆನ್ಸಿ ತಡೆಯಲು ಶೀಘ್ರವೇ ಬರಲಿವೆ Male Pill

Anti-Pregnancy Male Pill: ಮೇಲ್ ಪಿಲ್ ಅಂದರೆ ಪ್ರೆಗ್ನೆನ್ಸಿ ತಡೆಯುವ ಪುರುಷರ ಮಾತ್ರೆಗಳು. ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೆ ಕೂಡ ನೂತನ ವರ್ಷ ಅಂದರೆ 2021ರಲ್ಲಿ Male Birth Control Pill 2021 ಬರುವ ಸಾಧ್ಯತೆ ಇದೆ.

  • Dec 29, 2020, 21:22 PM IST

Anti-Pregnancy Male Pill: ಮೇಲ್ ಪಿಲ್ ಅಂದರೆ ಪ್ರೆಗ್ನೆನ್ಸಿ ತಡೆಯುವ ಪುರುಷರ ಮಾತ್ರೆಗಳು. ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೆ ಕೂಡ ನೂತನ ವರ್ಷ ಅಂದರೆ 2021ರಲ್ಲಿ Male Birth Control Pill 2021 ಬರುವ ಸಾಧ್ಯತೆ ಇದೆ.

 

ಇದನ್ನು ಓದಿ- BreakUP: ವಾರದ ಈ ದಿನ ಅತಿ ಹೆಚ್ಚು ಬ್ರೇಕ್ ಅಪ್ ಆಗುತ್ತವಂತೆ... ಕಾರಣ ಇಲ್ಲಿದೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಕಳೆದ 25 ವರ್ಷಗಳಿಂದ ಯುಕೆ ವಿಜ್ಞಾನಿಗಳು ಪುರುಷರ ಗರ್ಭನಿರೋಧಕ ಮಾತ್ರೆ ತಯಾರಿಸಲು ಸಂಶೋಧನೆ ನಡೆಸುತ್ತಿದ್ದಾರೆ. ವಿಜ್ಞಾನಿಗಳು ತಮ್ಮ ಸಂಶೋಧನೆ ಈಗ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ. ಇದಕ್ಕೂ ಮುಂಚೆಯೇ, ವಿಜ್ಞಾನಿಗಳು ಈ ಸಂಶೋಧನೆಯನ್ನು ಪೂರ್ಣಗೊಳಿಸುವ ಹಂತಕ್ಕೆ ತಲುಪಿದ್ದರು, ಆದರೆ ಈ ಬಾರಿ 2021 ರಲ್ಲಿ ಪುರುಷ ಮಾತ್ರೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

2 /7

ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಪುರುಷರಿಗಾಗಿ ಶೀಘ್ರದಲ್ಲಿಯೇ ಗರ್ಭ ನಿರೋಧಕ ಉತ್ಪನ್ನ ಮಾರುಕಟ್ಟೆಯಲ್ಲಿ ಬರುವ ಸಾಧ್ಯತೆ ಇದೆ. ಇವುಗಳಲ್ಲಿ ಜೆಲ್, ಮಾತ್ರೆಗಳು, ಮಾಸಿಕ ಇಂಜೆಕ್ಷನ್ ಇತ್ಯಾದಿಗಳು ಶಾಮೀಲಾಗಿವೆ.

3 /7

ಇದಕ್ಕೂ ಮೊದಲು 1950 ರಲ್ಲಿ ವಿಜ್ಞಾನಿಗಳು ಪುರುಷ ಗರ್ಭನಿರೋಧಕ ಮಾತ್ರೆಗಳನ್ನು ಅಭಿವೃದ್ಧಿಪಡಿಸಲು ಯತ್ನಿಸಿದ್ದರು. ಅಮೆರಿಕಾದ ಕಂಪನಿ ಸ್ಟರ್ಲಿಂಗ್ Anti Parasite Medication ಅಭಿವೃದ್ಧಿಪಡಿಸುತ್ತಿದ್ದ ವೇಳೆ ಇದು ಆರಂಭಗೊಂಡಿತ್ತು. ಆಗಲೇ ಪರೀಕ್ಷೆಯ ವೇಳೆ ಆಶ್ಚರ್ಯಕರ ಫಲಿತಾಂಶಗಳು ಹೊರಬಂದಿದ್ದವು. ಅಭಿವೃದ್ಧಿ ಪಡಿಸಲಾಗುತ್ತಿರುವ ಔಷಧಿಯಿಂದ ಇಲಿಗಳ ಫಲವತ್ತತೆ ಬಹುತೇಕ ನಿಂತುಹೋಗಿತ್ತು.

4 /7

ಈ ಔಷಧಿಯನ್ನು ಪುರುಷರ ಮೇಲೆ ಪರೀಕ್ಷಿಸಿದಾಗ ಪುರುಷರಲ್ಲಿ ಭಾರಿ ಪ್ರಮಾಣದಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಯಾಗಿತ್ತು. ಆದರೆ, ಬಳಿಕ ಈ ಔಷಧಿಯ ದುಷ್ಪರಿಣಾಮಗಳು ಗೋಚರಿಸತೊಡಗಿದವು. ಹಲವು ಜನರಲ್ಲಿ ವಾಂತಿ ಕಾಣಿಸಿಕೊಂಡು ಅವರು ಹಿಂಸಾತ್ಮಕ ಪ್ರವೃತ್ತಿ ತಳೆದರು. ಹೀಗಾಗಸ್ಟರ್ಲಿಂಗ್ ಈ ಮಾತ್ರೆಯ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

5 /7

ಇದಾದ ಬಳಿಕ ಪುರುಷರಲ್ಲಿ ಕೇವಲ ಎರಡು ವಿಕಲ್ಪಗಳು ಮಾತ್ರ ಬಾಕಿ ಉಳಿದುಕೊಂಡವು. ಕಾಂಡೋಮ್ ಅಥವಾ ಶಾಶ್ವತ ಸಂತಾನ ಹರಣ ಶಸ್ತ್ರಚಿಕಿತ್ಸೆ.  ಆದರೆ, ಚಿತ್ರಣ ಇದೀಗ ಬದಲಾಗಲಿದೆ. ಬ್ರಿಟನ್ ನ ಹಲವು ಜೋಡಿಗಳ ಮೇಲೆ ಇದೀಗ ಪರೀಕ್ಷೆ 

6 /7

ಉತ್ಪಾದಿಸಲಾಗುತ್ತಿರುವ ಜೆಲ್ ಹಾಗೂ ಮಾತ್ರೆಗಳಲ್ಲಿ ಸೆಸ್ಟೇರಾನ್ ಅಸಿಟೆಟ್ ಜೊತೆಗೆ ಪುರುಷರ ಟೆಸ್ಟೋಸ್ಟೇರಾನ್ ಹಾರ್ಮೋನ್ ಬಳಸಲಾಗಿದೆ. ಇದೊಂದು ಸಿಂಥೆಟಿಕ್ ಪ್ರೋಜೆಸ್ಟೀನ್ ಆಗಿದೆ. ಇದೊಂದು ಫೀಮೇಲ್ ಸೆಕ್ಸ್ ಹಾರ್ಮೋನ್ ನ ಒಂದು ವಿಧವಾಗಿದೆ. ಇದರ ಬ್ರಾಂಡ್ ಹೆಸರು Nestorone ಆಗಿದೆ. ಪ್ರಾಜೆಸ್ಟೀನ್ ಮಹಿಳೆಯರ ಹಾರ್ಮೋನ್ ಆಗಿರುವ ಪ್ರೋಜೆಸ್ಟೇರಾನ್ ನಂತೆಯೇ ಪ್ರಭಾವ ಬೀರುತ್ತದೆ.  ಈಗಾಗಲೇ ಇದನ್ನು ಅಮೆರಿಕಾದಲ್ಲಿ ಮಹಿಳೆಯರ ಗರ್ಭನಿರೋಧಕಗಳಲ್ಲಿ ಬಳಸಲಾಗುತ್ತಿದೆ.

7 /7

Nestorone ಪ್ರಮುಖವಾಗಿ ಪುರುಷರಲ್ಲಿ ಸ್ಪೆರ್ಮ್ ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತದೆ. ಟೆಸ್ಟೋಸ್ಟೆರಾನ್ ಪುರುಷರಲ್ಲಿ ನೈಸರ್ಗಿಕವಾಗಿ ಉತ್ಪಾದನೆಯಾಗುವ ಟೆಸ್ಟೋಸ್ಟೆರಾನ್ ನ ಇಳಿಕೆ ಮಾಡುತ್ತದೆ. ಇದರಿಂದ ಪುರುಷರಲ್ಲಿ ಅವರ ಲೈಂಗಿಕ ಸಾಮರ್ಥ್ಯ ಕಡಿಮೆ ಮಾಡದೆಯೇ ಸ್ಪರ್ಮ್ ಉತ್ಪಾದನೆ ನಿಯಂತ್ರಣದಲ್ಲಿಡುತ್ತದೆ.