UAN Activate: PF ಖಾತೆಯಲ್ಲಿ ಎಷ್ಟು ಹಣವಿದೆ ಪರಿಶೀಲಿಸಲು, ಹಣ ತೆಗೆಯಲು ಅಥವಾ ಖಾತೆ ಬಂದ್ ಮಾಡಲು UAN ಸಂಖ್ಯೆ ಇರುವುದು ಆವಶ್ಯಕ. ಹೀಗಾಗಿ ಒಂದು ವೇಳೆ ಇದುವರೆಗೆ ನೀವು ನಿಮ್ಮ ಖಾತೆಯ UAN ಸಂಖ್ಯೆಯನ್ನು ಸಕ್ರೀಯಗೊಳಿಸದೆ ಇದ್ದರೆ, ಆ ಕೆಲಸವನ್ನು ಈಗಲೇ ಮಾಡಿ. ಇದಕ್ಕಾಗಿ ಅತ್ಯಂತ ಸುಲಭ ವಿಧಾನ ಇಲ್ಲಿದೆ.
ನವದೆಹಲಿ: ನೌಕರಿಯಲ್ಲಿ ನಿರತರಾಗಿರುವ ಜನರಿಗೆ Employee's Provident Fund (EPF) ಒಂದು ದೊಡ್ಡ ಆಧಾರವಾಗಿದೆ. ಅಗತ್ಯವಿರುವಾಗ ಹಾಗೂ ನಿವೃತ್ತಿಯ ಬಳಿಕ EPF ಹಣ ಆರ್ಥಿಕ ಬಲ ಒದಗಿಸುತ್ತದೆ. ಒಂದು ವೇಳೆ ನಿಮ್ಮ PF ಖಾತೆಯಲ್ಲಿ ಒಂದು ಉತ್ತಮ ನಿಧಿ ಸಂಗ್ರಹವಾಗಿದ್ದರೆ, ಅತ್ಯಾವಶ್ಯಕ ಸಂದರ್ಭಗಳಲ್ಲಿ ನೀವು ಹಣಕ್ಕಾಗಿ ಬೇರೆಯವರ ಮುಂದೆ ಕೈಯೊಡ್ಡುವ ಪ್ರಸಂಗ ಬರುವುದಿಲ್ಲ. ಆದರೆ, ನಿಮ್ಮ EPF ಎಷ್ಟು ನಿಧಿ ಸಂಗ್ರಹವಾಗಿದೆ ಎಂಬುದು ನಿಮಗೆ ತಿಳಿದಿದೆಯೇ? ಇದೆಲ್ಲವನ್ನು ತಿಳಿದುಕೊಳ್ಳಲು ನಿಮ್ಮ UAN ಸಂಖ್ಯೆ ಸಕ್ರೀಯವಾಗಿರಬೇಕಾದುದು ಆವಶ್ಯಕವಾಗಿದೆ.
ಇದನ್ನು ಓದಿ- EPFO ಪಿಂಚಣಿದಾರರಿಗೆ ಇಲ್ಲಿದೆ ಒಂದು ನೆಮ್ಮದಿಯ ಸುದ್ದಿ
EPF ಎಷ್ಟು ಹಣ ಸಂಗ್ರಹವಾಗಿದೆ ಎಂಬುದನ್ನು ತಿಳಿಯಲು ಚಂದಾದಾರರಿಗೆ Universal Account Number (UAN) ಸಂಖ್ಯೆ ನೀಡಲಾಗುತ್ತದೆ. ಈ ಸಂಖ್ಯೆಯನ್ನು ಬಳಸಿ ನೀವು ನಿಮ್ಮ EPF ಖಾತೆಯಲ್ಲಿ ಬ್ಯಾಲೆನ್ಸ್ ಎಷ್ಟು ಹಾಗೂ ಇಂತಹ ಇತರೆ ಮಾಹಿತಿಗಳನ್ನು ಪರಿಶೀಲಿಸಬಹುದು. ಈ ಸಂಖ್ಯೆ ನಿಮ್ಮ ಸೇವಾ ಅವಧಿಯಲ್ಲಿ ಒಂದು ಬಾರಿ ನಿಮಗೆ ಸಿಗುತ್ತದೆ.
ನೌಕರಿ ಬದಲಾದರೂ ಕೂಡ ನಿಮ್ಮ UAN ಸಂಖ್ಯೆ ಒಂದೇ ಆಗಿರುತ್ತದೆ. ಅಂದರೆ ಪದೇ ಪದೇ ನೀವು PF ಟ್ರಾನ್ಸ್ಫರ್ ಮಾಡುವ ಆವಶ್ಯಕತೆ ಇಲ್ಲ. ನೂತನ ಕಂಪನಿಯಲ್ಲಿ ನೀವು ಕೇವಲ ನಿಮ್ಮ UAN ಸಂಖ್ಯೆ ಸಲ್ಲಿಸಿದರೆ ಸಾಕು. ಇದಕ್ಕಾಗಿ ಮೊದಲು ನೀವು ನಿಮ್ಮ UAN ಸಂಖ್ಯೆಯನ್ನು ಸಕ್ರೀಯಗೊಳಿಸಬೇಕು. ಒಂದು ವೇಳೆ ನಿಮಗೆ ನಿಮ್ಮ UAN ಸಂಖ್ಯೆ ಗೊತ್ತಿಲ್ಲ ಎಂದಾದರೆ ನೀವು ಅದನ್ನು EPFO ವೆಬ್ ಸೈಟ್ ನಿಂದ ಪತ್ತೆಹಚ್ಚಬಹುದು.
UAN ಬಳಸಿ ನೀವು ಆನ್ಲೈನ್ PF ಟ್ರಾನ್ಸ್ಫರ್, ಬ್ಯಾಲೆನ್ಸ್ ಪರಿಶೀಲನೆ ಹಾಗೂ ಹಣವನ್ನು ಹಿಂಪಡೆಯಬಹುದು. ನಿಮ್ಮ ಹಳೆ-ಹೊಸ ಎಲ್ಲಾ ಖಾತೆಗಳು ನಿಮಗೆ ಇಲ್ಲಿ ಕಾಣಿಸಿಕೊಳ್ಳಲಿವೆ.
1.UAN ಸಕ್ರೀಯಗೊಳಿಸಲು ಮೊದಲು ನೀವು EPFO ಅಧಿಕೃತ ವೆಬ್ ಸೈಟ್ https://epfindia.gov.in/site_en/ ಗೆ ಭೇಟಿ ನೀಡಬೇಕು ಮತ್ತು SERVICES ಮೇಲೆ ಕ್ಲಿಕ್ಕಿಸಬೇಕು. 2.ಬಳಿಕ FOR EMPLOYEES ಮೇಲೆ ಕ್ಲಿಕ್ಕಿಸಿ MEMBER UAN/ONLINE SERVICES ಮೇಲೆ ಕ್ಲಿಕ್ ಮಾಡಬೇಕು. 3. ಈಗ ನೀವು UAN ಪೋರ್ಟಲ್ ಗೆ ಹೋಗುವಿರಿ. ಅಲ್ಲಿ ಕೆಳಗೆ ನೀಡಲಾಗಿರುವ IMPORTANT LINKS ನಲ್ಲಿ ACTIVATE UAN ಆಯ್ಕೆ ಕಾಣಿಸಿಕೊಳ್ಳಲಿದೆ. ಅದನ್ನು ಕ್ಲಿಕ್ಕಿಸಿ.
4. ಇಲ್ಲಿ ನೀವು ನಿಮ್ಮ UAN, ಮೆಂಬರ್ ID, ಹೆಸರು, ಮೊಬೈಲ್ ನಂಬರ್, ಆಧಾರ್, ಪ್ಯಾನ್ ಸಂಖ್ಯೆ, ಇ-ಮೇಲ್ ಐಡಿಗಳಂತಹ ಮಾಹಿತಿ ಭರ್ತಿ ಮಾಡಬೇಕು. 5 ಈಗ ನೀವು Get Authorization PIN ಮೇಲೆ ಕ್ಲಿಕ್ಕಿಸಿ. 6.ಈಗ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ OTP ಬರಲಿದೆ. ಅದನ್ನು ನಮೂದಿಸಿ Validate OTP ಮೇಲೆ ಕ್ಲಿಕ್ಕಿಸಿ. 7. ಇದಾದ ಬಳಿಕ ನಿಮ್ಮ UAN ಸಂಖ್ಯೆ ಆಕ್ಟಿವೇಟ್ ಆಗಲಿದೆ.
1. ನಿಮ್ಮ UAN ಸ್ಟೇಟಸ್ ಪರಿಶೀಲಿಸಲು http://uanmembers.epfoservices.in/check_uan_status.php ಮೇಲೆ ಕ್ಲಿಕ್ಕಿಸಿ. 2.ಇದರ ನಂತರ ತೆರೆದುಕೊಳ್ಳುವ ಪುಟದಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ. 3.ಈಗ ಸಂದೇಶವೊಂದು ನಿಮ್ಮ ಮುಂದೆ ಬಿತ್ತರಗೊಳ್ಳಲಿದೆ. ಅದರಲ್ಲಿ ನಿಮಗೆ UAN ಸಂಖ್ಯೆ ಸಿಕ್ಕಿರುವ ಮಾಹಿತಿ ನೀಡಲಾಗುವುದು.