OTT Guidelines: Amazon Primeನಲ್ಲಿ ಮೂಡಿಬರುತ್ತಿರುವ 'Tandav' ಹಾಗೂ 'Mirzapur' ಕುರಿತಾದ ವಿವಾದದ ವಿವಾದದ ಬಳಿಕ Over The Top content ಅಥವಾ OTT ಪ್ಲಾಟ್ ಫಾರ್ಮ್ ಗಳ ಕಂಟೆಂಟ್ ಅನ್ನು ರೆಗ್ಯುಲೇಟ್ ಮಾಡಲು ಬೇಡಿಕೆಗಳು ಹೆಚ್ಚಾಗಿವೆ.
ನವದೆಹಲಿ: OTT Guidelines - Amazon Primeನಲ್ಲಿ ಮೂಡಿಬರುತ್ತಿರುವ 'Tandav' ಹಾಗೂ 'Mirzapur' ಕುರಿತಾದ ವಿವಾದದ ವಿವಾದದ ಬಳಿಕ Over The Top content ಅಥವಾ OTT ಪ್ಲಾಟ್ ಫಾರ್ಮ್ (OTT platforms) ಗಳ ಕಂಟೆಂಟ್ ಅನ್ನು ರೆಗ್ಯುಲೇಟ್ ಮಾಡಲು ಬೇಡಿಕೆಗಳು ಹೆಚ್ಚಾಗಿವೆ. ಸದ್ಯ ಈ ಪ್ಲಾಟ್ ಫಾರ್ಮ್ ಸ್ವಯಂನಿಯಂತ್ರಣದಿಂದ ಸಾಗುತ್ತಿದೆ. ಅಂದರೆ ಅವು ಯಾವುದೇ ಕಂಟೆಂಟ್, ಹೇಗೆ ಬೇಕಾದರೂ ಪ್ರಸ್ತುತ ಪಡಿಸಬಹುದಾಗಿದೆ. ಆದರೆ ಇನ್ಮುಂದೆ ಹಾಗೆಲ್ಲ ನಡೆಯೋದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನುಓದಿ- Porn Video Shoot ಆರೋಪದ ಮೇಲೆ 'ಗಂಧಿ ಬಾತ್' ನಟಿ ಗಹನಾ ವಸಿಷ್ಠ ಬಂಧನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
OTT ವೇದಿಕೆಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೆಕರ್ ಸಂಸತ್ತಿನಲ್ಲಿ ತಿಳಿಸಿದ್ದಾರೆ. ' ಈ ಕುರಿತಾಗಿ ನಾವು ಹಲವು ಸಲಹೆಗಳನ್ನು ಮತ್ತು ದೂರುಗಳನ್ನು ಸ್ವೀಕರಿಸುತ್ತಿದ್ದೇವೆ ಹಾಗೂ ಈಗಾಗಲೇ ಬಹುತೇಕ ಮಾರ್ಗ ಸೂಚಿಗಳು ಸಿದ್ಧಗೊಂಡಿವೆ. ಶೀಘ್ರದಲ್ಲಿಯೇ ಅವುಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಜಾವಡೆಕರ್ ಹೇಳಿದ್ದಾರೆ.
ಈ ವಿಷಯವನ್ನು ಬಿಜೆಪಿ ಸಂಸದ ಮಹೇಶ್ ಪೋದ್ದಾರ್ ಅವರು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. 'ದೇಶದಲ್ಲಿ ಸುಲಭವಾಗಿ ಲಭ್ಯವಿರುವ ಅಂತರ್ಜಾಲದ ಸೌಲಭ್ಯದಿಂದ ನೆಟ್‌ಫ್ಲಿಕ್ಸ್‌ನಂತಹ ಅನೇಕ ಒಟಿಟಿ ಪ್ಲಾಟ್‌ಫಾರ್ಮ್‌ಗಳು ವೇಗವಾಗಿ ಬೆಳೆದಿವೆ. ಕರೋನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಕಾರಣ ಚಿತ್ರಮಂದಿರಗಳು ಮುಚ್ಚಲ್ಪಟ್ಟವು. ಮನರಂಜನಾ ಸಾಧನಗಳ ಮುಚ್ಚುವಿಕೆಯೊಂದಿಗೆ ಒಟಿಟಿ ಪ್ಲಾಟ್‌ಫಾರ್ಮ್ ಗಳ ಪೆನಿಟ್ರೆಶನ್ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಆದರೆ, ಇದೇ ಸಮಯದಲ್ಲಿ ಇದು ನಮ್ಮ ದೇಶದ ಯುವಜನರ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ನಮ್ಮ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ನೇರವಾಗಿ ಇದು ನೇರವಾಗಿ ದಾಳಿ ಮಾಡಿದೆ' ಎಂದು ಅವರು ಹೇಳಿದ್ದಾರೆ.
ಝಾರ್ಖಂಡ್ ನಿಂದ ಬಿಜೆಪಿ ಸಂಸದರಾಗಿರುವ ಮಹೇಶ್ ಪೊದ್ದಾರ್, 'OTT ಪ್ಲಾಟ್ ಫಾರ್ಮ್ ಗಳಲ್ಲಿ ಬಳಕೆಯಾಗುವ ಭಾಷೆ ಹಾಗೂ ಕಂಟೆಂಟ್ ಗಳಲ್ಲಿ ಸೆಕ್ಸುವಲ್ ಡಿಸ್ಕ್ರಿಮಿನೇಷನ್ ಹಾಗೂ ಜೆಂಡರ್ ಡಿಸ್ಕ್ರಿಮಿನೇಷನ್ ಸ್ಪಷ್ಟವಾಗಿ ಕಾಣಿಸುತ್ತದೆ. ಇಂತಹ ಸಾರ್ವಜನಿಕ ಮಾಧ್ಯಮಗಳಲ್ಲಿ ಮಹಿಳೆಯರ ಕುರಿತು ಅಶ್ಲೀಲ ಶಬ್ದಗಳ ಬಳಕೆ ಮಾಡಲಾಗುತ್ತದೆ. ಈ ವೇದಿಕೆಗಳಲ್ಲಿ ಅಶ್ಲೀಲ ಹಾಗೂ ಅಭದ್ರ ಭಾಷೆಯ ಪ್ರಯೋಗ ಮಾಡಲಾಗುತ್ತದೆ. ಇಂತಹುದರಲ್ಲಿ ತಡಮಾಡದೆ ಇಂತಹ ವೇದಿಕೆಗಳ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕು' ಎಂದಿದ್ದಾರೆ.
OTT ಪ್ಲಾಟ್ಫಾರ್ಮ್ ಗಳಿಗೆ ಒಂದೊಮ್ಮೆ ಮಾರ್ಗಸೂಚಿಗಳು ಜಾರಿಯಾದರೆ, ಇದರಿಂದ ಸುಮಾರು 40 OTT ಪ್ಲಾಟ್ಫಾರ್ಮ್ ಗಳ ಮೇಲೆ ಪರಿಣಾಮ ಬೀರಲಿವೆ. ಈ ಪ್ಲಾಟ್ ಫಾರ್ಮ್ ಗಳಲ್ಲಿ Netflix, Amazon Prime ಹಾಗೂ HotStar (Disney Plus) ಗಳು ಶಾಮೀಲಾಗಿವೆ. ಎಕಾನಾಮಿಕ್ ಟೈಮ್ಸ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಇಂಟರ್ನೆಟ್ ಅಂಡ್ ಮೊಬೈಲ್ ಅಸ್ಸೋಸಿಯೇಶನ್ (IAMAI) ಸ್ವಯಂ ನಿಯಂತ್ರಣಕ್ಕೆ ಟೂಲ್ ಕಿಟ್ ಸಿದ್ಧಪಡಿಸಿದ್ದು, ಇದರಲ್ಲಿ ಹಲವು ಮಾರ್ಗಸೂಚಿಗಳಿವೆ. IAMAI ಪ್ರಕಾರ ಮಾರ್ಚ್-ಎಪ್ರಿಲ್ ನಿಂದ ವೆರಿಫಿಕೆಶನ್ ಆರಂಭ ಗೊಳ್ಳಲಿದ್ದು, ಇದು ಆಗಸ್ಟ್ ವರೆಗೆ ಸಂಪೂರ್ಣ ಕೋಡ್ ಅನ್ನು ಜಾರಿಗೊಳಿಸಲಿದೆ. ಸೆಪ್ಟೆಂಬರ್ 2020 ರಲ್ಲಿ ಮಾಹಿತಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, IAMAI ಸಿದ್ಧಪಡಿಸಿದ್ದ ಹಾಗೂ OTT ಪ್ಲಾಟ್ಫಾರ್ಮ್ ಗಳಿಗೆ ಸ್ವಯಂನಿಯಂತ್ರಿತ ಮಾರ್ಗಸೂಚಿಗಳನ್ನು ಬೆಂಬಲಿಸಲು ನಿರಾಕರಿಸಿತ್ತು. ಬಳಿಕ ನವೆಂಬರ್ 2020ರಲ್ಲಿ ಸರ್ಕಾರ ಅಧಿಸೂಚನೆಯೊಂದನ್ನು ಹೊರಡಿಸಿ ಆನ್ಲೈನ್ ಕಂಟೆಂಟ್ ಪ್ರೊವೈಡರ್ಸ್ ರನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಆಧೀನಕ್ಕೆ ತಂದಿತ್ತು.