World's First Space Hotel - ಬಾಹ್ಯಾಕಾಶದಲ್ಲಿ ಮೊದಲ ಹೋಟೆಲ್, ಯಾವ ರೀತಿ ಇರಲಿದೆ? ಇಲ್ಲಿದೆ ಝಲಕ್

World's First Space Hotel - ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶ ಹಲವು ಹೊಸ ಹೊಸ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಿದೆ. ಒಂದೆಡೆ ಹೊಸ ಹೊಸ ಗ್ರಹಗಳ ಪತ್ತೆ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದೆಡೆ ಕೆಲವರು ಬಾಹ್ಯಾಕಾಶದಲ್ಲಿ ನೆಲೆಸಲು ಯೋಜನೆ ರೂಪಿಸುತ್ತಿದ್ದಾರೆ. ಆದರೆ, ಇದೀಗ ಬಾಹ್ಯಾಕಾಶದಲ್ಲಿ ನಡೆಯಲು ಹೊರಟಿರುವ ಸಂಗತಿ ನಿಮ್ಮ ಊಹೆಗೂ ಕೂಡ ಮೀರಿದೆ.

ನವದೆಹಲಿ:  World's First Space Hotel - ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶ ಹಲವು ಹೊಸ ಹೊಸ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಿದೆ. ಒಂದೆಡೆ ಹೊಸ ಹೊಸ ಗ್ರಹಗಳ ಪತ್ತೆ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದೆಡೆ ಕೆಲವರು ಬಾಹ್ಯಾಕಾಶದಲ್ಲಿ ನೆಲೆಸಲು ಯೋಜನೆ ರೂಪಿಸುತ್ತಿದ್ದಾರೆ. ಆದರೆ, ಇದೀಗ ಬಾಹ್ಯಾಕಾಶದಲ್ಲಿ ನಡೆಯಲು ಹೊರಟಿರುವ ಸಂಗತಿ ನಿಮ್ಮ ಊಹೆಗೂ ಕೂಡ ಮೀರಿದೆ. ಹೌದು, ನೀವೂ ಕೂಡ ನಕ್ಷತ್ರ ಹಾಗೂ ಮಿನಗುವ ತಾರೆ, ಚಂದ್ರರ ಮಧ್ಯೆ ಕುಳಿತು ಊಟ-ಪಾನೀಯ ಸೇವಿಸಿ ಎಂಜಾಯ್ ಮಾಡುವ ಕನಸು ಕಾಣುತ್ತಿದ್ದರೆ. ನಿಮ್ಮ ಈ ಕನಸು ಅತಿ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ವಾಸ್ತವದಲ್ಲಿ 2027ರ ಹೊತ್ತಿಗೆ ಬಾಹ್ಯಾಕಾಶದಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿರುವ ಒಂದು ಐಷಾರಾಮಿ ಹೋಟೆಲ್ (First Space Hotel) ನಿರ್ಮಿಸಲಾಗುತ್ತಿದೆ. ಇದಕ್ಕೆ ವೋಯೇಜರ್ ಕ್ಲಾಕ್ ಸ್ಪೇಸ್ ಸ್ಟೇಷನ್ (Voyager Class Space Station) ಎಂದು ಹೆಸರಿಸಲಾಗುತ್ತಿದೆ.

 

ಇದನ್ನೂ ಓದಿ-Viral Video: ಬ್ರಹ್ಮಾಂಡದ ಧ್ವನಿ ಎಂದಾದರು ಕೇಳಿದ್ದೀರಾ? ಈ ವಿಡಿಯೋ ವೀಕ್ಷಿಸಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /10

1. ಮುಂದಿನ 6 ವರ್ಷಗಳಲ್ಲಿ ಬಾನಂಗಳದಲ್ಲಿ ಈ ಹೋಟೆಲ್ ತಲೆಯೆತ್ತಲಿದೆ - Orbital Assembly ಹೆಸರಿನ ಕಂಪನಿಯೊಂದು ಈ ಪ್ರಾಜೆಕ್ಟ್ ಮೇಲೆ ಕಾರ್ಯನಿರ್ವಹಿಸುತ್ತಿದೆ. ಮೂರು ವರ್ಷ ಹಳೆಯದಾಗಿರುವ ಈ ಕಂಪನಿ ಭೂಮಿಯ ಕೆಳಗಿನ ಕಕ್ಷೆಯಲ್ಲಿ 2025ರವರೆಗೆ ಈ ಯೋಜನೆಯ ಮೇಲೆ ಕಾರ್ಯಾರಂಭ ಮಾಡುವುದಾಗಿ ಹೇಳಿದೆ.  (ಎಲ್ಲ ಛಾಯಾಚಿತ್ರಗಳನ್ನು voyagerstation.com ಹಾಗೂ Orbital Assembly twitter ಖಾತೆಯಿಂದ  ಪಡೆಯಲಾಗಿದೆ)

2 /10

2. ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ 2027 ರಲ್ಲಿ ಈ ಹೋಟೆಲ್ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ. ಈ ಹೋಟೆಲ್ ನಲ್ಲಿ ಕೊಠಡಿಗಳು , ಬಾರ್, ರೆಸ್ಟೋರೆಂಟ್ ಹಾಗೂ ಇತರೆ ಸೌಕರ್ಯಗಳು ಕೂಡ ಇರಲಿವೆ. ಇದರ ಇನ್ಫ್ರಾಸ್ಟ್ರಕ್ಚರ್ ಭೂಮಿಯ ಮೇಲೆ ರಚಿಸಲಾಗುವುದು ಎನ್ನಲಾಗಿದೆ  (ಎಲ್ಲ ಛಾಯಾಚಿತ್ರಗಳನ್ನು voyagerstation.com ಹಾಗೂ Orbital Assembly twitter ಖಾತೆಯಿಂದ  ಪಡೆಯಲಾಗಿದೆ)

3 /10

3. ಈ ಹೋಟೆಲ್ ನಲ್ಲಿ ವೈಯಕ್ತಿಕ ಪ್ಯಾಡ್ಸ್ ಗಳನ್ನು ಒಂದು ತಿರುಗುವ ಚಕ್ರಕ್ಕೆ ಜೋಡಿಸಲಾಗುತ್ತಿದೆ. ವಿವಿಧ ಭಾಗಗಳಿಂದ ಟ್ಯೂಬ್ ಗಳನ್ನು X ಆಕಾರದಲ್ಲಿ ಕನೆಕ್ಟ್ ಮಾಡಲಾಗುವುದು. ಇದೆಲ್ಲಾ ಯಾವ ರೀತಿ ಜೋಡಣೆಯಾಗುತ್ತಿದೆ ಎಂದರೆ ಚಕ್ರದ ಅಕ್ಷವು ಆಕ್ಸಲ್ ನ ರೀತಿ ಇರಲಿದೆ.  (ಎಲ್ಲ ಛಾಯಾಚಿತ್ರಗಳನ್ನು voyagerstation.com ಹಾಗೂ Orbital Assembly twitter ಖಾತೆಯಿಂದ  ಪಡೆಯಲಾಗಿದೆ)

4 /10

4. ಈ ಹೋಟೆಲ್ (Luxury Hotel In Space) ನಲ್ಲಿ ಥೀಮ್ ಆಧಾರಿತ ರೆಸ್ಟೋರೆಂಟ್, ಹೆಲ್ತ್ ಸ್ಪಾ, ಸಿನೆಮಾ ಹಾಲ್, ಜಿಮ್, ಲೈಬ್ರೆರಿ, ಕಾನ್ಸರ್ಟ್ ವೆನ್ಯೂ, ಭೂಮಿ ವೀಕ್ಷಣೆಗಾಗಿ ಲಾಂಜ್ ವ್ಯವಸ್ಥೆ ಬಾರ್ ಹಾಗೂ ಕೊಠಡಿಗಳು ಇರಲಿವೆ. ಒಟ್ಟು 400 ಜನರಿಗಾಗಿ ವಸತಿಯ ವ್ಯವಸ್ಥೆ ಇದರಲ್ಲಿ ಇರಲಿದೆ. ಈ ಹೋಟೆಲ್ ನಲ್ಲಿ ಕ್ರೂ ಸದಸ್ಯರಿಗಾಗಿ ಪ್ರತ್ಯೇಕ ಕ್ವಾರ್ಟರ್ಸ್ ನಿಂದ ಹಿಡಿದು, ಗಾಳಿ , ನೀರು ಹಾಗೂ ವಿದ್ಯುತ್ ಲಭ್ಯವಿರಲಿದೆ.  (ಎಲ್ಲ ಛಾಯಾಚಿತ್ರಗಳನ್ನು voyagerstation.com ಹಾಗೂ Orbital Assembly twitter ಖಾತೆಯಿಂದ  ಪಡೆಯಲಾಗಿದೆ)

5 /10

5. ವೈಯಕ್ತಿಕ ಮಾಡ್ಯೂಲ್ ಖರೀದಿಗೂ ಅವಕಾಶ -  Orbital Assembly ಕಂಪನಿ ಇದಕ್ಕಾಗಿ ಸರ್ಕಾರಿ ಏಜೆನ್ಸಿಗಳನ್ನು ಸ್ಥಾಯಿ ಸ್ಟೆಕ್ ಹೋಲ್ಡರ್ ರೂಪದಲ್ಲಿ ಹುಡುಕಾಟ ನಡೆಸುತ್ತಿದೆ. ಏಕೆಂದರೆ ಕಂಪನಿ ಅಲ್ಲಿ ತನ್ನ ಟ್ರೇನಿಂಗ್ ಸೆಂಟರ್ ತೆರೆಯಲು ಬಯಸುತ್ತಿದೆ. 

6 /10

6. 90 ನಿಮಿಷಗಳಲ್ಲಿ ಭೂಮಿಯ ಒಂದು ಸುತ್ತು ತಿರುಗಲಿದೆ  -  ಈ ಹೋಟೆಲ್ 90 ನಿಮಿಷಗಳಲ್ಲಿ ಪೃಥ್ವಿಯ ಒಂದು ಸುತ್ತು ಸುತ್ತುವರೆಯಲಿದೆ. ಯಾವುದೇ ಓರ್ವ ವ್ಯಕ್ತಿ ಬಯಸಿದರೆ ಇದರಲ್ಲಿ 20x12 ಮೀಟರ್ ಗಾತ್ರದ ಪ್ರತ್ಯೇಕ ವೈಯಕ್ತಿಕ ಮಾಡ್ಯೂಲ್ ಕೂಡ ಖರೀದಿಸಬಹುದು. ಇದು ಅವರ ಪಾಲಿಗೆ ಪ್ರೈವೇಟ್ ವಿಲ್ಲಾ ರೂಪದಲ್ಲಿ ಇರಲಿದೆ.  (ಎಲ್ಲ ಛಾಯಾಚಿತ್ರಗಳನ್ನು voyagerstation.com ಹಾಗೂ Orbital Assembly twitter ಖಾತೆಯಿಂದ  ಪಡೆಯಲಾಗಿದೆ)

7 /10

7.  ವೆಚ್ಚದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ - ಈ ಸ್ಪೇಸ್ ಸ್ಟೇಷನ್ ಒಂದು ದೊಡ್ಡ ಸರ್ಕಲ್ ಗಾತ್ರದ ಆಕಾರದಲ್ಲಿರಲಿದೆ ಹಾಗೂ ಕೃತ್ರಿಮ ಗುರುತ್ವಾಕರ್ಷಣ ಶಕ್ತಿ ನಿರ್ಮಿಸಲು ಇದು ತಿರುಗಲಿದೆ. ಇದರ ಗುರುತ್ವಾಕರ್ಷಣ ಶಕ್ತಿ ಚಂದ್ರನ ಗುರುತ್ವಾಕರ್ಷಣದಷ್ಟೇ ಇರಲಿದೆ. ಆದರೆ, ಈ ಹೋಟೆಲ್ ಮೇಲೆ ಮಾಡಲಾಗುತ್ತಿರುವ ವೆಚ್ಚಗಳ ಬಗ್ಗೆ ಡೇಲಿ ಮೇಲ್ ಯಾವುದೇ ಮಾಹಿತಿ ಪ್ರಕಟಿಸಿಲ್ಲ.   (ಎಲ್ಲ ಛಾಯಾಚಿತ್ರಗಳನ್ನು voyagerstation.com ಹಾಗೂ Orbital Assembly twitter ಖಾತೆಯಿಂದ  ಪಡೆಯಲಾಗಿದೆ)

8 /10

8. ಗೇಟ್ ವೆ ಫೌಂಡೇಶನ್ ಸಂಸ್ಥಾಪಕ ಜಾನ್ ಬಿಲಿನ್ಕೊವ್ ಈ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ್ದು, 'ಇದೇ ಮುಂದಿನ ತಲೆಮಾರಿನ ಇಂಡಸ್ಟ್ರಿಯಲ್ ರೆವಲ್ಯೂಶನ್ ಆಗಿರಲಿದೆ' ಎಂದಿದ್ದಾರೆ. ಈ ವೈಸರ್ ನ ಕೆಲ ಭಾಗವನ್ನು ಗೇಟ್ ವೆ ಫೌಂಡೇಶನ್ ಮುನ್ನಡೆಸಲಿದೆ.  (ಎಲ್ಲ ಛಾಯಾಚಿತ್ರಗಳನ್ನು voyagerstation.com ಹಾಗೂ Orbital Assembly twitter ಖಾತೆಯಿಂದ  ಪಡೆಯಲಾಗಿದೆ)

9 /10

9. ಹೋಟೆಲ್ ತಯಾರಿಕೆ ಕಾರ್ಯ ರೋಬೋಟ್ ಗಳು ನಡೆಸಲಿವೆ - STAR (Structure Trust Assembly Robot) ಹೆಸರಿನ ಒಂದು ರೋಬೋಟ್ ಕಂಪನಿ ಈ ಹೋಟೆಲ್ ನ ಆರಂಭಿಕ ಸಂರಚನೆ ಸಿದ್ಧಪಡಿಸಲಿದೆ. ಆದರೆ, ಇದಕ್ಕೂ ಮೊದಲು ಕಂಪನಿ ಗುರುತ್ವಾಕರ್ಷಣಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಬೇಕಿದೆ.  (ಎಲ್ಲ ಛಾಯಾಚಿತ್ರಗಳನ್ನು voyagerstation.com ಹಾಗೂ Orbital Assembly twitter ಖಾತೆಯಿಂದ  ಪಡೆಯಲಾಗಿದೆ) 

10 /10

10. ಜನಸಾಮಾನ್ಯರೂ ಕೂಡ ಇಲ್ಲಿಗೆ ಭೇಟಿ ನೀಡಬಹುದು- ನೀವೂ ಕೂಡ ನಕ್ಷತ್ರ ಹಾಗೂ ಮಿನಗುವ ತಾರೆಗಳು ಹಾಗೂ ಚಂದ್ರರ ಮಧ್ಯೆ ಕುಳಿತು ಊಟ-ಪಾನೀಯ ಸೇವಿಸಿ ಎಂಜಾಯ್ ಮಾಡುವ ಕನಸು ಕಾಣುತ್ತಿದ್ದರೆ. ನಿಮ್ಮ ಈ ಕನಸು ಕೂಡ ಅತಿ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಏಕೆಂದರೆ ಈ ಬಾಹ್ಯಾಕಾಶ ಹೋಟೆಲ್ ಗೆ ಜನಸಾಮಾನ್ಯರು ಕೂಡ ಭೇಟಿ ನೀಡಬಹುದಾಗಿದೆ.  (ಎಲ್ಲ ಛಾಯಾಚಿತ್ರಗಳನ್ನು voyagerstation.com ಹಾಗೂ Orbital Assembly twitter ಖಾತೆಯಿಂದ  ಪಡೆಯಲಾಗಿದೆ)