Facebookನಲ್ಲಿ ಭಾರಿ ಬದಲಾವಣೆ, ನಿಮ್ಮ ಖಾಸಗಿತನ ಕಾಪಾಡಲು ಬಂತು New Feature

Facebook New Feature - ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಖಾಸಗಿತನತ್ವ ಒಂದು ಪ್ರಮುಖ ಅಂಶವಾಗಿ ಮಾರ್ಪಟ್ಟಿದೆ. ನಮ್ಮ ಪ್ರೈವೆಸಿಗೆ ಯಾರೂ ಕನ್ನ ಹಾಕಬಹುದು ಎಂಬ ಭಯದಲ್ಲಿ ನಾವು ನಿರಂತರವಾಗಿ ವ್ಯವಹರಿಸುತ್ತೇವೆ. 

Facebook New Feature - ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಖಾಸಗಿತನತ್ವ ಒಂದು ಪ್ರಮುಖ ಅಂಶವಾಗಿ ಮಾರ್ಪಟ್ಟಿದೆ. ನಮ್ಮ ಪ್ರೈವೆಸಿಗೆ ಯಾರೂ ಕನ್ನ ಹಾಕಬಹುದು ಎಂಬ ಭಯದಲ್ಲಿ ನಾವು ನಿರಂತರವಾಗಿ ವ್ಯವಹರಿಸುತ್ತೇವೆ. ಇಂತಹುದರಲ್ಲಿ ನಿಮ್ಮ ಚಾಟ್ ಅನ್ನು ಕೂಡ ಬೇರೊಬ್ಬರು ಕದ್ದು ಓದಬಹುದು ಎಂಬ ಭಯ ಕೂಡ ಕಾಡುತ್ತಿದೆ. ಇದನ್ನೇ ಗುರಿಯಾಗಿಸಿ Facebook ಅತ್ಯದ್ಭುತ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ.

 

ಇದನ್ನೂ ಓದಿ-New Facebook Update: ಭಾರತದ ಬಳಕೆದಾರರಿಗೆ ಅದ್ಭುತ ವೈಶಿಷ್ಟ್ಯ ಬಿಡುಗಡೆಗೊಳಿಸಿದ Facebook

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬಂದಿದೆ 2FA Security - IANS ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ Facebook 2FA (Two Factor Authentication) ಬಿಡುಗಡೆ ಮಾಡಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಫೇಸ್ಬುಕ್ ಈ ನೂತನ ವೈಶಿಷ್ಟ್ಯವನ್ನು ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳಿಗೂ ಜಾರಿಗೊಳಿಸಲಾಗಿದೆ 

2 /5

ಮೊಬೈಲ್ ಡಿವೈಸ್ ಗಳಿಗೆ ಬಂದಿದೆ ಹೊಸ ವೈಶಿಷ್ಟ್ಯ - ವರದಿಗಳ ಪ್ರಕಾರ Facebookನ ಈ ನೂತನ ಸೆಕ್ಯೂರಿಟಿ ವೈಶಿಷ್ಟ್ಯ ಮೊಬೈಲ್ ಫೋನ್ ಗಾಗಿ ಬಂದಿದೆ. ಡೆಸ್ಕ್ ಟಾಪ್ ಗಳಲ್ಲಿ  2FA ಸೆಕ್ಯೂರಿಟಿ ವೈಶಿಷ್ಟ್ಯ  2017ರಲ್ಲಿಯೇ ಜಾರಿಗೆ ಬಂದಿದೆ.

3 /5

ಈ ವೈಶಿಷ್ಟ್ಯ ಬಳಸಲು ಪ್ರತ್ಯೇಕ ಡಿವೈಸ್ ತೆಗೆದುಕೊಳ್ಳಬೇಕು - ಈ ಕುರಿತು ಹೇಳಿರುವ ಫೇಸ್ ಬುಕ್ ಈ ನೂತನ ವೈಶಿಷ್ಟ್ಯ ಬಳಸಲು ಬಳಕೆದಾರರು ಪ್ರತ್ಯೇಕ ಡಿವೈಸ್ ಪಡೆಯಬೇಕಾದ ಅವಶ್ಯಕತೆ ಇದೆ. ನೀವು ಒಂದು ವೇಳೆ ನಿಮ್ಮ ಮೊಬೈಲ್ ನಿಂದ ಫೇಸ್ಬುಕ್ ಗೆ ಲಾಗಿನ್ ಮಾಡಿದಾಗ ನೀವು ಮೊಬೈಲ್ ಮೂಲಕ ಕೀ ನಮೂದಿಸಬೇಕಾಗಲಿದೆ.

4 /5

ಸೆಲೆಬ್ರಿಟಿ ಹಾಗೂ ಮುಖಂಡರಿಗೆ ಲಾಭದಾಯಕ - ವರದಿಗಳ ಪ್ರಕಾರ Facebook ನಲ್ಲಿ ಈಗಾಗಲೇ ಇರುವ ಸೆಲಿಬ್ರಿಟಿ, ರಾಜಕೀಯ ಮುಖಂಡರು ಹಾಗೂ ಮಾನವಾಧಿಕಾರ ಕಾರ್ಯಕರ್ತರಿಗೆ ಈ ನೂತನ ವೈಶಿಷ್ಟ್ಯ ದಿಂದ ಲಾಭ ಸಿಗಲಿದೆ. ಈ ಗಣ್ಯರ ಫೇಸ್ಬುಕ್ ಖಾತೆ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

5 /5

ಟ್ವಿಟ್ಟರ್ ನಲ್ಲಿ ಈಗಾಗಲೇ ಇಂತಹ ವೈಶಿಷ್ಟ್ಯ- ಇತೀಚೆಗಷ್ಟೇ ಮೈಕ್ರೋ ಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟ್ಟರ್ ಕೂಡ ಇಂತಹುದೇ ಒಂದು ವೈಶಿಷ್ಟ್ಯ ಬಿಡುಗಡೆಗೊಳಿಸಿದೆ.