GST on Notice Period: ನೌಕರ ವರ್ಗದವರಿಗಾಗಿ ಒಂದು ಮಹತ್ವದ ಸುದ್ದಿ ಪ್ರಕಟಗೊಂಡಿದೆ,. ಹೌದು, ಇನ್ಮುಂದೆ ನೋಟಿಸ್ ಕಾಲಾವಧಿಯನ್ನು ಪೂರೈಸದೇ ಒಂದು ವೇಳೆ ನೀವು ನೌಕರಿಯನ್ನು ತೊರೆದರೆ....
GST on Notice Period: ನೌಕರ ವರ್ಗದವರಿಗಾಗಿ ಒಂದು ಮಹತ್ವದ ಸುದ್ದಿ ಪ್ರಕಟಗೊಂಡಿದೆ,. ಹೌದು, ಇನ್ಮುಂದೆ ನೋಟಿಸ್ ಕಾಲಾವಧಿಯನ್ನು ಪೂರೈಸದೇ ಒಂದು ವೇಳೆ ನೀವು ನೌಕರಿಯನ್ನು ತೊರೆದರೆ ಶೇ.18ರಷ್ಟು GST ಪಾತಿಸಬೇಕಾಗಲಿದೆ. ಸಾಮಾನ್ಯವಾಗಿ ನೋಟಿಸ್ ಪಿರಿಯಡ್ ಪೂರ್ಣಗೊಳಿಸದೆಯೇ ನೌಕರಿಯನ್ನು ಬಿಡುವ ನೌಕರರು ನೋಟಿಸ್ ಪಿರಿಯಡ್ ನ ಬಾಕಿ ಉಳಿದ ದಿನಗಳಿಗಾಗಿ ಕಂಪನಿಗೆ ಹಣ ಮರುಪಾವತಿಸಬೇಕಾಗುತ್ತದೆ.
ಇದನ್ನು ಓದಿ- GSTಗೆ ಅನುಗುಣವಾಗಿ Flat ದರ ಇಳಿಕೆ ಮಾಡದೆ ಇರುವ ಬಿಲ್ಡರ್ ಗಳ ಮೇಲೆ ಕ್ರಮ ಆರಂಭಿಸಿದ NAA
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನೋಟಿಸ್ ಅವಧಿಯನ್ನು ಪೂರ್ಣಗೊಳಿಸದೆ ನೌಕರಿಯನ್ನು ತೊರೆಯುವ ನೌಕರರು ಇನ್ಮುಂದೆ ಕಂಪನಿಗೆ ಒಂದು ನಿಶ್ಚಿತ ಧನರಾಶಿಯನ್ನು ಕಂಪನಿಗೆ ಮರುಪಾವತಿಸುವುದರ ಜೊತೆಗೆ ಸರ್ಕಾರಕ್ಕೆ ಶೇ.18ರಷ್ಟು ಜಿಎಸ್ಟಿ ಪಾವತಿಸುವುದು ಕಡ್ಡಾಯಗೊಳಿಸಲಾಗಿದೆ. The Gujarat Authority of Advance Ruling ಈ ಕುರಿತು ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದೆ. ಈ ನಿರ್ಧಾರದ ಪ್ರಕಾರ ಯಾವುದೇ ಕಂಪನಿಯ ನೌಕರರು ನೋಟಿಸ್ ಅವಧಿಯನ್ನು ಪೂರ್ಣಗೊಲಿಸದೆಯೇ ನೌಕರಿಯನ್ನು ತೊರೆದರೆ, ಉಳಿದ ಅವಧಿಯ ಸಂಬಳವನ್ನು ಕಂಪನಿಗೆ ಮರುಪಾವತಿಸುವುದರ ಜೊತೆಗೆ ಸರ್ಕಾರಕ್ಕೆ ಶೇ.18 ರಷ್ಟು GST ಪಾವತಿಸಬೇಕು ಎಂದು ಹೇಳಲಾಗಿದೆ.
ಪ್ರಕರಣವೊಂದರ ವಿಧಾರನೆಯ ವೇಳೆ ಪ್ರಾಧಿಕಾರ ಈ ತೀರ್ಪು ಪ್ರಕಟಿಸಿದೆ. ಅಹ್ಮದಾಬಾದ್ ಮೂಲದ ಕಂಪನಿಯಾಗಿರುವ Amneal Pharmaceuticalsನ ನೌಕರರೊಬ್ಬರು ಅಡ್ವಾನ್ಸ್ ರೂಲಿಂಗ್ ಬೇಡಿಕೆಯನ್ನು ಸಲ್ಲಿಸಿದ್ದರು. ಇದರಲ್ಲಿ ಆ ನೌಕರ ಕಂಪನಿಯ 3 ತಿಂಗಳ ನೋಟಿಸ್ ಅವಧಿ ಪೂರ್ಣಗೊಲಿಸದೆಯೇ ನೌಕರಿ ತೊರೆಯಲು ಅನುಮತಿ ಕೋರಿದ್ದರು. ಇದರ ವಿಚಾರಣೆ ನಡೆಸಿರುವ ಪ್ರಾಧಿಕಾರ, ಯಾವುದೇ ಓರ್ವ ನೌಕರ ನಿಯುಕ್ತಿ ಪತ್ರದಲ್ಲಿ ಸೂಚಿಸಲಾಗಿರುವ ನೋಟಿಸ್ ಅವಧಿಯನ್ನು ಪೂರ್ಣಗೊಳಿಸದೆಯೇ ನೌಕರಿಯನ್ನು ತೊರೆದರೆ ಅಂತಹ ನೌಕರರು ಶೇ.18 ರಷ್ಟು GST ಪಾವತಿಸಬೇಕು ಎಂದಿದೆ.
ಸಾಮಾನ್ಯವಾಗಿ ಯಾವುದೇ ಕಂಪನಿ ತನ್ನ ನೌಕರರಿಗೆ ಅಪಾಯಿಂಟ್ಮೆಂಟ್ ಲೆಟರ್ ನೀಡುವಾಗ, ಆ ಪತ್ರದಲ್ಲಿ ನೋಟಿಸ್ ಕಾಲಾವಧಿಯ ಕುರಿತು ಉಲ್ಲೇಖಿಸಿರುತ್ತದೆ. ಇದು ಹುದ್ದೆ ಹಾಗೂ ವರಿಷ್ಠತೆಯ ಆಧಾರದ ಮೇಲೆ ವಿಭಿನ್ನವಾಗಿರುತ್ತದೆ. ಯಾವುದೇ ನೌಕರ ನೌಕರಿ ತೊರೆಯಲು ಬಯಸುತ್ತಿದ್ದರೆ ಆ ನೌಕರ ಮೊದಲು ನೋಟಿಸ್ ಪಿರಿಡ್ ಪಾಲಿಸುವುದು ಕಡ್ಡಾಯವಾಗಿರುತ್ತದೆ. ಕಂಪನಿಯ ಪಾಲಿಗೆ ಇದೊಂದು ರೀಸೆಟಲ್ಮೆಂಟ್ ಅವಧಿಯಾಗಿರುತ್ತದೆ. ಒಂದು ವೇಳೆ ನೌಕರ ನೋಟಿಸ್ ಪಿರಿಯಡ್ ನಲ್ಲಿ ಕಡಿಮೆ ಕೆಲಸ ಮಾಡಿದರೆ, ತಾವು ಕೆಲಸ ಮಾಡದ ದಿನಗಳ ಹಣವನ್ನು ನೌಕರರು ಕಂಪನಿಗೆ ಮರುಪಾವತಿಸಬೇಕು.