Jupiter ಹಾಗೂ Saturn ಗ್ರಹಗಳ ಅಪರೂಪದ ಮಿಲನ, 400 ವರ್ಷಗಳ ಬಳಿಕ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ದೃಶ್ಯ

400 ವರ್ಷಗಳ ನಂತರ ಬರುತ್ತಿರುವ ಗುರು ಹಾಗೂ ಶನಿ ಗ್ರಹಗಳ ಮಿಲನದ ಅದ್ಭುತ ಸಂಯೋಗವನ್ನು ಒಂದು ವೇಳೆ ನೀವು ತಪ್ಪಿಸಿಕೊಂಡರೆ ಮತ್ತೆ ಈ ದೃಶ್ಯ ನೋಡಲು ನೀವು 2080 ರವರೆಗೆ ಕಾಯಬೇಕಾಗಲಿದೆ.

  • Dec 06, 2020, 19:37 PM IST

ನವದೆಹಲಿ: ಸುಮಾರು 400 ವರ್ಷಗಳ ಬಳಿಕ ಗುರು(Jupiter) ಹಾಗೂ ಶನಿ (Saturn) ಗ್ರಹಗಳು ಪರಸ್ಪರ ಹತ್ತಿರಕ್ಕೆ ಬರಲಿವೆ. ಈ ದುರ್ಲಭ ಸಂಯೋಗದ ವೇಳೆ ಎರಡೂ ಗ್ರಹಗಳು ಒಂದು ಹೊಳೆಯುತ್ತಿರುವ ನಕ್ಷತ್ರದಂತೆ ಕಂಡುಬರಲಿವೆ. ಡಿಸೆಂಬರ್ 21ರಂದು ಈ ಅದ್ಭುತ ದೃಶ್ಯ ಕಾಣಿಸಿಕೊಳ್ಳಲಿದೆ.

 

ಇದನ್ನು ಓದಿ-ಸೌರ ಮಂಡಲದ ಈ ಗ್ರಹದಲ್ಲಿ ಕಾಣಿಸಿಕೊಂಡ ಮಿಂಚಿನಿಂದ ಕೂಡಿದ ಬಿರುಗಾಳಿ, ಇಲ್ಲಿವೆ photos

1 /5

ಎಂಪಿ ಬಿರ್ಲಾ ಪ್ಲಾನೆಟೇರಿಯಂನ ನಿರ್ದೇಶಕ ದೆಬಿ ಪ್ರಸಾದ್ ಡುಯಾರಿ ಹೇಳುವಂತೆ 1623 ರ ಬಳಿಕ ಈ ಎರಡು ಗ್ರಹಗಳು ಇಷ್ಟೊಂದು ಹತ್ತಿರ ಎಂದಿಗೂ  ಕಾಣಿಸಿಕೊಂಡಿಲ್ಲ. ನಾನೂರು ವರ್ಷಗಳ ನಂತರ, ಇಂತಹ ಕಾಕತಾಳೀಯ ಘಟನೆ ನಡೆಯುತ್ತಿದೆ.

2 /5

ಈ ಕುರಿತು ಹೇಳಿರುವ ಅವರು, ಯಾವುದೇ ಎರಡು ಖಗೋಲಿಯ ಪಿಂಡಗಳು ಭೂಮಿಯಿಂದ ಪರಸ್ಪರ ಹತ್ತಿರಕ್ಕೆ ಕಾಣಿಸಿಕೊಂಡರೆ ಈ ಘಟನಾ ಕ್ರಮವನ್ನು ಕಂಜಕ್ಷನ್ ಎಂದು ಕರೆಯುತ್ತಾರೆ. ಶನಿ ಹಾಗೂ ಗುರು ಗ್ರಹದ ಈ ಅಪರೂಪದ ಸಂಗಮವನ್ನು ಗ್ರೇಟ್ ಕಂಜಕ್ಷನ್ ಎಂದು ಕರೆಯುತ್ತಾರೆ ಎಂದಿದ್ದಾರೆ.  

3 /5

ಇದಾದ ಬಳಿಕ ಎರಡೂ ಗ್ರಹಗಳು 15 ಮಾರ್ಚ್ 2080ರಲ್ಲಿ ಮತ್ತೆ ಪರಸ್ಪರ ಹತ್ತಿರಕ್ಕೆ ಬರಲಿವೆ.

4 /5

ಈ ಕುರಿತು ಹೇಳಿರುವ ದುಯಾರಿ, ಡಿಸೆಂಬರ್ 21ರಂದು ಈ ಎರಡೂ ಗ್ರಹಗಳು ನಡುವಿನ ಅಂತರ 73.5 ಕೋಟಿ ಕಿಲೋಮೀಟರಗಳಷ್ಟಿರಲಿದೆ ಎಂದಿದ್ದಾರೆ. ಡಿ.21ರವರೆಗೆ ಈ ಎರಡೂ ಗ್ರಹಗಳು ಸ್ವಲ್ಪ ಸ್ವಲ್ಪ ಹತ್ತಿರಕ್ಕೆ ಬರಲಿವೆ ಎಂದು ಅವರು ಹೇಳಿದ್ದಾರೆ.

5 /5

ಭಾರತದ ಬಹುತೇಕ ಪಟ್ಟಣಗಳಿಂದ ಸೂರ್ಯಾಸ್ತದ ಬಳಿಕ ಈ ಅದ್ಭುತ ಘಟನೆಯನ್ನು ವಿಕ್ಷೀಸಬಹುದಾಗಿದೆ.