Photo Gallery: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುಂಗಾರು ಬೆಡಗಿ ನಟಿ ಪೂಜಾ ಗಾಂಧಿ

ನಟಿ ಪೂಜಾ ಗಾಂಧಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ನೇಹಿತ ಹಾಗೂ ಉದ್ಯಮಿ ವಿಜಯ್ ಜೊತೆ ಹೊಸ ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.ಅವರ ಮಂತ್ರ ಮಾಂಗಲ್ಯ ವಿವಾಹದ ಸುಂದರ ಕ್ಷಣಗಳು ಇಲ್ಲಿವೆ.

 

 

1 /6

ಯೋಗರಾಜ್ ಭಟ್, ಸುಧಾರಾಣಿ, ಶುಭ ಪೂಂಜಾ, ಸುಮನಾ ಕಿತ್ತೂರು, ಸಾಹಿತಿ ಜಯಂತ್ ಕಾಯ್ಕಿಣಿ ಸೇರಿದಂತೆ ಹಲವಾರು ಗಣ್ಯರು ನವಜೋಡಿಗೆ ಶುಭ ಕೋರಿದ್ದಾರೆ.

2 /6

ಒಬ್ಬ ನಟಿಯಾದರೂ ಸಹ ನಾಲ್ವರಿಗೆ ಮಾದರಿಯಾಗುವಂತೆ ತಾವೇ ಕನ್ನಡದಲ್ಲಿ ಆಮಂತ್ರಣ ಪತ್ರಿಕೆ ಬರೆದು ಸರಳವಾಗಿ ಮಂತ್ರ ಮಾಂಗಲ್ಯ‌ದ ಮೂಲಕ ಮದುವೆಯಾಗಿರುವುದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದಂತಾಗಿದೆ.

3 /6

ಪರಭಾಷಿಕರಾದರೂ ಕನ್ನಡದ ಮೇಲೆ ಅಪಾರ ಒಲವು ಬೆಳೆಸಿಕೊಂಡು ಕನ್ನಡ ಕಲಿತು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಕನ್ನಡ ಮೇಲೆ ಕಾಳಜಿ ತೋರಿಸುವ ನಟಿ ಪೂಜಾಗಾಂಧಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

4 /6

ಕನ್ನಡವನ್ನು, ಕನ್ನಡತನವನ್ನು ಮೆಚ್ಚಿ ಅಪ್ಪಟ ಕನ್ನಡ ನಾಡಿನ ಸರಳ ಸಂಪ್ರದಾಯದ ಮೂಲಕ ನಟಿ ಪೂಜಾ ಗಾಂಧಿ ಅವರು ಇಂದು ಸರಳವಾಗಿ ಮದುವೆಯಾಗಿದ್ದಾರೆ.    

5 /6

ಮುಂಗಾರು ಮಳೆ ಬೆಡಗಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದು ಎಲ್ಲ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ

6 /6

ಯಲಹಂಕದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಪೂಜಾ ಗಾಂಧಿ ಇಂದು ಮದುವೆಯಾಗಿದ್ದಾರೆ