Food Order ಮಾಡಿದ ಯುವತಿಯ ಮನೆ ತಲುಪಿದ 42 Food Delivery Boys, ಬೆಚ್ಚಿಬಿದ್ದ ಗಲ್ಲಿ ಜನರು

ಫಿಲಿಪೈನ್ಸ್ ನಿಂದ ಒಂದು ಕುತೂಹಲಕಾರಿ ವರದಿ ಹೊರಹೊಮ್ಮಿದೆ. ಇಲ್ಲಿನ ಒಂದು ಯುವತಿ ಆನ್ಲೈನ್ ನಲ್ಲಿ ಫುಡ್  ಆರ್ಡರ್ ಮಾಡಿದ್ದಳು. ಅವಳ ಆರ್ಡರ್ ಡಿಲೆವರಿ ಮಾಡಲು 42 ಫುಡ್ ಡೆಲಿವರಿ ಬಾಯ್ಸ್ ಅವಳ ಮನೆ ತಲುಪಿದ್ದಾರೆ.
 

  • Dec 03, 2020, 19:35 PM IST

ಮನಿಲಾ: ಫಿಲಿಪೈನ್ಸ್ ನಿಂದ ಒಂದು ಕುತೂಹಲಕಾರಿ (Strange Incident) ವರದಿ ಹೊರಹೊಮ್ಮಿದೆ. ಇಲ್ಲಿನ ಒಂದು ಯುವತಿ ಆನ್ಲೈನ್ ನಲ್ಲಿ ಫುಡ್ ಆರ್ಡರ್ (Online Food) ಮಾಡಿದ್ದಳು. ಅವಳ ಆರ್ಡರ್ ಡಿಲೆವರಿ ಮಾಡಲು 42 ಫುಡ್ ಡೆಲಿವರಿ ಬಾಯ್ಸ್ (Delivary Boys)ಅವಳ ಮನೆ ತಲುಪಿದ್ದಾರೆ.

 

ಇದನ್ನು ಓದಿ- ಆನ್‌ಲೈನ್‌ನಲ್ಲಿ 142 ರೂ. ಊಟ ಆರ್ಡರ್ ಮಾಡಿದ್ದಕ್ಕೆ ಖಾತೆಯಿಂದ ಡ್ರಾ ಆದ ಹಣ ಎಷ್ಟು ಗೊತ್ತಾ?

1 /4

'ಸನ್ ಸ್ಟಾರ್ ಡಾಟ್ ಕಾಂ'ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಫಿಲಿಪೈನ್ಸ್ ನ ಸೇಬು ಸಿಟಿಯ ಶಾಲೆಯೊಂದರಲ್ಲಿ ಓದುತ್ತಿರುವ ಯುವತಿ ಮಧ್ಯಾಹ್ನ ಫುಡ್ ಆಪ್ ಮೂಲಕ ಆಹಾರಕ್ಕೆ ಆರ್ಡರ್ ನೀಡಿದ್ದಳು. ಬಳಿಕ ಅವಳು ತನ್ನ ಅಜ್ಜಿಯ ಜೊತೆಗೆ ಮನೆಯಲ್ಲಿ ಆಹಾರಕ್ಕಾಗಿ ದಾರಿ ಕಾಯುತ್ತಿದ್ದಳು. ನಂತರ ನಡೆದಿದ್ದೆಲ್ಲವೂ ಎಲ್ಲರನ್ನು ನಿಬ್ಬೇರಗಾಗಿಸಿದೆ.

2 /4

ಫುಡ್ ಆರ್ಡರ್ ಮಾಡಿದ ಕೆಲವೇ ಸಮಯದ ಬಳಿಕ ಯುವತಿಯ ಗಲ್ಲಿಯಲ್ಲಿ ಒಂದರ ಮೇಲೊಂದರಂತೆ ಹಲವಾರು ಡೆಲಿವರಿ ಬಾಯ್ ಗಳು ಯುವತಿಯ ಗಲ್ಲಿಯಲ್ಲಿ ಬಂದಿದ್ದಾರೆ. ನೋಡುತ್ತಲೇ ಒಟ್ಟು 42 ಡಿಲೆವರಿ ಬಾಯ್ ಗಳು ಅಲ್ಲಿ ಜಮಾಯಿಸಿದ್ದಾರೆ. ಏನು ನಡೆಯುತ್ತಿದೆ ಎಂಬುದು ಎಲ್ಲರ ಊಹೆಗೂ ಮೀರಿತ್ತು.

3 /4

ಇದರಿಂದ ಗಲ್ಲಿಯಲ್ಲಿ ಸೃಷ್ಟಿಯಾದ ದೃಶ್ಯವನ್ನು ನೋಡಲು ಜನರು ತಮ್ಮ ತಮ್ಮ ಮನೆಗಳಿಂದ ಹೊರಬರಲು ಆರಂಭಿಸಿದ್ದಾರೆ. ಸ್ಥಳೀಯ ಯುವಕನೋರ್ವ ಈ ದೃಶ್ಯಾವಳಿಯನ್ನು ಸೆರೆಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಕೊನೆಗೆ ಇದೆಲ್ಲವೂ ಹೇಗೆ ನಡೆಯಿತು ಎಂಬುದು ಪತ್ತೆಹಚ್ಚಲಾಗಿದೆ.  

4 /4

ವಾಸ್ತವವಾಗಿ ಹೇಳುವುದಾದರೆ, ಇದೆಲ್ಲವೂ ಕೂಡ ಫುಡ್ ಡೆಲಿವರಿ ಆಪ್ ನಲ್ಲಾದ ತಾಂತ್ರಿಕ ತೊಂದರೆಯ ಕಾರಣ ಸಂಭವಿಸಿದೆ. ಈ ತಾಂತ್ರಿಕ ತೊದರೆಯ ಕಾರಣ ಯುವತಿ ನೀಡಿದ ಫುಡ್ ಆರ್ಡರ್ ಒಟ್ಟು 42 ಫುಡ್ ಡೆಲಿವರಿ ಬಾಯ್ ಗೆ ತಲುಪಿದೆ. ಈ ಕಾರಣದಿಂದ ಎಲ್ಲರು ಕೂಡ ಫುಡ್ ಆರ್ಡರ್ ತೆಗೆದುಕೊಂದು ಯುವತಿಯ ಮನೆಗೆ ತಲುಪಿದ್ದಾರೆ.