ಈ ಆರೋಗ್ಯ ಸಮಸ್ಯೆ ಇರುವವರು ನೆಲ್ಲಿಕಾಯಿ ಜ್ಯೂಸ್ ಸೇವಿಸಬಾರದು...ಇಲ್ದಿದ್ರೆ!

Amla Side Effects: ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲಾ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಆರೋಗ್ಯದ ಜೊತೆಗೆ ಕೂದಲು ಮತ್ತು ತ್ವಚೆಗೂ ಪ್ರಯೋಜನಕಾರಿಯಾಗಿದೆ. ಆದರೆ ಕೆಲ ಜನರ ಪಾಲಿಗೆ ಇದು ವರದಾನ ಸಾಬೀತಾಗುವ ಬದಲು ಹಾನಿಕಾರಕ ಸಾಬೀತಾಗುತ್ತದೆ.
 

ಬೆಟ್ಟದ ನೆಲ್ಲಿಕಾಯಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಆರೋಗ್ಯದ ಜೊತೆಗೆ ಕೂದಲು ಮತ್ತು ತ್ವಚೆಗೂ ಪ್ರಯೋಜನಕಾರಿಯಾಗಿದೆ. ಹೀಗಾಗಿ ಇದನ್ನು ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಬಳಸಲಾಗುತ್ತದೆ. ಆದರೆ ಎಲ್ಲರಿಗೂ ತಿಳಿದಿರುವಂತೆ, ಪ್ರತಿಯೊಂದಕ್ಕೂ ಅನುಕೂಲಗಳು ಮತ್ತು ಅನಾನುಕೂಲತೆಗಳು ಇದ್ದೆ ಇರುತ್ತವೆ. ಆಮ್ಲಾ ವಿಷಯದಲ್ಲೂ ಹಾಗೆಯೇ ಇದೆ. ಹೌದು, ಕೆಲವೊಂದು ಆರೋಗ್ಯ ಸ್ಥಿತಿಗಳ ಸಂದರ್ಭದಲ್ಲಿ ಬೆಟ್ಟದ ನೆಲ್ಲಿಕಾಯಿ ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡಬಹುದು, ಹೀಗಾಗಿ ಅದನ್ನು ಕೆಲವು ಸಂದರ್ಭಗಳಲ್ಲಿ ಸೇವಿಸಬಾರದು. ಇಂತಹ ಪರಿಸ್ಥಿತಿಯಲ್ಲಿ, ನೀವು ಈ ಕೇಳಗೆ ಸೂಚಿಸಲಾಗಿರುವ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ, ನೀವು ಬೆಟ್ಟದ ನೆಲ್ಲಿಕಾಯಿ ಅಥವಾ ಅದರ ಜ್ಯೂಸ್ ಸೇವಿಸಬಾರದು. ಯಾವ ಜನರು ಆಮ್ಲಾ ಸೇವಿಸಬಾರದು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ಈ ಆರೋಗ್ಯ ಸ್ಥಿತಿಗಳ ಸಂದರ್ಭದಲ್ಲಿ ಆರೋಗ್ಯಕ್ಕೆ ಅಪಾಯಕಾರಿ ಪಪ್ಪಾಯಿ ಸೇವನೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮೂತ್ರಪಿಂಡದ ಕಲ್ಲು- ನೀವು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೊಂದಿದ್ದರೆ ಅಥವಾ ಈ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ನೀವು ಮರೆತೂ ಕೂಡ ಆಮ್ಲಾವನ್ನು ಸೇವಿಸಬಾರದು. ಏಕೆಂದರೆ ನೆಲ್ಲಿಕಾಯಿಯಲ್ಲಿ ಹೆಚ್ಚಿನ ಆಕ್ಸಲೇಟ್ ಇದ್ದು ಇದು ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಅದಕ್ಕಾಗಿಯೇ ಕಿಡ್ನಿ ಸ್ಟೋನ್ ನಿಂದ ಬಳಲುತ್ತಿರುವವರು ಅಪ್ಪಿತಪ್ಪಿಯೂ ಆಮ್ಲಾ ಸೇವಿಸಬಾರದು.  

2 /4

ಔಷಧಿಯನ್ನು ತೆಗೆದುಕೊಳ್ಳುವ ಜನರು-ನೀವು ಯಾವುದೇ ರೀತಿಯ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ. ನೀವು ಆಮ್ಲಾವನ್ನು ಸೇವಿಸುವುದನ್ನು ತಪ್ಪಿಸಬೇಕು. ಹೌದು, ನೀವು ಮಧುಮೇಹ ರೋಗಿಗಳಾಗಿದ್ದರೆ ಅಥವಾ ನೀವು BP ಔಷಧಿ ತೆಗೆದುಕೊಳ್ಳುತ್ತಿದ್ದರೆ, ನೀವು ಆಮ್ಲಾ ಅಥವಾ ಅದರ ಜ್ಯೂಸ್ ಸೇವಿಸುವುದನ್ನು ತಪ್ಪಿಸಬೇಕು.  

3 /4

ನೆಲ್ಲಿಕಾಯಿಗೆ ಅಲರ್ಜಿ ಇರುವವರು-ಆಮ್ಲಾ ಜ್ಯೂಸ್ ಅಥವಾ ಅಮಲಾ ನಿಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದಾರೆ ಅಥವಾ ಆಮ್ಲಾ ತಿಂದ ನಂತರ ನಿಮಗೆ ಯಾವುದೇ ಸಮಸ್ಯೆ ಉಂಟಾದರೆ, ನೀವು ಮರೆತೂ ಆಮ್ಲಾವನ್ನು ಸೇವಿಸಬಾರದು. ಮತ್ತೊಂದೆಡೆ, ನಿಮಗೆ ಉಸಿರಾಟದ ತೊಂದರೆ ಇದ್ದರೆ ಅಥವಾ ನಿಮಗೆ ಅಸ್ತಮಾ ಇದ್ದರೆ, ಆಮ್ಲಾವನ್ನು ಸೇವಿಸಬೇಡಿ.  

4 /4

ಗರ್ಭಿಣಿಯರು-ಆಮ್ಲಾವನ್ನು ಸಾಮಾನ್ಯವಾಗಿ ಮಹಿಳೆಯರಿಗೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ, ಆದರೆ ನೀವು ನಿಮ್ಮ ಮಗುವಿಗೆ ಹಾಲುಣಿಸುತ್ತಿದ್ದರೆ, ನಂತರ ನೀವು ಆಮ್ಲಾವನ್ನು ಸೇವಿಸುವುದನ್ನು ತಪ್ಪಿಸಬೇಕು. (ಹಕ್ಕುತ್ಯಾಗ-ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)