November Month Big Changes: ನವೆಂಬರ್ (November 2021) ಆರಂಭವಾಗಲಿದೆ. ಈ ಹೊಸ ತಿಂಗಳಲ್ಲಿ, ನಿಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಲಿವೆ.
November Month Big Changes: ನವೆಂಬರ್ (November 2021) ಆರಂಭವಾಗಲಿದೆ. ಈ ಹೊಸ ತಿಂಗಳಲ್ಲಿ, ನಿಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಈ ಬದಲಾವಣೆಗಳಲ್ಲಿನ ಒಂದು ಬದಲಾವಣೆ ನಿಮ್ಮ ಜೇಬಿನ ಭಾರವನ್ನು ಹೆಚ್ಚಿಸಬಹುದು. ಇದಲ್ಲದೇ ಕೆಲವು ಸಂದರ್ಭಗಳಲ್ಲಿ ಪರಿಹಾರವೂ ದೊರೆಯಲಿದೆ. ಅಷ್ಟೇ ಅಲ್ಲ ನವೆಂಬರ್ ನಲ್ಲಿ ಗಳಿಸುವ ಅವಕಾಶವೂ ದೊರೆಯಲಿದೆ.
1. ಅಡುಗೆ ಅನಿಲ (LPG) ದುಬಾರಿಯಾಗಲಿದೆ - ನವೆಂಬರ್ ಮೊದಲ ವಾರದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. PTI ಸುದ್ದಿ ಸಂಸ್ಥೆ ಈ ಇತ್ತೀಚಿಗೆ ಈ ಕುರಿತು ವರದಿ ಮಾಡಿದೆ. ಎಲ್‌ಪಿಜಿಯ ವಿಷಯದಲ್ಲಿ, ವೆಚ್ಚಕ್ಕಿಂತ ಕಡಿಮೆ ಮಾರಾಟದಿಂದ ಆಗುವ ನಷ್ಟ (ಅಂಡರ್‌ರಿಕವರಿ) ಸಿಲಿಂಡರ್‌ಗೆ 100 ರೂ.ಗೆ ತಲುಪಿದೆ. ಈ ಕಾರಣದಿಂದಾಗಿ, ಅದರ ಬೆಲೆಗಳು ಹೆಚ್ಚಾಗಬಹುದು ಎನ್ನಲಾಗಿದೆ. ಪ್ರಸ್ತುತ ದೆಹಲಿ ಮತ್ತು ಮುಂಬೈನಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 899.50 ರೂ.
2. ಪಿಂಚಣಿದಾರರಿಗೆ (Pension) ಭಾರಿ ನೆಮ್ಮದಿ - ನವೆಂಬರ್ 1 ರಿಂದ ಎಸ್‌ಬಿಐ ಹೊಸ ಸೇವೆಯನ್ನು ಪ್ರಾರಂಭಿಸಲಿದೆ. ಇದರ ಅಡಿಯಲ್ಲಿ, ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ. ಈಗ ಯಾವುದೇ ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ವೀಡಿಯೊ ಕರೆ ಮೂಲಕ ಸಲ್ಲಿಸಲು ಸಾಧ್ಯವಾಗಲಿದೆ.
3. ಹೂಡಿಕೆದಾರರಿಗೆ (IPO) ಸುವರ್ಣಾವಕಾಶ - ನೀವು ಹೂಡಿಕೆದಾರರಾಗಿದ್ದರೆ ಮತ್ತು ಷೇರು ಮಾರುಕಟ್ಟೆಯಲ್ಲಿಐಪಿಒ ಮೂಲಕ ಹಣ ಗಳಿಸಲು ಬಯಸುತ್ತಿದ್ದರೆ ನಿಮಗೆ ಒಂದು ದೊಡ್ಡ ಅವಕಾಶವಿದೆ. ವಾಸ್ತವವಾಗಿ, Policy Bazaar ನವೆಂಬರ್ 1 ರಂದು ಮತ್ತು Paytm IPO ನವೆಂಬರ್ 8 ರಿಂದ ತೆರೆದುಕೊಳ್ಳಲಿವೆ. ಇದಲ್ಲದೆ, ಎಸ್‌ಜೆಎಸ್ ಎಂಟರ್‌ಪ್ರೈಸಸ್ ಮತ್ತು ಸಿಗಾಚಿ ಇಂಡಸ್ಟ್ರೀಸ್‌ನ ಐಪಿಒ ಕೂಡ ನವೆಂಬರ್ 1 ರಿಂದ ಚಂದಾದಾರಿಕೆಗೆ ತೆರೆದುಕೊಳ್ಳಲಿದೆ. ಇದೆ ವೇಳೆ ನಿಕಾ, ಫಿನೋ ಪೇಮೆಂಟ್ ಬ್ಯಾಂಕ್‌ನ ಐಪಿಒನಲ್ಲಿ ಹೂಡಿಕೆ ಮಾಡಲು ಸಹ ಅವಕಾಶ ಇರಲಿದೆ. Nika ನ IPO ನವೆಂಬರ್ 1 ರಂದು ಮುಕ್ತಾಯಗೊಳ್ಳುತ್ತದೆ ಆದರೆ Fino Payments Bank ಕೊನೆಯ ದಿನ ನವೆಂಬರ್ 2 ಆಗಿದೆ.
4. ಬ್ಯಾಂಕಿಂಗ್ (Bank Holidays) ಕೆಲಸ ಕಾರ್ಯಗಳಲ್ಲಿ ಅಡಚಣೆ ಎದುರಾಗಲಿದೆ - ನೀವು ನವೆಂಬರ್ ತಿಂಗಳಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ವ್ಯವಹಾರವನ್ನು ಇತ್ಯರ್ಥಗೊಳಿಸಲು ಬಯಸಿದರೆ, ನೀವು ರಜಾದಿನಗಳ ಲೆಕ್ಕಪತ್ರವನ್ನು ಅರ್ಥಮಾಡಿಕೊಳ್ಳಬೇಕು. ವಾಸ್ತವವಾಗಿ, ನವೆಂಬರ್‌ನಲ್ಲಿ ದೀಪಾವಳಿ, ಧನ್ ತ್ರಯೋದಶಿ ಇತ್ಯಾದಿಗಳ ಕಾರಣ, ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 17 ದಿನಗಳವರೆಗೆ ಬ್ಯಾಂಕುಗಳು ತೆರೆಯುವುದಿಲ್ಲ.
5. ಮನೆಗೆ ಹೋಗುವುದು ಸುಲಭವಾಗಲಿದೆ - ದೀಪಾವಳಿ ಮತ್ತು ಛತ್ ಪೂಜೆ ಮತ್ತು ಇತರ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಹಲವು ಹೊಸ ವಿಶೇಷ ರೈಲುಗಳನ್ನು ಆರಂಭಿಸಿದೆ. ಕೆಲವು ರೈಲುಗಳು ನವೆಂಬರ್ ತಿಂಗಳಲ್ಲಿ ವಿವಿಧ ದಿನಾಂಕಗಳಲ್ಲಿ ಕಾರ್ಯನಿರ್ವಹಿಸಲು ಆರಂಭಿಸಲಿವೆ. ಈ ರೈಲುಗಳು ದೇಶದ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ. ಈ ರೈಲುಗಳ ಮಾರ್ಗವು ಪ್ರಮುಖವಾಗಿ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುತ್ತದೆ.
6. ವಾಟ್ಸ್ ಆಪ್ (WhatsApp) ಬಳಕೆದಾರರಿಗೆ ಸುದ್ದಿ - ನವೆಂಬರ್ 1 ರಿಂದ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಮೆಸೇಜಿಂಗ್ ಆಪ್ ವಾಟ್ಸಾಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ. ನಿಮ್ಮ ಫೋನ್ ಹಳೆಯ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, WhatsApp ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು. ಈ ಫೋನ್‌ಗಳು ಆಪಲ್‌ನಿಂದ ಸ್ಯಾಮ್‌ಸಂಗ್ ಮತ್ತು ಸೋನಿಯವರೆಗಿನ ದೊಡ್ಡ ಕಂಪನಿಗಳು ಶಾಮೀಲಾಗಿವೆ.