PHOTOS: ಹಿಮದಿಂದ ಆವೃತವಾದ 'ನಯಾಗರ ಫಾಲ್ಸ್'ನ ಮನಮೋಹಕ ದೃಶ್ಯ

ಹಿಮದಿಂದ ಆವೃತವಾಗಿರುವ ನಯಾಗರ ಫಾಲ್ಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  • Jan 28, 2019, 15:17 PM IST

ವಿಶ್ವದ ಅತ್ಯಂತ ಸುಂದರವಾದ ಜಲಪಾತಗಳಲ್ಲೊಂದಾದ ನಯಾಗರಾ ಫಾಲ್ಸ್'ನ ಚಿತ್ರಗಳು ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ವೈರಲ್ ಆಗುತ್ತಿವೆ. ವಾಸ್ತವವಾಗಿ, ಉಷ್ಣಾಂಶ ಕಡಿಮೆಯಾಗುತ್ತಿರುವ ಕಾರಣದಿಂದಾಗಿ ನಯಾಗರ ಜಲಪಾತ ಹಿಮಾಚ್ಛಾದಿತ ಪರ್ವತದಂತೆ ಕಂಡುಬರುತ್ತದೆ. ಇನ್ನೊಂದೆಡೆ, ನಯಾಗರಾ ಪ್ರವಾಸಿಗರನ್ನು ತಮ್ಮ ಕಡೆಗೆ ಆಕರ್ಷಿಸುತ್ತಿದೆ. ಏಕೆಂದರೆ ಹರಿಯುವ ನೀರಿನ ದೃಶ್ಯವು ಐಸ್ ಆಗಿ ಮಾರ್ಪಟ್ಟಿದೆ. ಹಿಮದಿಂದ ಆವೃತವಾಗಿರುವ ನಯಾಗರ ಫಾಲ್ಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. (Photos: instagram/hamed.n__)

1 /7

ಅಮೇರಿಕಾ ಮತ್ತು ಕೆನಡಾದ ಗಡಿಯಲ್ಲಿ ಹರಿಯುವ ನಯಾಗರ ಜಲಪಾತವು ವಿಶ್ವದ ಅತ್ಯಂತ ಸುಂದರ ಜಲಪಾತಗಳಲ್ಲಿ ಒಂದಾಗಿದೆ.(Pic: instagram/timejiphoto)

2 /7

ಅದೇ ಸಮಯದಲ್ಲಿ ನಯಾಗರ ಜಲಪಾತದ ತಾಪಮಾನ  -24 ರವರೆಗೆ ತಲುಪಿದೆ, ಅದರ ಕಾರಣದಿಂದಾಗಿ ಅದರ ನೀರು ಐಸ್ ಆಗಿ ಮಾರ್ಪಡುತ್ತದೆ. (Pic:instagram/athena1029)

3 /7

(Pic: instagram/abeworno)

4 /7

ನಯಾಗರಾ ಫಾಲ್ಸ್ ಹಲವು ಬಾರಿ ಐಸ್ ನಿಂದ ಆವೃತ್ತವಾಗಿದೆ. 1848ರಲ್ಲಿ ಮೊದಲ ಬಾರಿಗೆ ಬರ್ಫ್ ಆಗಿ ಪರಿವರ್ತನೆಯಾಯಿತು. ಬಳಿಕ 1902, 1906, 1911, 1932, 2014, 2017 ಮತ್ತು 2018 ರಲ್ಲಿ ಈ ದೃಶ್ಯ ಕಂಡು ಬಂದಿದೆ.  (Pic: instagram/abeworno)

5 /7

ಅಮೆರಿಕ ಮತ್ತು ಕೆನಡಾ ಗಡಿಯಲ್ಲಿರುವ ನಯಾಗರಾ ಫಾಲ್ಸ್ ಮೂರು ಜಲಪಾತಗಳಿಂದ ಮಾಡಲ್ಪಟ್ಟಿದೆ ಮತ್ತು ಈ ಸಮಯದಲ್ಲಿ ಈ ಮೂರು ಜಲಪಾತಗಳ ನೀರು ಐಸ್ ಆಗಿ ಮಾರ್ಪಟ್ಟಿದೆ. (Pic: instagram/sadbytheocean)  

6 /7

ಎರಿಯ ಮತ್ತು ಒಂಟಾರಿಯೊ ಸರೋವರದ ಎರಡೂ ನಯಾಗರಾ ನದಿಯಲ್ಲಿ ಭೇಟಿಯಾಗುತ್ತದೆ. ನಯಾಗರ ನದಿಯಲ್ಲಿ ಈ ವಸಂತದ 167 ಅಡಿ ಎತ್ತರದ ನೀರಿನ ಹರಿಯುವಿಕೆಯು ವಿಶ್ವದಲ್ಲೇ ಅತ್ಯಂತ ವೇಗವಾಗಿರುತ್ತದೆ. (Pic: instagram/amandakisielewicz31)

7 /7

ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ನಡುವಿನ ನೈಸರ್ಗಿಕ ಆಕರ್ಷಣೆಯನ್ನು ಹೊಂದಿರುವ ಮೂರು ಜಲಪಾತಗಳ ಹರಿವಿನ ದೃಶ್ಯ ಮನಮೋಹಕವಾಗಿದೆ. (Pic: instagram/hamed.n__)