2025ರಲ್ಲಿ ಈ ರಾಶಿಯವರಿಗೆ ಗುರು ಬಲ: ಕೂಡಿ ಬರಲಿದೆ ಕಂಕಣ ಭಾಗ್ಯ, ಸುಖ ಸಂಪತ್ತಿಗೆ ಕೊರತೆಯೇ ಇಲ್ಲ..!

Guru Bala: ಮದುವೆಯಾಗಲು ಒಳ್ಳೆಯ ಹುಡುಗ-ಹುಡುಗಿ ಸಿಗುವುದು ಕಷ್ಟ. ನಿಜಕ್ಕೂ ಒಳ್ಳೆಯ ಹುಡುಗ ಅಥವಾ ಹುಡುಗಿ ಸಿಗಲು ಪುಣ್ಯ ಮಾಡಿರಬೇಕು. ಇದೆಲ್ಲದರ ಜೊತೆಗೆ ಜ್ಯೋತಿಷ್ಯದ ಪ್ರಕಾರ, ಹುಡುಗ-ಹುಡುಗಿಯ ಜಾತಕವೂ ಸರಿಹೊಂದಬೇಕು. 

Guru Bala: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಗುರು, ಶುಕ್ರರು ಶುಭಸ್ಥಾನದಲ್ಲಿದ್ದು ಗುರು ಬಲ ಇದ್ದಾಗ ಮಾತ್ರವೇ ಜೀವನದಲ್ಲಿ ವಿವಾಹದ ಅಂಶಗಳು ಕೂಡಿಬರುತ್ತವೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಮದುವೆ ಮಾತ್ರವಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಗ್ರಹ ಎಲ್ಲಾ ಶುಭಕಾರ್ಯಗಳ ಸೂಚಕ. ಹಾಗಾಗಿ ನಿಮ್ಮ ಜಾತಕಗಳಲ್ಲಿ ಶುಕ್ರ ಗ್ರಹ ಉತ್ತಮ ಸ್ಥಾನದಲ್ಲಿದ್ದರೆ ಹಾಗು ಗುರು ಗ್ರಹದ ಕೃಪೆ ಇರುವವರಿಗೆ ಮದುವೆ ಯೋಗ ಕೂಡಿಬರುತ್ತದೆ ಎನ್ನಲಾಗುತ್ತದೆ. 

2 /8

2025ರಲ್ಲಿ ಕೆಲವು ರಾಶಿಯವರಿಗೆ ಶುಕ್ರನ ವಿಶೇಷ ಆಶೀರ್ವಾದದ ಜೊತೆಗೆ ಗುರು ಬಲವೂ ಇದೆ.  ಈ ಹಿನ್ನೆಲೆಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2025ರಲ್ಲಿ ಕೆಲವು ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಅವರು ಮದುವೆ ಆಗುವುದು ಪಕ್ಕಾ ಎನ್ನಲಾಗುತ್ತದೆ.  

3 /8

ವೃಷಭ ರಾಶಿ:  2025ರ ವರ್ಷ ವೃಷಭ ರಾಶಿಯ ಯುವಕ-ಯುವತಿಯರಿಗೆ ವಿವಾಹವಾಗಲು ಅತ್ಯಂತ ಸೂಕ್ತ ವರ್ಷವಾಗಿದೆ. ಅತ್ಯಂತ ಶುಭದಾಯಕವೂ ಆಗಿದೆ. ದೀರ್ಘ ಕಾಲದಿಂದ ವಧು-ವರನನ್ನು ಹುಡುಕುತ್ತಿರುವ ವೃಷಭ ರಾಶಿಯವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಕಂಕಣ ಭಾಗ್ಯ ಕೂಡಿಬರಲಿದೆ. ಅಲ್ಲದೆ ವೃಷಭ ರಾಶಿಯ ಜನರಿಗೆ ಸುಖ-ಶಾಂತಿ-ಸಮೃದ್ಧಿಗಳನ್ನು ತಂದೊಡ್ಡಲಿದೆ.

4 /8

ಕನ್ಯಾ ರಾಶಿ:  ಕನ್ಯಾ ರಾಶಿಯ ಯುವಕ-ಯುವತಿಯರಿಗೆ 2025ರ ಆರಂಭದಲ್ಲಿ ಅತ್ಯಂತ ಒಳ್ಳೆಯ ಕಾಲ. ಈ ಸಂದರ್ಭದಲ್ಲಿ ಕನ್ಯಾ ರಾಶಿಯ ಯುವಕ-ಯುವತಿಯರು ವದು-ವರರನ್ನು ಹುಡುಕಲು ಶುರುಮಾಡಿದರೆ ಕೂಡಲೇ ಕಂಕಣಭಾಗ್ಯ ದೊರೆಯುವ ಸಾಧ್ಯತೆ ಇದೆ. ಕನ್ಯಾ ರಾಶಿಯ ಇತರರು ಬೇರೆ ರೀತಿಯ ಶುಭ ಕಾರ್ಯಗಳನ್ನು ಮಾಡುವುದಕ್ಕೂ ಇದು ಸೂಕ್ತ ಕಾಲವಾಗಿದೆ.

5 /8

ತುಲಾ ರಾಶಿ:  ತುಲಾ ರಾಶಿಯ ಹುಡುಗ-ಹುಡುಗಿಯರಿಗೂ 2025 ಬಹಳ ಒಳ್ಳೆಯ ವರ್ಷ. ತುಲಾ ರಾಶಿಯವರು 2025ರಲ್ಲಿ ಮದುವೆಯಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಪ್ರೀತಿ ಮತ್ತು ಸುಖದಿಂದ ಇರುತ್ತಾರೆ. ಅಲ್ಲದೆ ತುಲಾ ರಾಶಿಗೆ ಸೇರಿದವರು ಬೇರೆ ಯಾವುದೇ ವ್ಯಾಪಾರ-ವ್ಯವಹಾರ ಮಾಡುವುದಕ್ಕೂ 2025 ಪ್ರಾಶಸ್ತ್ಯವಾದ ವರ್ಷವಾಗಿದೆ.

6 /8

ವೃಶ್ಚಿಕ ರಾಶಿ:  ವೃಶ್ಚಿಕ ರಾಶಿಯ ಜನರಿಗೆ ಹೊಸ ವರ್ಷದ ಆರಂಭದಿಂದಲೇ ಶುಭಕಾಲ ಶುರುವಾಗುತ್ತದೆ. ಅವರು ವರ್ಷಪೂರ್ತಿ ವಿವಾಹವೂ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು ಎಲ್ಲವೂ ಕೈಗೂಡುವ ಸಾಧ್ಯತೆ ಇರುತ್ತದೆ. ಹೊಸ ಉದ್ಯಮ-ವ್ಯಾಪಾರ-ವ್ಯವಹಾರ ಆರಂಭಿಸಬಹುದು. ಅದೇ ರೀತಿ ವೃಶ್ಚಿಕ ರಾಶಿಯವರು ಹೊಸ ನೌಕರಿಯನ್ನೂ ಹುಡುಕಬಹುದು. 

7 /8

ಮೀನ ರಾಶಿ:  ಮೀನ ರಾಶಿಯವರಿಗೆ 2025ನೇ ವರ್ಷ ವಿವಾಹ ಯೋಗವನ್ನು ಕರುಣಿಸಲಿದೆ. ಮೀನಾ ರಾಶಿಯವರಿಗೆ ಮಂಗಳ ಮತ್ತು ಗುರು ಗ್ರಹಗಳ ಕೃಪೆ ದೊರೆಯುವುದರಿಂದ ವಿವಾಹವಾಗಲು ಎಲ್ಲಾ ರೀತಿಯಲ್ಲೂ ಅವಕಾಶಗಳು ಪ್ರಾಪ್ತವಾಗುತ್ತವೆ. ಬಹಳ ದಿನಗಳಿಂದ ಮದುವೆ ಆಗಲು ಪ್ರಯತ್ನಿಸುತ್ತಿರುವವರಿಗೆ 2025ರಲ್ಲಿ ಅದೃಷ್ಟ ಕುಲಾಯಿಸಲಿದೆ.

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.