ಮುಂದಿನ ವರ್ಷದಿಂದ ಕಡಿಮೆಯಾಗಲಿದೆ ನಿಮ್ಮ Salary! ಆದರೆ ಸಿಗಲಿದೆ ಈ ಅನುಕೂಲ

                  

  • Dec 09, 2020, 11:16 AM IST

ಹೊಸ ವೇತನ ನಿಯಮವನ್ನು ಏಪ್ರಿಲ್ 2021ರಿಂದ ದೇಶದಲ್ಲಿ ಜಾರಿಗೆ ತರಲಾಗುವುದು. ಬಳಿಕ ನಿಮ್ಮ ಸ್ಯಾಲರಿ (Salary) ಸ್ಟ್ರಕ್ಚರ್ ಗಮನಾರ್ಹವಾಗಿ ಬದಲಾಗುತ್ತದೆ. ನಿಮ್ಮ ಸಂಬಳದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

1 /5

ನವದೆಹಲಿ: ಮುಂದಿನ ವರ್ಷದಿಂದ ನಿಮ್ಮ ಸಂಬಳ ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ನಿಮ್ಮ ವೃದ್ಧಾಪ್ಯ ಸುಧಾರಿಸುತ್ತದೆ. ಹೊಸ ವೇತನ ನಿಯಮ ಏಪ್ರಿಲ್ 2021 ರಿಂದ ಜಾರಿಗೆ ಬರಲಿದೆ. ಇದು ನಿಮ್ಮ ಸಂಬಳ  (In hand salary), ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಹೊಸ ವೇತನ ನಿಯಮ ಜಾರಿಯಾಗುವುದರಿಂದ ಯಾವ ರೀತಿಯ ವ್ಯತ್ಯಾಸ ಉಂಟಾಗುತ್ತದೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಿ.

2 /5

ಸರ್ಕಾರ ಕಳೆದ ವರ್ಷ ಸಂಸತ್ತಿನಲ್ಲಿ ವೇತನ ಸಂಹಿತೆಯನ್ನು ಅಂಗೀಕರಿಸಿತ್ತು. ಮುಂದಿನ ಹಣಕಾಸು ವರ್ಷದಿಂದ ಇದು ಜಾರಿಗೆ ಬರಲಿದೆ. ಇದು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಎಲ್ಲಾ ನೌಕರರು ಮತ್ತು ಅಧಿಕಾರಿಗಳ ವೇತನದ ಮೇಲೆ ಪರಿಣಾಮ ಬೀರುತ್ತದೆ.

3 /5

ದಿ ಎಕನಾಮಿಕ್ ಟೈಮ್ಸ್ ನಲ್ಲಿ ಪ್ರಕಟವಾದ ಸುದ್ದಿಗಳ ಪ್ರಕಾರ ಹೊಸ ನಿಯಮದ ಪ್ರಕಾರ, ನೌಕರರಿಗೆ ಗ್ರ್ಯಾಚುಟಿ, ಪಿಎಫ್ ಮುಂತಾದ ಎಲ್ಲಾ ಭತ್ಯೆಗಳು ಒಟ್ಟು ವೇತನದ 50 ಪ್ರತಿಶತಕ್ಕಿಂತ ಹೆಚ್ಚಿರಬಾರದು. ಅಂದರೆ ಏಪ್ರಿಲ್ 2021 ರಿಂದ ಕಂಪನಿಗಳು ಒಟ್ಟು ವೇತನದಲ್ಲಿ 50% ಅಥವಾ ಅದಕ್ಕಿಂತ ಹೆಚ್ಚಿನ ಮೂಲ ವೇತನವನ್ನು ಇಟ್ಟುಕೊಳ್ಳಬೇಕಾಗುತ್ತದೆ. ಈ ಹೊಸ ವೇತನ ನಿಯಮದ ನಂತರ ವೇತನ ರಚನೆಯಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತದೆ. ಈ ಹೊಸ ನಿಯಮದಲ್ಲಿ ಕೆಲವು ಅನುಕೂಲಗಳು ಮತ್ತು ಕೆಲವು ಅನಾನುಕೂಲಗಳೂ ಇವೆ.

4 /5

ಈ ಹೊಸ ವೇತನ ನಿಯಮದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಹಲವು ತಜ್ಞರು ಇದರ ಪ್ರಯೋಜನಗಳ ಬಗ್ಗೆ ತಿಳಿಸಿದ್ದು ಇದು ನಿವೃತ್ತಿಯ ನಂತರ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಮುಖ್ಯವಾಗಿ ಹೊಸ ನಿಯಮದಡಿಯಲ್ಲಿ ಗ್ರ್ಯಾಚುಟಿ ಪ್ರಮಾಣ ಹೆಚ್ಚಾಗುತ್ತದೆ. ಏಕೆಂದರೆ ಗ್ರ್ಯಾಚುಟಿ ಅನ್ನು ಮೂಲ ವೇತನಕ್ಕೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ ಮತ್ತು ಮೂಲ ವೇತನವನ್ನು ಹೆಚ್ಚಿಸುವುದರೊಂದಿಗೆ ಗ್ರ್ಯಾಚುಟಿ ಪ್ರಮಾಣವೂ ಹೆಚ್ಚಾಗುತ್ತದೆ. ಗ್ರಾಚ್ಯುಟಿ ಹೊರತಾಗಿ ಕಂಪನಿ ಮತ್ತು ಉದ್ಯೋಗಿಗಳ ಪಿಎಫ್ ಕೊಡುಗೆ ಕೂಡ ಹೆಚ್ಚಾಗುತ್ತದೆ. ಇದು ದೀರ್ಘಾವಧಿಯಲ್ಲಿ ನೌಕರರ ಉಳಿತಾಯವನ್ನೂ ಹೆಚ್ಚಿಸುತ್ತದೆ.

5 /5

ಹೊಸ ವೇತನ ಪ್ರಮಾಣದ ನಿಯಮದಲ್ಲಿ ನಿಮ್ಮ ಇನ್ಹೇಂಡ್ ಸಂಬಳವನ್ನು ಕಡಿಮೆಗೊಳಿಸಲಾಗುತ್ತದೆ. ಈ ಕಾರಣದಿಂದಾಗಿ ಹೆಚ್ಚಿನ ಸಂಬಳ ಪಡೆಯುತ್ತಿರುವವರಿಗೆ ದೊಡ್ಡ ಹೊಡೆತವಾಗಲಿದೆ. ಏಕೆಂದರೆ ಅವರ ಭತ್ಯೆಗಳು ವೇತನದ 70-80 ಪ್ರತಿಶತದಷ್ಟು ಇರುತ್ತವೆ. ಇದು ಕಂಪನಿಗಳ ಮೇಲೆ ಹೆಚ್ಚುವರಿ ಹೊರೆಯಾಗುವ ನಿರೀಕ್ಷೆಯಿದೆ. ಏಕೆಂದರೆ ಗ್ರ್ಯಾಚುಟಿ ಮತ್ತು ಪಿಎಫ್ ಕೊಡುಗೆ ಮೊದಲಿಗಿಂತ ಹೆಚ್ಚಾಗುತ್ತದೆ.