New Traffic Rule: ಮುಂಬೈನಲ್ಲಿ ವಾಸಿಸುವ ನಾಗರಿಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಇನ್ಮುಂದೆ ಟ್ರಾಫಿಕ್ ಪೊಲೀಸರು ನಿಮ್ಮನ್ನು ಅನಾವಶ್ಯಕವಾಗಿ ಚೌಕಾಸಿ ಮಾಡುವಂತಿಲ್ಲ.
New Traffic Rule: ಮುಂಬೈನಲ್ಲಿ ವಾಸಿಸುವ ನಾಗರಿಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಇನ್ಮುಂದೆ ಟ್ರಾಫಿಕ್ ಪೊಲೀಸರು ನಿಮ್ಮನ್ನು ಅನಾವಶ್ಯಕವಾಗಿ ಚೌಕಾಸಿ ಮಾಡುವಂತಿಲ್ಲ. ಇತ್ತೀಚೆಗಷ್ಟೇ ಈ ಕುರಿತಾದ ಒಂದು ಸುತ್ತೋಲೆಯನ್ನು ಹಾಲಿ ಮುಂಬೈ ಪೋಲೀಸ್ ಆಯುಕ್ತರು ಜಾರಿಗೊಳಿಸಿದ್ದಾರೆ. ಈ ಸೋತ್ತೊಲೆಯ ಪ್ರಕಾರ ಇನ್ಮುಂದೆ ನಿಮ್ಮ ವಾಹನವನ್ನು ಯಾವುದೇ ಸೂಕ್ತ ಕಾರಣವಿಲ್ಲದೆ ಸಂಚಾರಿ ಪೊಲೀಸರು ತಡೆಯುವ ಹಾಗಿಲ್ಲ ಎನ್ನಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಹೊಸ ನಿಯಮಗಳ ಪ್ರಕಾರ, ಸಂಚಾರಿ ಪೊಲೀಸರು ವಾಹನಗಳ ಚೆಕ್ಕಿಂಗ್ ನಡೆಸುವಂತಿಲ್ಲ. ಅದರಲ್ಲಿಯೂ ವಿಶೇಷವಾಗಿ ಚೆಕ್ ನಾಕಾ ಇರುವ ಪ್ರದೇಶಗಳಲ್ಲಿ ಅವರು ಕೇವಲ ಟ್ರಾಫಿಕ್ ಮೇಲೆ ತಮ್ಮ ಗಮನ ಕೇಂದ್ರೀಕರಿಸಬೇಕು ಮತ್ತು ಸಂಚಾರವನ್ನು ಸುವ್ಯವಸ್ಥಿತಗೊಳಿಸಬೇಕು ಎನ್ನಲಾಗಿದೆ. ಸಂಚಾರದ ವೇಗದ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವ ವಾಹನವನ್ನು ಮಾತ್ರ ಅವರು ತಡೆಯಬಲ್ಲರು ಎನ್ನಲಾಗಿದೆ.
ಟ್ರಾಫಿಕ್ ಪೊಲೀಸರು ಅನುಮಾನದ ಆಧಾರದ ಮೇಲೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಅವರ ಬೂಟುಗಳನ್ನು ಮತ್ತು ವಾಹನದ ಒಳಭಾಗವನ್ನು ತಪಾಸಣೆಗೆ ಒಳಪಡಿಸುವುದು ಆಗಾಗ್ಗ ಗಮನಕ್ಕೆ ಬರುತ್ತದೆ. ಇದರಿಂದ ಆ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಎದುರಾಗುತ್ತದೆ.
ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿರುವ ಕಾರಣ ವಾಹನಗಳ ತಪಾಸಣೆಯನ್ನು ನಿಲ್ಲಿಸುವಂತೆ ಎಲ್ಲಾ ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಲಾಗಿದೆ, ಟ್ರಾಫಿಕ್ ಚಲನವಲನದ ಮೇಲೆ ನಿಗಾ ವಹಿಸಲು ಆದ್ಯತೆ ನೀಡುವಂತೆ ಹೊಸ ನಿಯಮದಲ್ಲಿ ತಿಳಿಸಲಾಗಿದೆ. ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ವಾಹನ ಚಾಲಕರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ಪೊಲೀಸರು ದಂಡ ವಿಧಿಸಬಹುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸಂಚಾರಿ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ನಾಕಾಬಂದಿ ನಡೆಸುವ ಸಂದರ್ಭಗಳಲ್ಲಿ ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಾರೆಯೇ ಹೊರತು ವಾಹನಗಳನ್ನು ತಪಾಸಣೆ ನಡೆಸುವಂತಿಲ್ಲ. ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸದಿದ್ದರೆ, ಸಂಬಂಧಪಟ್ಟ ಟ್ರಾಫಿಕ್ ಪೋಸ್ಟ್‌ನ ಹಿರಿಯ ನಿರೀಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಸಂಚಾರಿ ಪೊಲೀಸರು ಅನುಮಾನದ ಆಧಾರದಲ್ಲಿ ವಾಹನಗಳ ಬೂಟ್ ಪರಿಶೀಲನೆ ನಡೆಸಬಾರದು ಅಥವಾ ನಿಲ್ಲಿಸಬಾರದು ಎಂದು ಸಂಚಾರಿ ಪೊಲೀಸ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಪೊಲೀಸರು ಮೊದಲಿನಂತೆ ಸಂಚಾರಿ ಅಪರಾಧಗಳ ವಿರುದ್ಧ ಚಲನ್ ಮಾಡುವುದನ್ನು ಮುಂದುವರೆಸಲಿದ್ದಾರೆ ಮತ್ತು ಸಂಚಾರಿ ನಿಯಮ ಉಲ್ಲಂಘಿಸುವವರನ್ನು ತಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.