ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭ: ಬದಲಾಗಲಿವೆ ಹಲವು ನಿಯಮ, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ

New Financial year Rules Change: ಇಂದಿನಿಂದ ಎಂದರೆ 01 ಏಪ್ರಿಲ್ 2024ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ.  ಅದರ ಮೊದಲ ದಿನದಲ್ಲಿ ಗ್ಯಾಸ್ ಬೆಲೆಯಲ್ಲಿ ದೊಡ್ಡ ಪರಿಹಾರ ಕಂಡುಬಂದಿದೆ. 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿದ್ದು, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ  ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಷ್ಟೇ ಅಲ್ಲದೆ, ಇನ್ನೂ ಕೆಲವು ಪ್ರಮುಖ ನಿಯಮಗಳು ಕೂಡ ಬದಲಾಗಲಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

01 ಏಪ್ರಿಲ್ 2024ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಿದ್ದು, ವಿತ್ತೀಯ ವರ್ಷ ಆರಂಭದ ಮೊದಲ ದಿನವೇ ಗ್ರಾಹಕರಿಗೆ ನೆಮ್ಮದಿಯ ಸುದ್ದಿ ದೊರೆತಿದೆ. ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ಇಂದಿನಿಂದ ಇನ್ನೂ ಕೆಲವು ಪ್ರಮುಖ ನಿಮಯಗಳು ಬದಲಾಗಲಿದ್ದು ನಿಮ್ಮ ಜೇಬಿನ ಮೇಲೆ ಇದರ ನೇರ ಪ್ರಭಾವ ಕಂಡು ಬರಲಿದೆ. ಇಂದಿನಿಂದ ಏನೆಲ್ಲಾ ನಿಯಮಗಳು ಕಂಡು ಬರಲಿವೆ ಎಂದು ತಿಳಿಯೋಣ...   

2 /8

ತೈಲ ಮಾರುಕಟ್ಟೆ ಕಂಪನಿಗಳು ತಿಂಗಳ ಮೊದಲ ದಿನವೇ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 30.50 ರೂ. ಕಡಿತ ಘೋಷಿಸಿವೆ. ಆದಾಗ್ಯೂ, ವಾಣಿಜ್ಯ  ಸಿಲಿಂಡರ್‌ಗಳ ಮೇಲಷ್ಟೇ ಬೆಲೆ ಕಡಿತವನ್ನು ಘೋಷಿಸಲಾಗಿದೆ. ಗೃಹಬಳಕೆ ಎಲ್‌ಪಿ‌ಜಿ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಬೆಲೆ ಕಡಿತದೊಂದಿಗೆ ಇಂದಿನಿಂದ ವಾಣಿಜ್ಯ ಸಿಲಿಂಡರ್ ದರ ಪ್ರಮುಖ ನಗರಗಳಾದ ದೆಹಲಿಯಲ್ಲಿ 1764.50 ರೂ., ಕೋಲ್ಕತ್ತಾದಲ್ಲಿ  1879 ರೂ. ,  ಮುಂಬೈನಲ್ಲಿ 1717.50 ರೂ. ಮತ್ತು ಚೆನ್ನೈನಲ್ಲಿ 1930.00ರೂ. ಗಳಿಗೆ ಲಭ್ಯವಾಗಲಿದೆ. 

3 /8

ಹೊಸ ಆರ್ಥಿಕ ವರ್ಷದಿಂದ ಎಂದರೆ ಇಂದಿನಿಂದ ವಿಮಾ ಯೋಜನೆಗೆ ಸಂಬಂಧಿಸಿದ ಕೆಲವು ನಿಯಮಗಳು ಕೂಡ ಬದಲಾಗಲಿವೆ. ನಿಯಮಗಳ ಪ್ರಕಾರ, 01 ಏಪ್ರಿಲ್ 2024ರಿಂದ ವಿಮಾ ನಿಯಂತ್ರಕ IRDAI ವಿಮಾ ಪಾಲಿಸಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ವಿತರಿಸಲು ನಿರ್ಧರಿಸಿದೆ.  ಅಷ್ಟೇ ಅಲ್ಲದೆ, ಏಪ್ರಿಲ್ 01ರಿಂದ ಪಾಲಿಸಿದಾರರ ಪಾಲಿಸಿ ಸರೆಂಡರ್ ಮೇಲಿನ ಸರೆಂಡರ್ ಮೌಲ್ಯವು ಪಾಲಿಸಿಯನ್ನು ಸರೆಂಡರ್ ಮಾಡಿದ ವರ್ಷಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. 

4 /8

ಹೊಸ ಹಣಕಾಸು ವರ್ಷ, 01 ಏಪ್ರಿಲ್ 2024ರಿಂದ  ಕಾರ್ ಕರೀದಿ ದುಬಾರಿಯಾಗಲಿದೆ. ಅದರಲ್ಲೂ, ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ (FAME-II) ಅಡಿಯಲ್ಲಿ ಲಭ್ಯವಿರುವ ಸಬ್ಸಿಡಿಯನ್ನು ಸರ್ಕಾರ ನಿಲ್ಲಿಸಿರುವ ಕಾರಣ ಎಲೆಕ್ಟ್ರಿಕ್ ವಾಹನಗಳ ಖರೀದಿ ಇಂದಿನಿಂದ ದುಬಾರಿಯಾಗಲಿದೆ. 

5 /8

01 ಏಪ್ರಿಲ್ 2024ರಿಂದ ಸರ್ಕಾರ ಹೊಸ ತೆರಿಗೆ ವ್ಯವಷ್ಟೆಯನ್ನು ಡೀಫಾಲ್ಟ್ ಸೆಟ್ಟಿಂಗ್ ಆಗಿ ಜಾರಿಗೊಳಿಸಲಿದೆ. ಅರ್ಥಾತ್, ತೆರಿಗೆದಾರರು ಹಳೆಯ ತೆರಿಗೆ ರಚನೆಗೆ ಬದ್ಧರಾಗಿರದಿದ್ದರೆ ಸ್ವಯಂಚಾಲಿತವಾಗಿ ಹೊಸ ವ್ಯವಸ್ಥೆಗೆ ಅನುಗುಣವಾಗಿ ತೆರಿಗೆ ಮೌಲ್ಯಮಾಪನ ಮಾಡಲಾಗುತ್ತದೆ. 

6 /8

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (ಎನ್‌ಪಿ‌ಎಸ್) ಹೆಚ್ಚಿನ ಭದ್ರತೆಯನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ ಏಪ್ರಿಲ್ 1, 2024 ರಿಂದ PFRDA ವರ್ಧಿತ ವ್ಯವಸ್ಥೆಯು ಪಾಸ್‌ವರ್ಡ್ ಆಧಾರಿತ CRA ಸಿಸ್ಟಮ್ ಪ್ರವೇಶಕ್ಕಾಗಿ ಎರಡು ಅಂಶಗಳ ಆಧಾರ್ ಆಧಾರಿತ ದೃಢೀಕರಣವನ್ನು ಜಾರಿಗೆ ತರಲಿದೆ.  ಆಧಾರ್ ಆಧಾರಿತ ಲಾಗಿನ್ ದೃಢೀಕರಣವನ್ನು ಪ್ರಸ್ತುತ ಬಳಕೆದಾರ ID ಮತ್ತು ಪಾಸ್‌ವರ್ಡ್ ಆಧಾರಿತ ಲಾಗಿನ್ ಪ್ರಕ್ರಿಯೆಯೊಂದಿಗೆ ಸಂಯೋಜಿಸಲಾಗುತ್ತದೆ. 

7 /8

01 ಏಪ್ರಿಲ್ 2024ರಿಂದ  ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದ ನಿಯಮದಲ್ಲೂ ಬದಲಾವಣೆ ಆಗಲಿದೆ. ಇಂದಿನಿಂದ ನೀವು ಬ್ಯಾಂಕ್‌ನೊಂದಿಗೆ ನಿಮ್ಮ ಕಾರಿನ ಫಾಸ್ಟ್‌ಟ್ಯಾಗ್‌ನ ಕೆ‌ವೈ‌ಸಿ ನವೀಕರಿಸುವುದು ಕಡ್ಡಾಯವಾಗಿದೆ. 

8 /8

ಇಂದಿನಿಂದ  ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್‌ಒ) ದೊಡ್ಡ ಬದಲಾವಣೆ ಕಂಡು ಬರಲಿದೆ. ಹೊಸ ಆರ್ಥಿಕ ವರ್ಷದಲ್ಲಿ, ಉದ್ಯೋಗಿಯು ಕೆಲ ಬದಲಾಯಿಸಿದರೆ ಅವರ ಪಿ‌ಎಫ್ ಖಾತೆ ಸ್ವಯಂಚಾಲಿತವಾಗಿ ಹೊಸ ಉದ್ಯೋಗದಾತರಿಗೆ ವರ್ಗಾಯಿಸಲ್ಪಡುತ್ತದೆ. ಆದಾಗ್ಯೂ, ಚಂದಾದಾರರ ಕೋರಿಕೆಯ ಮೇರೆಗೆ ಮಾತ್ರವೇ ಈ ವರ್ಗಾವಣೆ ಸಾಧ್ಯವಾಗಲಿದೆ.