ಮೂರು ದಿನದ ಅಸುಗೂಸನ್ನು ಚರಂಡಿಗೆ ಎಸೆದ ತಾಯಿ, ಮುಂದೆ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಯಿಯೊಬ್ಬಳು ತನ್ನ 3 ದಿನಗಳ ಹೆಣ್ಣು ಮಗುವನ್ನು ಚರಂಡಿಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.  

  • Dec 22, 2020, 14:32 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಯಿಯೊಬ್ಬಳು ತನ್ನ 3 ದಿನಗಳ ಹೆಣ್ಣು ಮಗುವನ್ನು ಚರಂಡಿಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಕೊರೆಯುವ ಚಳಿಯಲ್ಲಿ 12 ಗಂಟೆಗಳ ಕಾಲ ಬಳಲುತ್ತಿದ್ದ ಅಸುಗೂಸನ್ನು ವಿಮಾ ಏಜೆಂಟರೊಬ್ಬರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಂದು ವಾರದ ಚಿಕಿತ್ಸೆಯ ನಂತರ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಸದ್ಯ ಮಗುವಿಗೆ ಚಿಕಿತ್ಸೆ ಮುಂದುವರೆದಿದ್ದು ಶೀಘ್ರದಲ್ಲೇ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಶಿಶುವನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

1 /7

23 ವರ್ಷದ ಅನು ಆಫೀಸ್ ಗೆ ಹೋಗುವಾಗ ದಾರಿಯಲ್ಲಿ ಚರಂಡಿಯೊಂದರಲ್ಲಿ ಮಗು ಬಿದ್ದಿರುವ ಬಗ್ಗೆ ತಿಳಿಯಿತು. ಚಳಿಯಲ್ಲಿ ಮಗು ಚರಂಡಿಯಲ್ಲಿ ಇರುವುದು ಕಂಡು ತಕ್ಷಣವೇ ಅವರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

2 /7

ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಅನು ಅವರು ಬೆಳಿಗ್ಗೆ 9.50 ರ ಸುಮಾರಿಗೆ ಕಚೇರಿಗೆ ಹೋಗುತ್ತಿದ್ದಾಗ ಮಗು ಜೋರಾಗಿ ಅಳುತ್ತಿರುವುದು ಕೇಳಿಬರುತ್ತಿತ್ತು. ಅಲ್ಲಿ ಹೆಚ್ಚು ಮನೆಗಳಿಲ್ಲದ ಕಾರಣ ಅಲ್ಲಿ ಸಫಾಯಿ ಮಾಡುವವರನ್ನು ಕೇಳಿದೆ ಆ ವೇಳೆ ಸ್ವೀಪರ್ಗಳು ಚರಂಡಿಯಲ್ಲಿ ಬಿದ್ದಿರುವ ಹೆಣ್ಣು ಮಗುವಿನ ಬಗ್ಗೆ ಮಾಹಿತಿ ನೀಡಿದರು. ನಾನು ಅಲ್ಲಿಗೆ ಹೋಗಿ ನೋಡಿದಾಗ ಮಗು ಇನ್ನೂ ಜೀವಂತವಾಗಿತ್ತು. ತಕ್ಷಣವೇ ಅಲ್ಲಿಂದ ಮಗುವನ್ನು ಹೊರತೆಗೆಯಲಾಯಿತು ಎಂದವರು ತಿಳಿಸಿದರು.

3 /7

ಮಗು ಜೀವಂತವಾಗಿರುವುದನ್ನು ಕಂಡು ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ರಾಂಗ್ ಸೈಡ್ ನಲ್ಲಿ ವಾಹನ ಚಲಾಯಿಸಿದಾಗಿ ಮಾಹಿತಿ ನೀಡಿದ ಅನು ಇದರಿಂದಾಗಿ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಯನ್ನು ತಲುಪಲು ಸಾಧ್ಯವಾಯಿತು ಎಂದು ಹೇಳಿದರು.

4 /7

ಆಸ್ಪತ್ರೆಗೆ ತಲುಪಿದ ನಂತರ ಮಗು ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ನಾನು ವೈದ್ಯರಿಗೆ ಮಾಹಿತಿ ಒದಗಿಸಿದೆ ನಂತರ ವೈದ್ಯರು ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಿದರು ಎಂದು ಅನು ವಿವರಿಸಿದರು.

5 /7

ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ ನಂತರ, ಒಂದು ವಾರ ಕಚೇರಿಗೆ ಹೋಗಲು ಸಾಧ್ಯವಾಗಲಿಲ್ಲ. ಏಕೆಂದರೆ ಮಗುವಿಗೆ 24 ಗಂಟೆಗಳ ಆರೈಕೆಯ ಅಗತ್ಯವಿತ್ತು ಎಂದು ಅನು ಹೇಳಿದರು. ವಿಶೇಷವೆಂದರೆ ಈ ಸಂದರ್ಭದಲ್ಲಿ ಅನು ಅವರ ಕುಟುಂಬವೂ ಅವರಿಗೆ ಇದರಲ್ಲಿ ಅನು ಅವರ ಕುಟುಂಬವೂ ಅವರನ್ನು ಬೆಂಬಲಿಸಿತು.

6 /7

ಚಿಕಿತ್ಸೆಯ ಸಮಯದಲ್ಲಿ ಅನು ಅವರ ಕುಟುಂಬವು ಮಗುವಿಗೆ ತುಂಬಾ ಹತ್ತಿರವಾಯಿತು ಮತ್ತು ಈಗ ಅವಳ ಸಹೋದರಿ ಮಗುವನ್ನು ದತ್ತು ಪಡೆಯಲು ಬಯಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಡೀ ಕಾನೂನು ಪ್ರಕ್ರಿಯೆಯ ಮೂಲಕ ನಾವು ಈ ಮಗುವನ್ನು ದತ್ತು ಪಡೆಯಲು ಸಿದ್ಧರಿದ್ದೇವೆ ಎಂದು ಅನು ಹೇಳಿದರು.

7 /7

ವರದಿಯ ಪ್ರಕಾರ ಶೀಘ್ರದಲ್ಲೇ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಬಾಲಕಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ಒಂದು ವಾರದಿಂದ ಹುಡುಗಿ ಅಪಾಯದಿಂದ ಪಾರಾದರೆ ಸಾಕು ಎಂದು ನಾವು ಮಗುವಿನ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದೆವು ಎಂದು ಅನು ಹೇಳಿದರು.