Valentine Day Gift: ಧಾರ್ಮಿಕ ನಂಬಿಕೆಗಳ ಪ್ರಕಾರ, ಪ್ರೇಮಿಗಳ ದಿನದಂದು ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಇದು ಸಂಬಂಧದಲ್ಲಿ ಬಿರುಕುಂಟುಮಾಡಬಹುದು ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವ್ಯಾಲೆಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನದಂದು ಪ್ರೇಮಿಗಳು/ಪತಿ-ಪತ್ನಿ ಪರಸ್ಪರರ ನಡುವೆ ಉಡುಗೊರೆಗಳನ್ನು ವಿನಿಯೋಗ ಮಾಡಿಕೊಳ್ಳುತ್ತಾರೆ. ಇದು ಇಬ್ಬರ ನಡುವೆ ಪ್ರೀತಿಯನ್ನು ಇನ್ನೂ ಗಾಢವಾಗಿಸುತ್ತದೆ ಎಂಬುದು ನಂಬಿಕೆ.
ಆದರೆ, ವ್ಯಾಲೆಂಟೈನ್ಸ್ ಡೇ/ಪ್ರೇಮಿಗಳ ದಿನ ನಿಮ್ಮ ಸಂಗಾತಿಗೆ ನೀಡುವ ಕೆಲವು ಉಡುಗೊರೆಗಳು ನಿಮ್ಮ ಸಂಬಂಧದಲ್ಲಿ ಬಿರುಕಿಗೆ ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ?
ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರದ ಪ್ರಕಾರ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ಕೆಲವು ವಸ್ತುಗಳನ್ನು ನೀಡಲೇವಾರದು ಎಂದು ಹೇಳಲಾಗುತ್ತದೆ. ಈ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಇದು ಪರಸ್ಪರರ ನಡುವೆ ಪ್ರೀತಿಯನ್ನು ಹೆಚ್ಚಿಸುವ ಬದಲಿಗೆ ಸಂಬಂಧದಲ್ಲಿ ಕಹಿಯನ್ನು ಉಂಟು ಮಾಡಬಹುದು ಎನ್ನಲಾಗುತ್ತದೆ. ಹಾಗಿದ್ದರೆ, ವ್ಯಾಲೆಂಟೈನ್ಸ್ ಡೇ ಗಿಫ್ಟ್ ಆಗಿ ಯಾವ ವಸ್ತುಗಳನ್ನು ನೀಡಬಾರದು ಎಂದು ತಿಳಿಯೋಣ...
ಗಾಜಿನ ವಸ್ತುಗಳು ನೋಡಲು ಆಕರ್ಷಕವಾಗಿ ಕಂಡರೂ ಸಹ ಇದನ್ನು ನೀವು ಪ್ರೀತಿಸುವ ವ್ಯಕ್ತಿಗೆ ಗಿಫ್ಟ್ ಆಗಿ ನೀಡಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಇದರಿಂದ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ, ಚೂಪಾದ ವಸ್ತುಗಳನ್ನು ನೀವು ಇಷ್ಟಪಡುವವರಿಗೆ ನೀಡುವುದರಿಂದ ಇದು ನಿಮ್ಮ ಸಂಬಂಧದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ.
ನೀವು ನಿಮ್ಮ ಸಂಗಾತಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಹುದು. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಕಪ್ಪು ಬಣ್ಣದ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವುದರಿಂದ ಇದು ನಿಮ್ಮ ಸಂಬಂಧದಲ್ಲಿ ನಕಾರಾತ್ಮಕ ಫಲಗಳನ್ನು ನೀಡಬಹುದು.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಲು ಆಕರ್ಷಕವಾದ ನಕಲಿ ಹೂವುಗಳು ಸಾಕಷ್ಟು ಲಭ್ಯವಿವೆ. ಆದರೆ, ನೀವು ನಿಮ್ಮ ಸಂಗಾತಿಗೆ ನಕಲಿ ಹೂವುಗಳನ್ನು ಉಡುಗೊರೆಯಾಗಿ ನೀಡುವುದುಯರಿಂದ ಇದು ಸಂಬಂಧದಲ್ಲಿ ಕಹಿಯ ಭಾವನೆಯನ್ನು ಸೃಷ್ಟಿಸಬಹುದು ಎನ್ನಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಸಂದರ್ಭದಲ್ಲಿಯೂ ಸಹ ನಿಮ್ಮ ಪ್ರೀತಿ ಪಾತ್ರರಿಗೆ ನೀರಿಗೆ ಸಂಬಂಧಿಸಿದ ಉಡುಗೊರೆಗಳನ್ನು ನೀಡಬಾರದು. ಇದರಿಂದ ಅವರು ನಿಮ್ಮಿಂದ ದೂರವಾಗಬಹುದು ಎನ್ನಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.