Mukesh Ambani And Nita Ambani Love Story: ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಮದುವೆಯ ಕತೆ ಬಹಳ ರೋಚಕವಾಗಿದೆ. ಈ ಜೋಡಿಯ ಪ್ರೀತಿ ಶುರುವಾಗಿದ್ದು ಎಲ್ಲಿಂದ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪ್ರೇಮಕಥೆ ಯಾವ ಸಿನಿಮಾಗೂ ಕಡಿಮೆಯಿಲ್ಲ. ಕಾಲೇಜಿನಲ್ಲಿ ನಡೆದ ನೃತ್ಯ ಕಾರ್ಯಕ್ರಮವೊಂದರಲ್ಲಿ ಮುಖೇಶ್ ಅಂಬಾನಿ ಅವರ ತಂದೆ ಧೀರೂಭಾಯಿ ಅಂಬಾನಿ ಅವರು ನೀತಾರನ್ನು ಮೊದಲ ಬಾರಿಗೆ ನೋಡಿದರು.
ಧೀರೂಭಾಯಿ ಅಂಬಾನಿ ಅವರು ನೀತಾ ಅವರನ್ನು ನೋಡಿದ ಕ್ಷಣದಿಂದಲೇ ಅವಳನ್ನು ತನ್ನ ಕುಟುಂಬದ ಸೊಸೆಯನ್ನಾಗಿ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದರಂತೆ.
ಧೀರೂಭಾಯಿ ಅಂಬಾನಿ ಅವರು ನೀತಾಗೆ ಹಲವಾರು ಬಾರಿ ಕರೆ ಮಾಡಿದರು. ಆದರೆ ನೀತಾ ಅವರು ಮಾತನ್ನು ತಮಾಷೆಯಾಗಿ ಪರಿಗಣಿಸಿದರು. ಪ್ರತಿ ಬಾರಿ ಧೀರೂಭಾಯಿ ಅಂಬಾನಿ ಕಾಲ್ ಕಟ್ ಮಾಡುತ್ತಿದ್ದರಂತೆ.
ಕೊನೆಗೆ ಧೀರೂಭಾಯಿ ಅಂಬಾನಿ ಅವರು ನೀತಾ ಅವರ ತಂದೆಗೆ ಕರೆ ಮಾಡಿದರು. ನೀತಾ ತನ್ನೊಂದಿಗೆ ಯಾರೋ ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡಿದ್ದರಂತೆ. ಆದರೆ ಅದು ನಿಜವಾಗಿಯೂ ಧೀರೂಭಾಯಿ ಅಂಬಾನಿ ಎಂದು ನಂತರವೇ ಅವರಿಗೆ ತಿಳಿದದ್ದು.
ಮುಖೇಶ್ ಅಂಬಾನಿ ಮತ್ತು ನೀತಾ ಅವರ ಮದುವೆ ನಿಶ್ಚಯವಾಯಿತು. ನೀತಾ ಮತ್ತು ಮುಖೇಶ್ ಅಂಬಾನಿ ಆಗಾಗ್ಗೆ ಪರಸ್ಪರ ಭೇಟಿಯಾಗುತ್ತಿದ್ದರು. ಒಮ್ಮೆ ನೀತಾ ಮುಖೇಶ್ ಅಂಬಾನಿಗೆ ನೀನು ಕೂಡ ನನ್ನೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸಬೇಕು ಎಂದು ಹೇಳಿದರಂತೆ. ನೀತಾ ಮೇಲಿನ ಪ್ರೀತಿಯಿಂದ ಮುಕೇಶ್ ಅಂಬಾನಿ ಐಷಾರಾಮಿ ಕಾರನ್ನು ಬಿಟ್ಟು ಬಸ್ ಹತ್ತಿದ್ದರಂತೆ.
ಇದಲ್ಲದೇ ಮುಖೇಶ್ ಅಂಬಾನಿ ತುಂಬಾ ಫಿಲ್ಮಿ ಸ್ಟೈಲ್ ನಲ್ಲಿ ನೀತಾಗೆ ಪ್ರಪೋಸ್ ಮಾಡಿದ್ದರು. ನೀತಾ ಮತ್ತು ಮುಖೇಶ್ ಮುಂಬೈನ ಪೆದ್ದಾರ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ, ಸಂಜೆ ಟ್ರಾಫಿಕ್ನಲ್ಲಿ ಸಿಲುಕಿಕೊಂಡರು.
ಸಿಗ್ನಲ್ನಲ್ಲಿ ಕಾರು ನಿಂತಾಗ ಮುಖೇಶ್ ಅಂಬಾನಿ ನೀತಾಳನ್ನು ಫಿಲ್ಮಿ ಸ್ಟೈಲ್ನಲ್ಲಿ "ನನ್ನನ್ನು ಮದುವೆಯಾಗುತ್ತೀರಾ?" ಎಂದು ಕೇಳಿದ್ದರಂತೆ. ನೀತಾ ನಾಚಿ ನೀರಾಗಿದ್ದರಂತೆ. ಆದರೆ ಸಿಗ್ನಲ್ ಬಿಟ್ಟ ನಂತರವೂ ಮುಖೇಶ್ ಕಾರನ್ನು ಮುಂದೇ ಚಲಿಸಲಿಲ್ಲ.
ಅನೇಕ ವಾಹನಗಳು ಹಿಂದಿನಿಂದ ಹಾರ್ನ್ ಮಾಡುತ್ತಿದ್ದರೂ, ನೀತಾ ಉತ್ತರ ಕೊಡುವವರೆಗೆ ನಾನು ಓಡಿಸುವುದಿಲ್ಲ ಎಂದು ಮುಖೇಶ್ ಹೇಳಿದರಂತೆ. ಇದೇ ವೇಳೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತಂತೆ. ಆಗ ನೀತಾ "ಹು.. ಆಗುತ್ತೇನೆ" ಎಂದು ಉತ್ತರಿಸಿದರಂತೆ.