Mohammed Shami Personal Life: ಮನುಷ್ಯನಿಗೆ ಹೋರಾಟಕ್ಕಿಂತ ದೊಡ್ಡದು ಯಾವುದೂ ಇಲ್ಲ ಎನ್ನುತ್ತಾರೆ. ಬದಲಾವಣೆ ಕಲಿತವನು ಮಾತ್ರ ಜೀವನದಲ್ಲಿ ಮುನ್ನಡೆಯುತ್ತಾನೆ. ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಆದರೆ ಯಾರೂ ಪ್ರಯತ್ನಿಸದೆ ಆ ಕನಸನ್ನು ವಾಸ್ತವಕ್ಕೆ ಪರಿವರ್ತಿಸಲು ಸಾಧ್ಯವಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಉತ್ತರ ಪ್ರದೇಶದ ಅಮ್ರೋಹಾದ ಸಹಸ್ಪುರ್ ಅಲಿ ನಗರ ಗ್ರಾಮದಲ್ಲಿ ಜನಿಸಿದ ಸಾಧಾರಣ ಕುಟುಂಬದ ಹುಡುಗನೊಬ್ಬನಿಗೆ ಅಂತಹ ಒಂದು ಕನಸು ಕಂಡಿದ್ದ. ಇದೀಗ ಅದೇ ಕ್ರಿಕೆಟಿಗ ಜಗತ್ತಿನ ನಂಬರ್ 1 ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಆತ ಬೇರೆ ಯಾರೂ ಅಲ್ಲ, ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ. 2023 ರ ವಿಶ್ವಕಪ್’ನಲ್ಲಿ ತಮ್ಮ ಸ್ಥಿರ ಬೌಲಿಂಗ್’ನೊಂದಿಗೆ ವಿಶ್ವದ ಅತ್ಯುತ್ತಮ ಬೌಲರ್ ಎಂದು ಜಗತ್ತಿಗೆ ಸಾಬೀತುಪಡಿಸಿದ್ದಾರೆ.
ವಿಶ್ವದಲ್ಲಿ ತನ್ನ ಕೀರ್ತಿ ಪಸರಿಸಿದ ಮೊಹಮ್ಮದ್ ಶಮಿಗೆ ಹೆಸರು, ಸ್ಥಾನಮಾನ ಗಳಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅಮ್ರೋಹಾದ ಹಳ್ಳಿಯಾದ ಸಹಸ್ಪುರ್ ಅಲಿ ನಗರದ ಸಾಧಾರಣ ಕುಟುಂಬದಲ್ಲಿ ಜನಿಸಿದ ಶಮಿ, ಅವರ ತಂದೆ ತೌಸಿಫ್ ಅಲಿ ಕೃಷಿಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ಶಮಿಗೆ ಮೊದಲಿನಿಂದಲೂ ಕ್ರಿಕೆಟ್’ನಲ್ಲಿ ಆಸಕ್ತಿ.
ಬಡ ಕುಟುಂಬದಲ್ಲಿ ಜನಿಸಿದ ತೌಸಿಫ್, ಜವಾಬ್ದಾರಿಗಳ ನಡುವೆ ತಮ್ಮ ಕನಸನ್ನು ತೊರೆದರು. ಆದರೆ ತನ್ನ ಮಕ್ಕಳ ಕನಸನ್ನು ನನಸು ಮಾಡಲು ಮುಂದಾದ ಅವರು, ಮಗನಿಗಾಗಿ ಮೈದಾನದಲ್ಲಿಯೇ ಸಿಮೆಂಟ್ ಪಿಚ್ ಮಾಡಿಸಿದ್ದರು. ಇದರ ನಂತರ ಕೆಲ ವರ್ಷಗಳ ಕಾಲ ಸಾಕಷ್ಟು ತರಬೇತಿ ಪಡೆದರು.
15 ನೇ ವಯಸ್ಸಿನಲ್ಲಿ, ಅವರ ತಂದೆ ಶಮಿಯನ್ನು ಉತ್ತರ ಪ್ರದೇಶದ ಅಕಾಡೆಮಿಗೆ ಕರೆದೊಯ್ದರು. ಆದರೆ ಅವರ ಸಾಮರ್ಥ್ಯದ ಹೊರತಾಗಿಯೂ, 19 ವರ್ಷದೊಳಗಿನವರಿಗೆ ಆಯ್ಕೆಯಾಗಲು ವಿಫಲರಾದರು. ಇದಾದ ಬಳಿಕ ಅವರ ಸಾಮರ್ಥ್ಯ ಕಂಡು ಕೋಚ್ ಕೋಲ್ಕತ್ತಾಗೆ ಕಳುಹಿಸಿದ್ದರು. ಕೋಚ್ನ ಸಲಹೆಯನ್ನು ಅನುಸರಿಸಿ, ಶಮಿ ಡಾಲ್ಹೌಸಿ ಕ್ರಿಕೆಟ್ ಕ್ಲಬ್ಗಾಗಿ ಆಡಲು ಪ್ರಾರಂಭಿಸಿದರು.
ಈ ಸಮಯದಲ್ಲಿ, ಬಂಗಾಳ ಕ್ರಿಕೆಟ್ ಸಂಸ್ಥೆಯ ಮಾಜಿ ಸಹಾಯಕ ಸಚಿನ್ ದೇವವ್ರತ್ ಅವರ ಬೌಲಿಂಗ್ನಿಂದ ಪ್ರಭಾವಿತರಾದರು. ಇದಾದ ಬಳಿಕ ಶಮಿಯನ್ನು ಮೋಹನ್ ಬಗಾನ್ ಕ್ಲಬ್ಗೆ ಕಳುಹಿಸಿದ್ದರು. ನಂತರ ಶಮಿ ಬಂಗಾಳದ ರಣಜಿ ತಂಡದಲ್ಲಿ ಸ್ಥಾನ ಪಡೆದರು. ನಂತರ 6 ಜನವರಿ 2012 ರ ದಿನ ಬಂದಿತು. ಶಮಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಬದುಕಿನ ಪಥವೇ ಬದಲಾಯಿತು.
ಇನ್ನು ಮೊಹಮ್ಮದ್ ಶಮಿಯ ಪ್ರೇಮ ಜೀವನ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಮಾಡೆಲಿಂಗ್ ಮಾಡುತ್ತಿದ್ದ ಹಸಿನ್ ಜಹಾನ್ ಎಂಬ ಮಹಿಳೆ ಐಪಿಎಲ್’ನಲ್ಲಿ ಕೆಕೆಆರ್ ತಂಡದ ಚಿಯರ್ ಲೀಡರ್ ಆಗಿದ್ದರು. ಈ ವೇಳೆ ಶಮಿ ಹಸೀನ್ ಜಹಾನ್’ಳನ್ನು ಭೇಟಿಯಾಗಿ ಕ್ರಮೇಣ ಅವರ ನಡುವೆ ಸ್ನೇಹ ಬೆಳೆದು ಯಾವಾಗ ಈ ಗೆಳೆತನ ಪ್ರೀತಿಗೆ ತಿರುಗಿದೆ ಎಂಬುದು ಗೊತ್ತಾಗಿರಲಿಲ್ಲ.
ಮೊಹಮ್ಮದ್ ಶಮಿ ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಹಸೀನ್ ಜಹಾನ್ ಅವರನ್ನು ಮದುವೆಯಾದರು. ಒಂದು ವರ್ಷದ ನಂತರ 17 ಜುಲೈ 2015 ರಂದು ಮುದ್ದಾದ ಮಗುವಿಗೆ ಶಮಿ ತಂದೆಯಾದರು. ಆದರೆ ಇದ್ದಕ್ಕಿದ್ದಂತೆ ಇಬ್ಬರ ನಡುವೆ ಕೆಲವು ಭಿನ್ನಾಭಿಪ್ರಾಯ ಉಂಟಾಯಿತು.
2018 ರಲ್ಲಿ ಹಸಿನ್ ಜಹಾನ್ ಮೊಹಮ್ಮದ್ ಶಮಿ ಮತ್ತು ಅವರ ಸಹೋದರರ ಮೇಲೆ ಹಲ್ಲೆ, ಅತ್ಯಾಚಾರ, ವೇಶ್ಯೆಯರ ಸಹವಾಸ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪ ಮಾಡಿ ಎಫ್ಐಆರ್ ದಾಖಲಿಸಿದರು. ಅಷ್ಟೇ ಅಲ್ಲ, ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪವನ್ನೂ ಮಾಡಿದ್ದರು.
2021 ರ ಟಿ20 ವಿಶ್ವಕಪ್ನ ಸೂಪರ್-12 ಹಂತದಲ್ಲಿ ಭಾರತ ತಂಡ ಪಾಕಿಸ್ತಾನದ ಕೈಯಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಬಲಿಯಾಗಬೇಕಾಯಿತು. ಶಮಿಯನ್ನು ದೇಶದ್ರೋಹಿ ಎಂದು ಕರೆದರು. ಅವರ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೂಡ ಮಾಡಲಾಯಿತು. ಆದರೆ ಶಮಿ ಇದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ನಿರಂತರವಾಗಿ ಭಾರತಕ್ಕಾಗಿ 100 ಪ್ರತಿಶತವನ್ನು ನೀಡಿದರು.