Budh Gochar 2024: ಫೆಬ್ರುವರಿ 20 ರಿಂದ ಈ ಜನರ ಬಾಳಿನಲ್ಲಿ ಸುವರ್ಣ ದಿನಗಳ ಆರಂಭ, ಲಕ್ಷ್ಮಿ ಕೃಪೆಯಿಂದ ಅಪಾರ ಧನಪ್ರಾಪ್ತಿ ಯೋಗ!

Budh Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಕುಂಭ ರಾಶಿಗೆ ಬುಧನ ಪ್ರವೇಶ ನೆರವೇರುತ್ತಿದೆ. ಇದರಿಂದ ಒಟ್ಟು ನಾಲ್ಕು ರಾಶಿಗಳ ಜನರ ಜೀವನದಲ್ಲಿ ಲಕ್ಷ್ಮಿ ನಾರಾಯಣ ಕೃಪೆಯಿಂದ ಕುಬೇರ ನಿಧಿ ಪ್ರಾಪ್ತಿ ಯೋಗ ರಚನೆಯಾಗಲಿದೆ. (Spiritual News In Kannada)
 

Marcury Transit 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ಬುಧ ಮಕರ ರಾಶಿಯಲ್ಲಿ ಸಂಚರಿಸುತ್ತಿದ್ದು, ಫೆಬ್ರುವರಿ 2024 ರಂದು ಆತ ಕುಂಭ ರಾಶಿಯಲ್ಲಿ ಗೋಚರಿಸಲಿದ್ದಾನೆ. ಕುಂಭ ರಾಶಿಯ ಮೇಲೆ ಶನಿಯ ಆಧಿಪತ್ಯವಿದೆ. ಹಾಗೂ ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಹಾಗೂ ಬುಧನ ಮಧ್ಯ ಸ್ನೇಹ ಭಾವದ ಸಂಬಂಧವಿದೆ. ಹೀಗಾಗಿ ಬುಧನ ಈ ಗೋಚರ ಕೆಲ ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೋಳ್ಳೋಣ, (Spiritual News In Kannada)

 

ಇದನ್ನೂ ಓದಿ-Chaturgrahi Yog 2024: ನೂರು ವರ್ಷಗಳ ಬಳಿಕ ರಚನೆಯಾಗುತ್ತಿದೆ ಚತುರ್ಗ್ರಹಿ ಯೋಗ, ಈ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಉನ್ನತಿಯ ಯೋಗ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

Budh Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಕುಂಭ ರಾಶಿಗೆ ಬುಧನ ಪ್ರವೇಶ ನೆರವೇರುತ್ತಿದೆ. ಇದರಿಂದ ಒಟ್ಟು ನಾಲ್ಕು ರಾಶಿಗಳ ಜನರ ಜೀವನದಲ್ಲಿ ಲಕ್ಷ್ಮಿ ನಾರಾಯಣ ಕೃಪೆಯಿಂದ ಕುಬೇರ ನಿಧಿ ಪ್ರಾಪ್ತಿ ಯೋಗ ರಚನೆಯಾಗಲಿದೆ. (Spiritual News In Kannada)  

2 /6

ಮಿಥುನ ರಾಶಿ: ಬುಧ ನಿಮ್ಮ ರಾಶಿಯ ಅಧಿಪತಿಯಾಗಿದ್ದಾನೆ. ಇದಲ್ಲದೆ ಆತ ನಿಮ್ಮ ಜಾತಕದ ನವಮ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ಈ ಅವಧಿಯಲ್ಲಿ ನಿಮ್ಮ ಅದೃಷ್ಟದಲ್ಲಿ ಭಾರಿ ಹೊಳಪು ಕಾಣಲು ಸಿಗಲಿದೆ. ಧಾರ್ಮಿಕ ಹಾಗೂ ಮಂಗಳ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ. ವ್ಯಾಪಾರದಲ್ಲಿ ಹಗಲು ರಾತ್ರಿ ಎನ್ನದೆ ಲಾಭ ಗಳಿಕೆ ಮಾಡುವಿರಿ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ದೇಶ ವಿದೇಶಕ್ಕೆ ಯಾತ್ರೆ ಜರುಗುವ ಸಾಧ್ಯತೆ ಇದ್ದು, ಅದು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ವಿದೇಶದಲ್ಲಿ ವ್ಯಾಸಂಗ ಮಾಡಬಯಸುವವರ ಆಸೆ ಈಡೇರಲಿದೆ.   

3 /6

ಮಕರ ರಾಶಿ: ಬುಧ ನಿಮ್ಮ ಗೋಚರ ಜಾತಕದ ಧನ ಹಾಗೂ ವಾಣಿಯ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನಲಾಭ ಉಂಟಾಗಲಿದ್ದು, ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆ ಕಂಡುಬರಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಮಾತಿಯಿಂದ ಇತರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುವಿರಿ. ವ್ಯಾಪಾರಿಗಳ ಸಿಲುಕಿಬಿದ್ದ ಹಣ ಅವರಿಗೆ ವಾಪಸ್ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ  ಭಾರಿ ಹೆಚ್ಚಳವನ್ನು ನೀವು ಕಾಣುವಿರಿ. ವಿಶೇಷ ವ್ಯಕ್ತಿಯ ಜೊತೆಗೆ ನಿಮ್ಮ ಪರಿಚಯದ ಸಾಧ್ಯತೆ ಇದೆ.   

4 /6

ಕುಂಭ ರಾಶಿ: ಬುಧ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮ್ಮ ಕೆಲಸ ಮಾಡುವ ಶೈಲಿಯಲ್ಲಿ ಸುಧಾರಣೆಯನ್ನು ನೀವು ಗಮನಿಸಬಹುದು. ಈ ಅವಧಿಯಲ್ಲಿ ನೀವು ಕೆಲಸ ಹಾಗೂ ಆರೋಗ್ಯಕ್ಕೆ ನಿಮ್ಮ ಮೊದಲ ಆದ್ಯತೆಯನ್ನು ಕೊಡುವಿರಿ. ಹಣಗಳಿಕೆಗೆ ನಿಮಗೆ ಸಾಕಷ್ಟು ಅವಕಾಶಗಳು ಒದಗಿಬರುವ ಕಾರಣ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆ ಕಂಡುಬರಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿದೆ. ವಿವಾಹಿತರ ವೈವಾಹಿಕ ಜೀವನ ಅದ್ಭುತವಾಗಿರಲಿದೆ. ಪಾರ್ಟ್ನರ್ಶಿಪ್ ನಲ್ಲಿ ವ್ಯಾಪಾರ ಮಾಡುವವರಿಗೆ ಲಾಭ ಸಿಗಲಿದೆ.   

5 /6

ಮೇಷ ರಾಶಿ: ನಿಮ್ಮ ಪಾಲಿಗೆ ಬುಧನ ಈ ಗೋಚರ ಒಂದು ವರದಾನ ಸಾಬೀತಾಗಲಿದೆ. ಏಕೆಂದರೆ ಬುಧ ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಸಂಚರಿಯಲಿದ್ದಾನೆ. ಇದರಿಂದ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳ ಸಂಭವಿಸಲಿದೆ. ಇದರ ಜೊತೆಗೆ ಆದಾಯದ ಹೊಸ ಮಾರ್ಗಗಳು ಕೂಡ ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ. ಈ ಅವಧಿಯಲ್ಲಿ ನೀವು ಮಾಡಿದಂತಹ ಹಳೆ ಹೂಡಿಕೆಗಳಿಂದಲೂ ಕೂಡ ನಿಮಗೆ ಲಾಭ ಸಿಗಲಿದೆ. ನೌಕರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದ್ದು, ನಿಮಗೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಷೇರು ಮಾರುಕಟ್ಟೆ, ಲಾಟರಿ ವ್ಯವಹಾರಗಳಿಂದಲೂ ಕೂಡ ಅಪಾರ ಧನಲಾಭ ಸಿಗಲಿದೆ  

6 /6

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)