Budh Vakri In January 2022 - ಜಾತಕದಲ್ಲಿನ ಬುಧ ಗ್ರಹವು ಬುದ್ಧಿಮತ್ತೆ, ವ್ಯವಹಾರ, ಹಣ, ವೃತ್ತಿಜೀವನದ ಮೇಲೆ ಪರಿಣಾಮ (Vakri Budh Impact) ಬೀರುತ್ತದೆ, ಜನವರಿ 14, 2022 ರಿಂದ ಬುಧ ವಕ್ರ ನಡೆ ಅನುಸರಿಸಲಿದೆ. ಬುಧ ಗ್ರಹವು ಫೆಬ್ರವರಿ 4 ರವರೆಗೆ ಅಂದರೆ 21 ದಿನಗಳವರೆಗೆ ಹಿಮ್ಮುಖವಾಗಿ ಚಲಿಸಲಿದೆ,
ನವದೆಹಲಿ: Budh Vakri In January 2022 - ಜಾತಕದಲ್ಲಿನ ಬುಧ ಗ್ರಹವು ಬುದ್ಧಿಮತ್ತೆ, ವ್ಯವಹಾರ, ಹಣ, ವೃತ್ತಿಜೀವನದ ಮೇಲೆ ಪರಿಣಾಮ (Vakri Budh Impact) ಬೀರುತ್ತದೆ, ಜನವರಿ 14, 2022 ರಿಂದ ಬುಧ ವಕ್ರ ನಡೆ ಅನುಸರಿಸಲಿದೆ. ಬುಧ ಗ್ರಹವು ಫೆಬ್ರವರಿ 4 ರವರೆಗೆ ಅಂದರೆ 21 ದಿನಗಳವರೆಗೆ ಹಿಮ್ಮುಖವಾಗಿ ಚಲಿಸಲಿದೆ, ಇದು 4 ರಾಶಿಗಳ (Zodiac Signs) ಜನರ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಈ ಸಮಯದಲ್ಲಿ, ಅವರು ವೃತ್ತಿ-ವ್ಯಾಪಾರದಿಂದ ಹಿಡಿದು ಅನೇಕ ವಿಷಯಗಳಲ್ಲಿ ತೊಂದರೆಗಳನ್ನು (Negative Impact Of Vakri Budh) ಎದುರಿಸಬೇಕಾಗಲಿದೆ.
ಇದನ್ನೂ ಓದಿ-Numerology: ಶನಿಯೊಂದಿಗೆ ನೇರ ಸಂಬಂಧವನ್ನು ಹೊಂದಿದ್ದಾರೆ ಈ ದಿನಾಂಕಗಳಲ್ಲಿ ಜನಿಸಿದ ಜನ
(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಮೇಷ - ಬುಧನ ಈ ವಕ್ರಿ ನಡೆ ಮೇಷ ಜಾತಕದವರ ಮೇಲೆ ಕೆಲಸ ಮತ್ತು ಒತ್ತಡದಲ್ಲಿ ಹೆಚ್ಚಳ ಮಾಡಲಿದೆ. ಈ ಕಾರಣದಿಂದ ಬಾಸ್ ಅಥವಾ ಸಹೋದ್ಯೋಗಿಗಳ ಜೊತೆಗೆ ವಾಗ್ವಾದ ನಡೆಯುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿಯೂ ಕೂಡ ಇರುಸು-ಮುರುಸು ಇರಲಿದೆ.
2. ವೃಷಭ - ವೃಷಭ ರಾಶಿಯ ಜನರಿಗೆ ಈ ಅವಧಿಯಲ್ಲಿ ಭಾಗ್ಯದ ಸಾಥ್ ಸಿಗುವುದಿಲ್ಲ. ಹೀಗಾಗಿ ನಡೆಯುತ್ತಿರುವುದನ್ನು ಹಾಗೆಯೇ ನಡೆಯಲು ಬಿಡಿ. ಹೊಸದಾಗಿ ಏನನ್ನು ಪ್ರಯತ್ನಿಸಲು ಹೋಗಬೇಡಿ. ತಂದೆಯ ಜೊತೆಗೆ ಯೋಚಿಸಿ ಮಾತುಕತೆ ನಡೆಸಿ. ಧೈರ್ಯದಿಂದ ಮುಂದುವರೆಯಿರಿ. ಸಮಯ ಖಂಡಿತ ಬದಲಾಗಲಿದೆ.
3. ಕನ್ಯಾ - ಬುಧನ ವಕ್ರ ನಡೆ ಕನ್ಯಾ ರಾಶಿಯ ಜಾತಕದವರ ಕುಟುಂಬ ಜೀವನದಲ್ಲಿ ಸಮಸ್ಯೆಗಳನ್ನು ತರಲಿದೆ. ಕುಟುಂಬದಲ್ಲಿ ಯಾರ ಜೊತೆಗೂ ಕೂಡ ವಾಗ್ವಾದ ನಡೆಸಬೇಡಿ. ಅದರಲ್ಲೂ ವಿಶೇಷವಾಗಿ ಸಂಗಾತಿಯ ಜೊತೆಗೆ ವಾದ-ವಿವಾದಕ್ಕೆ ಇಳಿಯಬೇಡಿ. ಹೂಡಿಕೆಯಿಂದ ದೂರ ಉಳಿಯಿರಿ.
4. ವೃಶ್ಚಿಕ - ಸಮಯಕ್ಕೆ ತಕ್ಕಂತೆ ಮುಂದಕ್ಕೆ ಸಾಗಿ. ಬಲವಂತವಾಗಿ ಅತ್ತಿತ್ತ ಕಾಲು ಬಡಿಯಲು ಪ್ರಯತ್ನಿಸಬೇಡಿ. ಅದರಿಂದ ಯಾವುದೇ ಲಾಭ ಸಿಗುವುದಿಲ್ಲ. ಈ ಅವಧಿಯಲ್ಲಿ ಆದಷ್ಟು ಪ್ರವಾಸ ತಪ್ಪಿಸಿ. ಹೂಡಿಕೆ ಬೇಡ, ಕುಟುಂಬದಲ್ಲಿ ಯಾರಿಗಾದರು ಅನಾರೋಗ್ಯ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನಿರ್ಲಕ್ಷ ಧೋರಣೆ ತಳೆಯಬೇಡಿ.
5. ವಕ್ರ ನಡೆಯಲ್ಲಿರುವ ಬುಧ ಬುದ್ಧಿ ತಿರುಗಿಸುತ್ತಾನೆ - ಬುಧನ ವಕ್ರ ನಡೆಯ ಪ್ರಭಾವಕ್ಕೆ ಒಳಗಾದ ವ್ಯಕ್ತಿಯ ಬುದ್ಧಿಯನ್ನು ಬುಧ ತಿರುಗಿಸುತ್ತಾನೆ. ಬೌದ್ಧಿಕವಾಗಿ ಇಕ್ಕಟ್ಟಿಗೆ ಸಿಲುಕಿದ ಅನುಭವ ಅವರಿಗಾಗುತ್ತದೆ. ಅವರ ನಿರ್ಣಯ ಕ್ಷಮತೆ ಹಾಗೂ ವ್ಯವಹಾರದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತದೆ. ಈ ಅವಧಿಯಲ್ಲಿ ಅವರು ಕೈಗೊಳ್ಳುವ ನಿರ್ಧಾರಗಳು ಅವರನ್ನು ಒಳಗೊಂಡಂತೆ ಇತರರನ್ನು ಸಹ ಇಕ್ಕಟ್ಟಿಗೆ ಸಿಲುಕಿಸುತ್ತವೆ.