ಅನುಷ್ಕಾಗಿಂತಲೂ ವಿರಾಟ್ ಸಖತ್ ಕ್ಲೋಸ್ ಆಗಿರೋದು ಇವರ ಜೊತೆ.. ಕೊಹ್ಲಿಯ ಆ ಬೆಸ್ಟ್ ಫ್ರೆಂಡ್ ಯಾರು ಗೊತ್ತಾ?

Virat Kohlis childhood friend Vartik Tihara: ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟಿಗನಲ್ಲ, ಸಾವಿರ ಕೋಟಿ ಸಾಮ್ರಾಜ್ಯಕ್ಕೆ ಏಕೈಕ ಒಡೆಯ ಕೂಡ ಹೌದು. ಒಂದು ವರ್ಷದಲ್ಲಿ ಕೋಟ್ಯಾಂತರ ರೂ, ಗಳಿಕೆ ಮಾಡುವ ಕೊಹ್ಲಿ, ಇದೀಗ 1050 ರೂ. ನಿವ್ವಳ ಮೌಲ್ಯ ಹೊಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಮಾತ್ರವಲ್ಲದೆ, ಬ್ಯುಸಿನೆಸ್ ಮೂಲಕವೂ ಗಮನ ಸೆಳೆದಿದ್ದಾರೆ. ಅವರ ಅತ್ಯಂತ ಪ್ರಸಿದ್ಧ ಮತ್ತು ಲಾಭದಾಯಕ ವ್ಯಾಪಾರೋದ್ಯಮವೆಂದರೆ ರೆಸ್ಟೋರೆಂಟ್ ಬ್ರಾಂಡ್ One8. ಇದು ಅವರ ಜರ್ಸಿ ಸಂಖ್ಯೆ 18ನ್ನು ಸೂಚಿಸುತ್ತದೆ.

2 /7

ಅಂದಹಾಗೆ ಈ ರೆಸ್ಟೋರೆಂಟ್’ನ್ನು ನಡೆಸುತ್ತಿರುವುದು ವರ್ತಿಕ್ ತಿಹಾರಾ ಎಂಬವರು. ವರ್ತಿಕ್ ಬೇರಾರು ಅಲ್ಲ, ವಿರಾಟ್ ಅವರ ಬಾಲ್ಯದ ಗೆಳೆಯ.

3 /7

ವರ್ತಿಕ್ ತಿಹಾರಾ ಮತ್ತು ವಿರಾಟ್ ಕೊಹ್ಲಿ ಸುಮಾರು ಎರಡು ದಶಕಗಳಿಂದ ಗೆಳೆಯರಾಗಿದ್ದಾರೆ. ಅಂದಹಾಗೆ ಕೊಹ್ಲಿಯಂತೆ ತಿಹಾರಾ ಕೂಡ ಕ್ರಿಕೆಟಿಗನಾಗಿ ವೃತ್ತಿ ಜೀವನ ಆರಂಭಿಸಿದ್ದರು.

4 /7

ವರ್ತಿಕ್ ತಿಹಾರಾ ದೆಹಲಿಯ ಅಂಡರ್-17 (U17) ಕ್ರಿಕೆಟ್ ತಂಡದಲ್ಲಿದ್ದರು. ಅಲ್ಲಿಯೇ ವಿರಾಟ್ ಕೊಹ್ಲಿಯನ್ನು ಮೊದಲು ಭೇಟಿಯಾಗಿದ್ದರು. ಅದಾದ ಬಳಿಕ ಇಬ್ಬರ ನಡುವೆ ಆತ್ಮೀಯ ಸ್ನೇಹ ಬೆಳೆಯಿತು. ತಿಹಾರಾ ಕ್ರಿಕೆಟ್‌’ನ ಹೊರಗೆ ತನ್ನ ಪರಿಧಿಯನ್ನು ವಿಸ್ತರಿಸಲು ನಿರ್ಧರಿಸಿದರೆ, ಕೊಹ್ಲಿ ಭಾರತ ತಂಡದ ಅಗ್ರಸ್ಥಾನಕ್ಕೆ ಏರಿದರು.

5 /7

ಅಂದಹಾಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ವಿವಾಹಕ್ಕೆ ಆಹ್ವಾನಿಸಲ್ಪಟ್ಟ ಏಕೈಕ ಕ್ರಿಕೆಟಿಗ ಎಂದರೆ ವರ್ತಿಕ್ ತಿಹಾರಾ. ಇನ್ನು ವರ್ತಿಕ್ ತಿಹಾರಾ ಅವರು ಟ್ರೂ ಪ್ಯಾಲೇಟ್ ಹಾಸ್ಪಿಟಾಲಿಟಿ ಎಂಬ ತಮ್ಮದೇ ಆದ ಆತಿಥ್ಯ ಸಂಸ್ಥೆಯನ್ನು ತೆರೆದಿದ್ದರು.

6 /7

ವರ್ತಿಕ್ ತಿಹಾರಾ ಅವರ ಟ್ರೂ ಪ್ಯಾಲೇಟ್ ಹಾಸ್ಪಿಟಾಲಿಟಿಯು One8 ಸಹ-ಮಾಲೀಕತ್ವವನ್ನು ಹೊಂದಿದೆ. ಇದು ದೆಹಲಿ NCR, ಪುಣೆ ಮತ್ತು ಬೆಂಗಳೂರಿನಲ್ಲಿ ಸ್ಥಾಪನೆಯಾಗಿದೆ.

7 /7

ಕೊಹ್ಲಿ ಸ್ಥಾಪಿಸಿದ One8 ಮತ್ತು ಅವರ ಸ್ನೇಹಿತ ತಿಹಾರಾ ನಡೆಸುತ್ತಿರುವ ಬ್ರ್ಯಾಂಡ್ ಈಗ 112 ಕೋಟಿ ರೂಪಾಯಿಗಳ ಮೌಲ್ಯವನ್ನು ಹೊಂದಿದೆ ಎಂದು ಬಹು ಮಾಧ್ಯಮ ವರದಿಗಳು ತಿಳಿಸಿವೆ. One8 ಕಮ್ಯೂನ್ ದೆಹಲಿಯ ಏರೋಸಿಟಿಯಲ್ಲಿ ಅದ್ದೂರಿ ಮತ್ತು ಐಷಾರಾಮಿ ರೆಸ್ಟೋರೆಂಟ್ ಆಗಿದೆ.